ಸತೀಶ್ ನೀನಾಸಂ 'ಪೆಟ್ರೋಮ್ಯಾಕ್ಸ್'ನಲ್ಲಿ ಇರಲ್ಲ ಅದಿತಿ ಪ್ರಭುದೇವ!
ಸತೀಶ್ ನೀನಾಸಂ ಮತ್ತು 'ನೀರ್‌ದೋಸೆ' ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾ ಆರಂಭದಲ್ಲಿ ಹೆಚ್ಚು ಸದ್ದು ಮಾಡ್ತಿದೆ. ಇತ್ತೀಚಿಗಷ್ಟೆ ನಟಿ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗಿತ್ತು.
ಆದ್ರೀಗ, ಅದಿತಿ ಈ ಚಿತ್ರದಲ್ಲಿ ನಟಿಸುವುದು ಅನುಮಾನ ಎಂಬ ಸುದ್ದಿ ಹೊರಬಿದ್ದಿದೆ. ಅದಿತಿ ಅವರ ಸತತ ಸಿನಿಮಾಗಳಲ್ಲಿ ನಟಿಸುತ್ತಿರುವ ಕಾರಣ ಈ ಚಿತ್ರಕ್ಕೆ ಡೇಟ್ಸ್ ಸಮಸ್ಯೆಯಾಗಲಿದೆ. ಹೀಗಾಗಿ, ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.
ಅದಿತಿ ಪ್ರಭುದೇವ ಮಾಡಲಿದ್ದಾರೆ ಎನ್ನಲಾಗಿದ್ದ ಪಾತ್ರಕ್ಕೆ ಈಗ ಹೊಸ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ಇದೆ. ಸತೀಶ್ ಜೊತೆ ಯಾರು ಹೀರೋಯಿನ್ ಆಗಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಕುತೂಹಲ ಸಹ ಅಷ್ಟೇ ಹೆಚ್ಚಾಗಿದೆ.

ವಿಜಯ್ ಪ್ರಸಾದ್ ನಿರ್ದೇಶನ ತೋತಾಪುರಿ ಚಿತ್ರದಲ್ಲಿ ಅದಿತಿ ನಟಿಸಿದ್ದರು. ಬಹುಶಃ ಈ ಚಿತ್ರದ ಶೂಟಿಂಗ್ ಮುಗಿದಿದೆ. ಈಗ ದಿಲ್ಮಾರ್, ಒಂಭತ್ತನೇ ದಿಕ್ಕು, ಚಾಂಪಿಯನ್, ಓಲ್ಡ್ ಮಂಕ್, ಗಜಾನನ ಅಂಡ್ ಗ್ಯಾಂಗ್ ಸಂತಹ ಚಿತ್ರಗಳು ಅದಿತಿ ಕೈಯಲ್ಲಿವೆ. ಇದೆಲ್ಲವೂ ಈ ಹಿಂದಿನ ಅಗ್ರಿಮೆಂಟ್ ಆಗಿರುವ ಕಾರಣ ಡೇಟ್ ಕ್ಲಾಶ್ ಆಗಬಹುದು ಎಂಬ ಮುಂದಾಲೋಚನೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ ತಿಂಗಳಿನಿಂದ ಪೆಟ್ರೋಮ್ಯಾಕ್ಸ್ ಸಿನಿಮಾ ಚಿತ್ರೀಕರಣ ಆರಂಭ ಮಾಡಲು ಚಿತ್ರತಂಡ ಯೋಜಿಸಿದೆ. ಇನ್ನುಳಿದಂತೆ ಕಲಾವಿದರ ತಂಡ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.


Click it and Unblock the Notifications











