»   » 'ಬಾಹುಬಲಿ 2' ಸಕ್ಸಸ್ ನಂತರ ಪ್ರಭಾಸ್ ಬಗ್ಗೆ ಕೇಳಿಬಂದ ಹೊಸ ಸುದ್ದಿ!

'ಬಾಹುಬಲಿ 2' ಸಕ್ಸಸ್ ನಂತರ ಪ್ರಭಾಸ್ ಬಗ್ಗೆ ಕೇಳಿಬಂದ ಹೊಸ ಸುದ್ದಿ!

Posted By:
Subscribe to Filmibeat Kannada

ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ಬಾಹುಬಲಿ 2' ಚಿತ್ರ ಕೇವಲ 10 ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಗಳಿಸಿ, ಭಾರತದ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದಿದೆ. ಅಲ್ಲದೇ ಬಾಲಿವುಡ್ ಚಿತ್ರರಂಗಕ್ಕೆ ಒಂದು ರೀತಿಯ ಶಾಕ್ ನೀಡಿದೆ.[ಭಾರತ ಚಿತ್ರ ಜಗತ್ತಿಗೆ 'ಬಾಹುಬಲಿ ನಂ.1', ಹಳೆ ದಾಖಲೆಗಳೆಲ್ಲ ಪುಡಿ.. ಪುಡಿ!]

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರಕ್ಕಾಗಿ 5 ವರ್ಷಗಳ ಕಾಲ ತೊಡಗಿಕೊಂಡಿದ್ದ ಕಾರಣ 6000 ಮದುವೆ ಪ್ರಪೋಸಲ್ ಗಳನ್ನು ಪ್ರಭಾಸ್ ರಿಜೆಕ್ಟ್ ಮಾಡಿರುವ ಸುದ್ದಿ ಎಲ್ಲರಿಗೂ ಶಾಕ್ ನೀಡಿತ್ತು. ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಪ್ರಭಾಸ್ ಬಗ್ಗೆ ಈಗ ಇನ್ನೊಂದು ಆಶ್ಚರ್ಯಕರ ಸುದ್ದಿ ಹರಿದಾಡುತ್ತಿದೆ. ಅದೇನು ಗೊತ್ತಾ?

ಪ್ರಭಾಸ್ ದುಬಾರಿ ನಟ

ಡಾರ್ಲಿಂಗ್ ಪ್ರಭಾಸ್ 'ಬಾಹುಬಲಿ' ಚಿತ್ರದ ಸಕ್ಸಸ್ ನಂತರ ಭಾರತದ ಬಹು ಬೇಡಿಕೆ ನಟ ಆಗಿದ್ದು, ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಅಲ್ಲದೇ ಹೆಚ್ಚು ದುಬಾರಿ ನಟರಾಗಿಯೂ ಹೊರಹೊಮ್ಮಿದ್ದಾರೆ.

'ಬಾಹುಬಲಿ' ಪ್ರಭಾಸ್ ಹೆಚ್ಚಿಸಿಕೊಂಡ ಸಂಭಾವನೆ ಎಷ್ಟು?

ತೆಲುಗು ಸ್ಟಾರ್ ಪ್ರಭಾಸ್ 'ಬಾಹುಬಲಿ' ಚಿತ್ರದ ನಂತರ ತಮ್ಮ ಸಂಭಾವನೆಯಲ್ಲಿ ಒಂದು ಚಿತ್ರದ ಅಭಿನಯಕ್ಕಾಗಿ ಬರೋಬರಿ 5 ಕೋಟಿ ರೂ ಅಧಿಕಗೊಳಿಸಿದ್ದಾರಂತೆ.

'ಬಾಹುಬಲಿ'ಗಾಗಿ ಪ್ರಭಾಸ್ ಪಡೆದ ಸಂಭಾವನೆ

ಪ್ರಭಾಸ್ 'ಬಾಹುಬಲಿ' ಚಿತ್ರದಲ್ಲಿಯ ಅಭಿನಯಕ್ಕಾಗಿ 25 ಕೋಟಿ ರೂ ಸಂಭಾವನೆ ಪಡೆದಿದ್ದರು ಎಂದು ಸುದ್ದಿಯಾಗಿತ್ತು. ಅಲ್ಲದೇ ಈ ಚಿತ್ರಕ್ಕಾಗಿ ಸಂಭಾವನೆಯಲ್ಲಿ ಎರಡನೇ ಅತಿ ದೊಡ್ಡ ಮೊತ್ತ ಪಡೆದ ನಟ ಪ್ರಭಾಸ್ ಆಗಿದ್ದು, ನಿರ್ದೇಶಕ ರಾಜಮೌಳಿ 28 ಕೋಟಿ ರೂ ಸಂಭಾವನೆ ಪಡೆದಿದ್ದರು ಎಂದು 'ಬಾಲಿವುಡ್ ಲೈಫ್' ವರದಿಮಾಡಿತ್ತು.

ಪ್ರಭಾಸ್ ಗೆ ಒಂದು ಚಿತ್ರದ ಸಂಭಾವನೆ ಈಗ ಎಷ್ಟು?

ಪ್ರಭಾಸ್ 'ಬಾಹುಬಲಿ' ಚಿತ್ರದ ನಂತರ 5 ಕೋಟಿ ರೂ ಸಂಭಾವನೆ ಹೆಚ್ಚಿಸಿಕೊಂಡಿರುವುದರಿಂದ ಇನ್ನುಮುಂದೆ ಅವರು ಒಂದು ಚಿತ್ರದಲ್ಲಿ ನಟಿಸಲು 30 ಕೋಟಿ ರೂ ಸಂಭಾವನೆ ಎಂದು ಹೇಳಲಾಗುತ್ತಿದೆ.

'ಬಾಹುಬಲಿ' ಗೂ ಮುನ್ನ ಪ್ರಭಾಸ್ ಡಿಮ್ಯಾಂಡ್

'ಬಾಹುಬಲಿ' ಚಿತ್ರಕ್ಕೂ ಮುನ್ನ ಪ್ರಭಾಸ್ 'ಮಿರ್ಚಿ' ಚಿತ್ರದ ಅಭಿನಯಕ್ಕಾಗಿ 20-25 ಕೋಟಿ ರೂ ಡಿಮ್ಯಾಂಡ್ ಮಾಡಿದ್ದರಂತೆ.

English summary
After Baahubali 2 success, Tollywood Star Prabhas gets a massive fee hike.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada