For Quick Alerts
  ALLOW NOTIFICATIONS  
  For Daily Alerts

  'ಲೈಗರ್' ಸೋಲಿನ ಬಳಿಕ ಪುರಿ ಜಗನ್ನಾಥ್ ನಿರ್ದೇಶನ ಮಾಡೋದ್ಯಾರಿಗೆ? ಟಾಲಿವುಡ್ 3 ಸ್ಟಾರ್‌ಗಳು ಯಾರು?

  |

  ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ ಸಿನಿಮಾ ಸೆಟ್ಟೇರಿದಾಗ ನಿರೀಕ್ಷೆಯೇನು ಕಮ್ಮಿಯಿರಲಿಲ್ಲ. ಈ ಜೋಡಿಸ ಬಾಕ್ಸಾಫೀಸ್‌ನಲ್ಲಿ ಏನೋ ಸದ್ದು ಮಾಡುತ್ತೆ ಅಂತ ಭವಿಷ್ಯ ನುಡಿದವರು ಅದೆಷ್ಟೊ ಮಂದಿ. ಆದರೆ, ಬಿಡುಗಡೆ ಬಳಿಕ ಆ ಎಲ್ಲಾ ಲೆಕ್ಕಾಚಾರಗಳೂ ತಲೆ ಕೆಳಗಾಗಿದ್ದವು.

  'ಲೈಗರ್' ಪುರಿ ಜಗನ್ನಾಥ್ ವೃತ್ತಿ ಬದುಕಿನ ಅತ್ಯಂತ ಕೆಟ್ಟ ಸಿನಿಮಾ ಅಂತ ಅನಿಸಿಕೊಂಡಿದೆ. ಹೀಗಾಗಿ ವಿಜಯ್ ದೇವರಕೊಂಡ ಜೊತೆ ಮಾಡಬೇಕಿದ್ದ ಮತ್ತೊಂದು ಸಿನಿಮಾ ಅಲ್ಲಿಗೆ ಮೊಟಕುಗೊಳಿಸಲಾಗಿದೆ.

  'ಲೈಗರ್' ಸೋಲಿನಿಂದ ನಂಬಿದವರು ದೂರಾದರು: ಚಿರಂಜೀವಿ ಎದುರು ಪುರಿ ಜಗನ್ನಾಥ್ ಭಾವುಕ'ಲೈಗರ್' ಸೋಲಿನಿಂದ ನಂಬಿದವರು ದೂರಾದರು: ಚಿರಂಜೀವಿ ಎದುರು ಪುರಿ ಜಗನ್ನಾಥ್ ಭಾವುಕ

  ಒಂದು ಕಾಲದಲ್ಲಿ ಪುರಿ ಜಗನ್ನಾಥ್ ಸಿನಿಮಾ ಅಂದ್ರೆ, ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗೋದು ಪಕ್ಕಾ ಅಂತಿದ್ದರು. ತನ್ನ ಸಿನಿಮಾದ ಹೀರೊಗಳನ್ನು ರಗಡ್ ಲುಕ್‌ನಲ್ಲಿ ತೋರಿಸಿ ಮಾಸ್ ಸಿನಿಮಾ ನೀಡುತ್ತಿದ್ದರು. ಅದೇ ನಿರ್ದೇಶಕ ಸೋಲಿನ ಸುಳಿಗೆ ಸಿಲುಕಿದ್ದಾರೆ. ಆದ್ರೀಗ ಮೂವರು ಹೀರೊಗಳಲ್ಲಿ ಒಬ್ಬರಿಗೆ ಪುರಿ ಜಗನ್ನಾಥ್ ಮುಂದಿನ ಸಿನಿಮಾ ಮಾಡುತ್ತಾರೆ ಅನ್ನೋ ಗುಸುಗುಸು ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.

  ಪುರಿ ಜಗನ್ನಾಥ್ ಮುಂದಿನ ಸಿನಿಮಾ ಯಾರಿಗೆ?

  ಪುರಿ ಜಗನ್ನಾಥ್ ಮುಂದಿನ ಸಿನಿಮಾ ಯಾರಿಗೆ?

  ಹೀನಾಯ ಸೋಲಿನ ಬಳಿಕ ಪುರಿ ಜಗನ್ನಾಥ್ ಗೆಲುವಿಗಾಗಿ ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ಮೂವರು ಹೀರೊಗಳ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಪುರಿ ಜಗನ್ನಾಥ್ ತಮ್ಮ ಮುಂದಿನ ಸಿನಿಮಾಗೆ ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಅಥವಾ ಮೆಗಾ ಪವರ್‌ಸ್ಟಾರ್ ರಾಮ್‌ ಚರಣ್‌ಗೆ ಅಪ್ರೋಚ್ ಮಾಡಲಿದ್ದಾರೆ. ಈ ಇಬ್ಬರು ನಟರಲ್ಲಿ ಒಬ್ಬರು ಪುರಿ ಸಿನಿಮಾ ಒಪ್ಪಿಕೊಳ್ಳಬಹುದು ಎಂದೂ ಸುದ್ದಿ ಹಬ್ಬಿದೆ. ಆದರೆ, ಅಧಿಕೃತವಾಗಿ ಯಾವುದೂ ಹೊರಬಿದ್ದಿಲ್ಲ.

  ಸಂಭಾವನೆ ಹಣವನ್ನು ನಿರ್ಮಾಪಕರಿಗೆ ವಾಪಸ್ ಕೊಟ್ಟ ವಿಜಯ್ ದೇವರಕೊಂಡ!ಸಂಭಾವನೆ ಹಣವನ್ನು ನಿರ್ಮಾಪಕರಿಗೆ ವಾಪಸ್ ಕೊಟ್ಟ ವಿಜಯ್ ದೇವರಕೊಂಡ!

  ಯುವ ನಟನ ಮೇಲೂ ಪುರಿ ಕಣ್ಣು

  ಯುವ ನಟನ ಮೇಲೂ ಪುರಿ ಕಣ್ಣು

  ಟಾಲಿವುಡ್‌ನಲ್ಲಿ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಯುವ ನಟನ ಮೇಲೂ ಪುರಿ ಜಗನ್ನಾಥ್ ಕಣ್ಣಿಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆ ನಟ ಮತ್ಯಾರೂ ಅಲ್ಲ ವಿಶ್ವಕ್ ಸೇನ್. ಈ ಯುವ ನಟ ಟಾಲಿವುಡ್‌ನಲ್ಲಿ ವಿಭಿನ್ನ ಸಿನಿಮಾಗಳನ್ನು ನೀಡುವ ನಟ. ಈ ನಟನಿಗೂ ಮಾಸ್ ಡೈರೆಕ್ಟರ್ ಅಗತ್ಯವಿದೆ. ಹಾಗಾಗಿ ವಿಶ್ವಕ್ ಸೇನ್ ಕೂಡ ಈ ಸಿನಿಮಾವನ್ನು ಒಪ್ಪಿಕೊಳ್ಳಬಹುದು ಎಂದು ಅಂದಾಜಿಸಲಾಗುತ್ತಿದೆ.

  ಪುರಿಗೆ ಭರವಸೆ ಕೊಟ್ಟ ಚಿರಂಜೀವಿ!

  ಪುರಿಗೆ ಭರವಸೆ ಕೊಟ್ಟ ಚಿರಂಜೀವಿ!

  ಪುರಿ ಜಗನ್ನಾಥ್ ಹಾಗೂ ಚಿರಂಜೀವಿ ಇಬ್ಬರೂ ಈ ಹಿಂದೆನೇ ಒಂದು ಸಿನಿಮಾ ಮಾಡಬೇಕಿತ್ತು. ಅದುವೇ 'ಆಟೋ ಜಾನಿ'. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಇತ್ತೀಚೆಗೆ 'ಗಾಡ್‌ ಫಾದರ್' ಸಿನಿಮಾದ ಪ್ರಚಾರದ ವೇಳೆ ಪುರಿ ಜಗನ್ನಾಥ್‌ಗೆ ಮೆಗಾಸ್ಟಾರ್ ಚಿರಂಜೀವಿ ಮತ್ತೆ ಆ ಸಿನಿಮಾ ಬಗ್ಗೆ ಕೇಳಿದ್ದರು. " ಆಟೋ ಜಾನಿ ಸಿನಿಮಾವನ್ನು ಅಲ್ಲಿಗೆ ಕೈ ಬಿಟ್ಟಿದ್ದೇನೆ. ಅದಕ್ಕಿಂತ ಇನ್ನೂ ಅದ್ಭುತವಾದ ಕಥೆ ಮೇಲೆ ಕೆಲಸ ಮಾಡುತ್ತಿದ್ದೇನೆ." ಎಂದು ಪುರಿ ಜಗನ್ನಾಥ್ ಹೇಳಿದ್ದರು. ಆಗ ಚಿರಂಜೀವಿ ಒಟ್ಟಿಗೆ ಸಿನಿಮಾ ಮಾಡುವ ಭರವಸೆ ನೀಡಿದ್ದರು.

  'ಒಟ್ಟಿಗೆ ಸಿನಿಮಾ ಮಾಡೋಣ'

  'ಒಟ್ಟಿಗೆ ಸಿನಿಮಾ ಮಾಡೋಣ'

  ಪುರಿ ಜಗನ್ನಾಥ್ ಜೊತೆ ಮಾತಾಡುವಾಗ ಮೆಗಾ ಸ್ಟಾರ್ ಚಿರಂಜೀವಿ ಭರವಸೆಯನ್ನು ನೀಡಿದ್ದಾರೆ. " ಯಾವಾಗ ಬೇಕಿದ್ದರೂ ಒಟ್ಟಿಗೆ ಕೆಲಸ ಮಾಡೋಣ. ನಿಮಗೆ ಯಾವಾಗಲೂ ಸ್ವಾಗತ. ಬೇರೆಯೊಂದು ಕಥೆಯೊಂದಿಗೆ ಬನ್ನಿ ಚರ್ಚೆ ಮಾಡೋಣ" ಅಂತ ಚಿರಂಜೀವಿ ನಿರ್ದೇಶಕ ಪುರಿ ಜಗನ್ನಾಥ್‌ಗೆ ಭರವಸೆ ನೀಡಿದ್ದಾರೆ. ಸದ್ಯದಲ್ಲೇ ಪುರಿ ಜಗನ್ನಾಥ್ ಮತ್ತೆ ಹೊಸ ಸಿನಿಮಾಗೆ ಕೈ ಹಾಕುವ ಎಲ್ಲಾ ಸಾಧ್ಯತೆಗಳೂ ಇವೆ.

  English summary
  After Liger Disaster Puri Jagannadh May Direct Balakrishna And Ram Charan, Know More.
  Tuesday, October 18, 2022, 23:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X