»   » ಅವನ ಜೊತೆ ನಾನು ಮಲಗಿಲ್ಲ ಎಂದ ಮಲಿಕ್

ಅವನ ಜೊತೆ ನಾನು ಮಲಗಿಲ್ಲ ಎಂದ ಮಲಿಕ್

By: ರವಿಕಿಶೋರ್
Subscribe to Filmibeat Kannada

ಕನ್ನಡದ 'ಸಿಲ್ಕ್' ಸಖತ್ ಹಾಟ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ವೀಣಾ ಮಲಿಕ್ ಈಗ ಇನ್ನೊಂದು ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದಾಗ ಅಲ್ಲಿಯೇ ಅಶ್ಮಿತ್ ಪಟೇಲ್ ಗೆ ಕ್ಲೋಸ್ ಆಗಿದ್ದರು.

ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ಯಾವಾಗಲೂ ಅಂಟಿಕೊಂಡೇ ಕಾಣಿಸಿಕೊಳ್ಳುತ್ತಿದ್ದರು. ಇವರಿಬ್ಬರ ಬಗ್ಗೆ ಆಗಲೇ ಭಾರಿ ಗುಸುಗುಸು ಮಾತುಗಳು ಕೇಳಿಬಂದಿದ್ದವು. ಆಗ ಸುಮ್ಮನಿದ್ದ ವೀಣಾ ಮಲಿಕ್ ಈಗ ಬಾಯ್ಬಿಟ್ಟಿದ್ದಾರೆ. ಅಶ್ಮಿತ್ ಗೆ ನಾನು ಕ್ಲೋಸ್ ಆಗಿದ್ದದ್ದು ನಿಜ...


ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ನಮ್ಮಿಬ್ಬರ ಜೊತೆ ಗೆಳೆತನ ಇತ್ತು. ಅದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗೋಣ ಎಂದಿದ್ದ. ಫೋನ್ ನಲ್ಲಿ ಒಂದಷ್ಟು ಹರಟೆ, ಆಗಾಗ ಭೇಟಿಯೂ ಆಗುತ್ತಿತ್ತು.

ನಮ್ಮಿಬ್ಬರ ಗೆಳೆತನ ಅಷ್ಟಕ್ಕೇ ಸೀಮಿತವಾಗಿತ್ತು. ಆದರೆ ಅಪ್ಪಿತಪ್ಪಿಯೂ ನಾನು ಯಾವತ್ತೂ ಆತನ ಜತೆ ಮಲಗಿಲ್ಲ ಎಂದು ವೀಣಾ ಮಲಿಕ್ ಹೇಳಿದ್ದಾರೆ. ಆದರೆ ಅಶ್ಮಿತ್ ನನ್ನ ಅಂಡರ್ ವೇರ್ ತೊಳೆದಿದ್ದ ಎಂದೂ ಹೇಳಿದ್ದಾರೆ. ಈಗ್ಯಾಕೆ ಈ ವಿಚಾರ ಎಂಬುದು ಅರ್ಥವಾಗದೆ ಕೆಲವರ ತಲೆ ಗಿರ್ರನೆ ಸುತ್ತುತ್ತಿದೆ. ಸದ್ಯಕ್ಕೆ ಇವರಿಬ್ಬರೂ ಸೂಪರ್ ಮಾಡೆಲ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

English summary
Talking to a news daily, the actress has revealed that her alleged beau, Ashmit Patel, used to wash her lingerie while the duo were in the ‘Bigg Boss’ house almost 3 years ago. Veena, who was recently seen sharing the screen space with Ashmit Patel in ‘Supermodel’, was asked whether the duo’s fallout had any effect on their onscreen rapport. 
Please Wait while comments are loading...