»   » ಮದುವೆಗೂ ಮುನ್ನ ಗರ್ಭಿಣಿಯಾಗುತ್ತಿರುವ ಶ್ರುತಿ

ಮದುವೆಗೂ ಮುನ್ನ ಗರ್ಭಿಣಿಯಾಗುತ್ತಿರುವ ಶ್ರುತಿ

Posted By: ರವಿಕಿಶೋರ್
Subscribe to Filmibeat Kannada

ಮದುವೆಗೆ ಮುನ್ನವೇ ಗರ್ಭಿಣಿಯಾದರೆ ಅಂತಹವರನ್ನು ಸಮಾಜ ಯಾವ ದೃಷ್ಟಿಯಲ್ಲಿ ನೋಡುತ್ತದೆ ಎಂಬುದು ಗೊತ್ತೇ ಇದೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದೆಲ್ಲಾ ಸರ್ವೇ ಸಾಮಾನ್ಯ. ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮ ದೇಶಕ್ಕೂ ಅಡಿಯಿಟ್ಟ ಪರಿಣಾಮವೋ ಏನೋ ಮದುವೆಗೂ ಮುನ್ನ ಗರ್ಭಿಣಿಯಾಗುವುದು ಈಗ ಮಾಮೂಲಿ ಸಂಗತಿಯಾಗಿದೆ.

ಬಹಳ ಮುಖ್ಯ ಸಂಗತಿ ಎಂದರೆ ಪಾಶ್ವಿಮಾತ್ಯ ಸಂಸ್ಕೃತಿ ನಮ್ಮ ಸಮಾಜದಲ್ಲಿ ವ್ಯಾಪಿಸುವಂತೆ ಮಾಡುತ್ತಿರುವುದರಲ್ಲಿ ಸಿನಿಮಾ ತಾರೆಗಳ ಕೊಡುಗೆಯೂ ಇದೆ. ಸಿನಿಮಾ ತಾರೆಗಳು ಮದುವೆಗೂ ಮುನ್ನ ಗರ್ಭಿಣಿಯಾಗುವಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ. ಹಾಲಿವುಡ್ ತಾರೆಗಳ ರೀತಿಯಲ್ಲಿ ಮದುವೆಗೂ ಮುನ್ನ ಗರ್ಭಿಣಿಯಾಗಿ ಗರ್ವದಿಂದ ಬೀಗುತ್ತಿದ್ದಾರೆ. [ಕಮಲ್ ಸಂಬಂಧದ ಬಗ್ಗೆ ಮೌನ ಮುರಿದ ಗೌತಮಿ]

ದಕ್ಷಿಣದ ಖ್ಯಾತ ತಾರೆ ಶ್ರುತಿ ಹಾಸನ್ ಅವರ ತಂದೆತಾಯಿ ಕಮಲ್ ಹಾಸನ್ - ಸಾರಿಕಾ ದಂಪತಿಗಳು ಮದುವೆಗೂ ಮುನ್ನವೇ ಶ್ರುತಿ ಅವರಿಗೆ ಜನ್ಮ ನೀಡಿದ್ದರು. ಇದೀಗ ಶ್ರುತಿ ಸಹ ಅದೇ ದಾರಿಯಲ್ಲಿ ಮುಂದಡಿ ಇಡಲು ಹೊರಟಿದ್ದಾರೆ. ಮದುವೆಗೂ ಮುನ್ನವೇ ತಾನೂ ಗರ್ಭಿಣಿಯಾಗಬೇಕು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಮ್ಮ ತಂದೆತಾಯಿಯದು ಬಹಳ ಸುಂದರವಾದ ದಾಂಪತ್ಯ ಜೀವನ. ಅವರಿಬ್ಬರೂ ಜೊತೆಯಾಗಿದ್ದರೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತಿತ್ತು. ಅವರ ರೀತಿಯಲ್ಲೇ ನಾನೂ ಮದುವೆಗೂ ಮುನ್ನ ಮಗುವೊಂದನ್ನು ಹಡೆಯಬೇಕೆಂದಿದ್ದೇನೆ. ಆ ಬಳಿಕವಷ್ಟೇ ಮದುವೆ ಆಲೋಚನೆ ಎಂದಿದ್ದಾರೆ ಶ್ರುತಿ ಹಾಸನ್. ಮದುವೆಗೂ ಮುನ್ನ ಗರ್ಭಿಣಿಯರಾದ ತಾರೆಗಳ ಪಟ್ಟಿ ಇಲ್ಲಿದೆ ನೋಡಿ.

ಮದುವೆಗೂ ಮುನ್ನ ಶ್ರೀದೇವಿ ತುಂಬು ಗರ್ಭಿಣಿ

ಬಾಲಿವುಡ್ ಹೀರೋಯಿನ್ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಅವರನ್ನು ಎರಡನೇ ಮದುವೆಯಾಗಿದ್ದು ಗೊತ್ತೇ ಇದೆ. ಮದುವೆಗೂ ಮುನ್ನವೇ ಶ್ರೀದೇವಿ ಗರ್ಭಿಣಿಯಾಗಿದ್ದರು. ಮದುವೆ ಸಮಯಕ್ಕೆ ಶ್ರೀದೇವಿ ಏಳು ತಿಂಗಳ ತುಂಬು ಗರ್ಭಿಣಿ.

ಕಲ್ಯಾಣಕ್ಕೂ ಮುನ್ನವೇ ರೇಣು ಗರ್ಭವತಿ

ಇನ್ನು ಟಾಲಿವುಡ್ ಹೀರೋಯಿನ್ ರೇಣು ದೇಶಾಯ್ ನಟ ಪವನ್ ಕಲ್ಯಾಣ್ ಸಹಜೀವನ ನಡೆಸುತ್ತಿದ್ದರು. ಮದುವೆಗೂ ಮುನ್ನವೇ ಮಗುವಿನ ತಾಯಿಯಾಗಿದ್ದರು. ಆ ಬಳಿಕ ಪವನ್ ಕಲ್ಯಾಣ್ ಜೊತೆ ಕಲ್ಯಾಣ ನಡೆಯಿತು.

ಕೊಂಕಣಾ ಸೇನ್ ಕಥೆಯೂ ಅದೇ

ಬಾಲಿವುಡ್ ನಟಿ ಕೊಂಕಣಾ ಸೇನ್ ತನ್ನ ಪ್ರಿಯಕರ ರಣವೀರ್ ಶೋರೆಯನ್ನು ಕೈಹಿಡಿದ ಕಥೆ ಗೊತ್ತೇ ಇದೆ. ಮದುವೆ ಹಸೆಮಣೆಯಲ್ಲಿ ಕುಳಿತಾದ ಅವರು ಆರು ತಿಂಗಳ ಗರ್ಭಿಣಿ ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಮದುವೆಗೂ ಮುನ್ನ ಮಹಿಮಾ ಚೌಧರಿ

ಬಾಲಿವುಡ್ ಹೀರೋಯಿನ್ ಮಹಿಮಾ ಚೌಧರಿ ಸಹ ಅಷ್ಟೇ ಮದುವೆಯಾದಾಗ ಗರ್ಭಿಣಿಯಾಗಿದ್ದರು.

ಅನೌಷ್ಕ ಶರ್ಮಾ ಮಡಿಲಲ್ಲಿ ಮಗು

ಖ್ಯಾತ ಸಿತಾರ್ ವಾದಕ ರವಿಶಂಕರ್ ಅವರ ಪುತ್ರಿ ಅನೌಷ್ಕ ಶರ್ಮಾ ಅವರು ತನ್ನ ಬಾಯ್ ಫ್ರೆಂಡ್, ಬ್ರಿಟೀಷ್ ಫಿಲ್ಮ್ ಮೇಕರ್ ಜಿಯಾ ರೈಟ್ ಕೈಹಿಡಿಯುವ ವೇಳೆಗೆ ಹೊಟ್ಟೆಯಲ್ಲಿ ಮಗು ಕಿಲಕಿಲ ಎಂದು ನಗುತ್ತಿತ್ತು.

ಸಾರಿಕಾ ಮದುವೆಗೂ ಮುನ್ನ ಒಡಲಲ್ಲಿ ಶ್ರುತಿ

ಶ್ರೀದೇವಿ ತರಹ ನಟಿ ಸಾರಿಕಾ ಸಹ ಕಮಲ್ ಹಾಸನ್ ಅವರನ್ನು ಎರಡನೇ ಮದುವೆಯಾದರು. ಮದುವೆಗೂ ಮುನ್ನ ಅವರ ಒಡಲಲ್ಲಿ ಶ್ರುತಿ ಹಾಸನ್ ಇದ್ದರು.

ಅರೋರಾ ಮದುವೆಯಾಗಿದ್ದೆ ಗರ್ಭವತಿಯಾದ ಬಳಿಕ

ಬಾಲಿವುಡ್ ಹೀರೋಯಿನ್ ಅಮೃತಾ ಅರೋರಾ ತನ್ನ ಬಾಯ್ ಫ್ರೆಂಡ್ ಶಕೀಲ್ ಲಡಕ್ ಅವರನ್ನು ಕೈಹಿಡಿಯಲು ಕಾರಣ ಮದುವೆಗೂ ಮುನ್ನವೇ ಅವರು ಗರ್ಭಿಣಿಯಾಗಿದ್ದರು ಎಂಬ ಸುದ್ದಿ ಆಗ ಹಬ್ಬಿತ್ತು.

ಅವಳಿ ಜವಳಿ ಹಡೆದು ಮದುವೆಯಾದ ಸೆಲೀನಾ

ಇನ್ನೊಬ್ಬ ಬಾಲಿವುಡ್ ಹೀರೋಯಿನ್ ಸೆಲೀನಾ ಜೇಟ್ಲೆ ಸಹ ಅಷ್ಟೇ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು. ತನ್ನ ಬಾಯ್ ಫ್ರೆಂಡ್ ಪೀಟರ್ ಹಗ್ ಅವರನ್ನು ವರಿಸುವುದಕ್ಕೂ ಮುನ್ನ ಅವರ ಕೈಯಲ್ಲಿ ಅವಳಿ ಜವಳಿ ಮಕ್ಕಳಿದ್ದರು.

English summary
My parents were the most beautiful couple I have ever seen. Being around them at the time when they were together is such a wonderful feeling. Just like my parents, I wish to have a child out of marriage first and then tie the nuptial knot” Shruti Haasan said.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada