For Quick Alerts
  ALLOW NOTIFICATIONS  
  For Daily Alerts

  ವಿಜಯ್ 65: ಯುವ ನಿರ್ದೇಶಕನಿಗೆ ಸಿಗುತ್ತಾ ಬಂಪರ್ ಅವಕಾಶ?

  |

  ತಮಿಳು ನಟ ವಿಜಯ್ ನಟಿಸಲಿರುವ 65ನೇ ಚಿತ್ರಕ್ಕೆ ಸದ್ಯ 'ದಳಪತಿ-65' ಎಂದು ಕರೆಯಲಾಗುತ್ತಿದೆ. ಈ ಚಿತ್ರಕ್ಕೆ ಎಆರ್ ಮುರುಗದಾಸ್ ಆಕ್ಷನ್ ಕಟ್ ಹೇಳಬೇಕಿತ್ತು. ಆದ್ರೆ, ಕಾರಣಾಂತರಗಳಿಂದ 'ಕತ್ತಿ' ನಿರ್ದೇಶಕ ಈ ಪ್ರಾಜೆಕ್ಟ್‌ನಿಂದ ಹೊರಹೋಗಿದ್ದಾರೆ ಎನ್ನಲಾಗಿದೆ.

  ಸ್ಕ್ರಿಪ್ಟ್ ವಿಚಾರದಲ್ಲಿ ವಿಜಯ್ ಮತ್ತು ಮುರುಗದಾಸ್ ನಡುವೆ ಒಮ್ಮತ ಮೂಡಿಲ್ಲ. ಈ ಕಡೆ ಸಂಭಾವನೆ ವಿಚಾರದಲ್ಲೂ ಸನ್ ಪಿಕ್ಚರ್ಸ್ ಹಾಗೂ ಮುರುಗದಾಸ್ ನಡುವೆ ಸಂಬಂಧ ಹೊಂದಾಣಿಕೆ ಆಗಿಲ್ಲ ಎಂದು ಹೇಳಲಾಗಿದೆ.

  ದೀಪಾವಳಿಗೆ ವಿಜಯ್ 'ಮಾಸ್ಟರ್' ಚಿತ್ರತಂಡದಿಂದ ಉಡುಗೊರೆ!

  ಈ ಎಲ್ಲ ಕಾರಣದಿಂದ ಸ್ಟಾರ್ ಡೈರೆಕ್ಟರ್ ವಿಜಯ್ 65 ಪ್ರಾಜೆಕ್ಟ್‌ನಿಂದ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಇದೀಗ, ಮುರುಗದಾಸ್ ಜಾಗಕ್ಕೆ ಯುವ ನಿರ್ದೇಶಕನನ್ನು ಕರೆತರುವ ಎಲ್ಲ ಪ್ರಯತ್ನ ನಡೆಯುತ್ತಿದೆ.

  ಕಾಲಿವುಡ್‌ನ ಲೇಟೆಸ್ಟ್ ವರದಿಯ ಪ್ರಕಾರ, ನಯನತಾರ ನಟಿಸಿದ್ದ ಕೋಲಮಾವು ಕೋಕಿಲ ಸಿನಿಮಾ ನಿರ್ದೇಶಿಸಿದ್ದ ನೆಲ್ಸನ್ ದಿಲೀಪ್ ಕುಮಾರ್‌ಗೆ ವಿಜಯ್ ಅವರ 65ನೇ ಚಿತ್ರ ಡೈರೆಕ್ಟ್ ಮಾಡಲು ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇದು ಅಧಿಕೃತವಾಗಿಲ್ಲ.

  ಮತ್ತೊಂದೆಡೆ ಲೋಕೇಶ್ ಕನಕರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ವಿಜಯ್ ಜೊತೆ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಸಹ ನಟಿಸಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೇಕಿಂಗ್ ಪೋಸ್ಟರ್‌ಗಳ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ದೀಪಾವಳಿ ಹಬ್ಬಕ್ಕೆ ಟೀಸರ್ ಬರಬಹುದು.

  English summary
  After AR Murugadoss left, Kolamavu kokila director Nelson Dilipkumar will be direct the Vijay 65th Project. but, it is not official.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X