Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಲ್ಲು ಅರ್ಜುನ್ ಸಂಭಾವನೆ ಹೆಚ್ಚಾಯ್ತು: ಪುಷ್ಪ ರಾಜ್ ಇಷ್ಟೊಂದು ದುಬಾರಿನಾ?
ಟಾಲಿವುಡ್ ಸ್ಟಾರ್ ನಟರಲ್ಲಿ ಅಲ್ಲು ಅರ್ಜುನ್ ಟಾಪ್‌ನಲ್ಲಿದ್ದಾರೆ. ಮಹೇಶ್ ಬಾಬು, ಪ್ರಭಾಸ್, ರಾಮ್ ಚರಣ್ ಚಿರಂಜೀವಿ ಸಾಲಲ್ಲಿ ಇದ್ದ ಅಲ್ಲು ಅರ್ಜುನ್ ಪುಷ್ಪ ಚಿತ್ರದ ನಂತರ ಎಲ್ಲರನ್ನೂ ಮೀರಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
Recommended Video
ನಟ ಅಲ್ಲು ಅರ್ಜುನ್ ಸದ್ಯ ಟಾಪ್‌ನಲ್ಲಿ ಇದ್ದಾರೆ. ಪುಷ್ಪ ಸಿನಮಾದ ನಂತರ ಅಲ್ಲು ಅರ್ಜುನ್ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಅವರ ಸಿನಿಮಾಗಳ ಮಾರ್ಕೆಟ್ ಸಹ ದೊಡ್ಡದಾಗಿದೆ.
ಪುಷ್ಪ ಸಿನಿಮಾ ರಿಲೀಸ್ ಬಳಿಕ ಅಲ್ಲು ಅರ್ಜುನ್ ಅವರ ಸಂಭಾವನೆ ಬಗ್ಗೆ ಹೆಚ್ಚಿನ ಚರ್ಚೆ ಆಗುತ್ತಿದೆ. ಪುಷ್ಪ ಸಿನಿಮಾದ ನಂತರ ನಟಿ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಹೆಚ್ಚಾಗಿದೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಈಗ ಅಲ್ಲು ಅರ್ಜುನ್ ಸಂಭಾವನೆ ಹೆಚ್ಚಾಗಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಪುಷ್ಪ ಚಿತ್ರಕ್ಕೆ 75 ಕೋಟಿ ಸಂಭಾವನೆ ಪಡೆದಿದ್ದ ಅಲ್ಲು ಅರ್ಜುನ್!
ನಟ ಅಲ್ಲು ಅರ್ಜುನ್ ಅವರ ಸಂಭಾವನೆ ಹೆಚ್ಚಾಗಲು ಕಾರಣ ಪುಷ್ಪ ಸಿನಿಮಾ. ಪುಷ್ಪ ಸಿನಿಮಾದ ಮೂಲಕ ಅಲ್ಲು ಅರ್ಜುನ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಪುಷ್ಪ ಸಿನಿಮಾ ಬಾಲಿವುಡ್‌ನಲ್ಲಿ ಹೆಚ್ಚಿನ ಗಮನ ಸೆಳೆದಿದೆ. ಅಲ್ಲು ಅರ್ಜುನ್ ಸಿನಿಮಾಗಳ ಬಗ್ಗೆ ನಾರ್ತ್ ನಲ್ಲಿ ಕ್ರೇಜ್ ಹುಟ್ಟು ಹಾಕಿದೆ. ಪುಷ್ಪ ಚಿತ್ರಕ್ಕಾಗಿ 75 ಕೋಟಿ ರೂ ಸಂಭಾವನೆ ಪಡೆದು ಕೊಂಡಿದ್ದಾರೆ.

ಅಲ್ಲು ಅರ್ಜುನ್ ಸಂಭಾವನೆ ಈಗ 100 ಕೋಟಿ?
ಈ ಸುದ್ದಿ ಕೇಳಿದರೆ ಅಚ್ಚರಿ ಆಗಬಹುದು. ಆದರೆ ಪುಷ್ಪ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಸಂಭಾವನೆ 100 ಕೋಟಿ ಆಗಿದೆಯಂತೆ. ಹಾಗಾಗಿ ಪುಷ್ಪ 2 ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅವರು 100 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹಬ್ಬಿದೆ. ಈ ಮೂಲಕ ಅಲ್ಲು ಅರ್ಜುನ್ ಟಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಮುಂಚೂಣಿಯಲ್ಲಿ ಇದ್ದಾರೆ.

300 ಕೋಟಿ ಕಲೆ ಹಾಕಿದ ಪುಷ್ಪ ಸಿನಿಮಾ!
ಪುಷ್ಪ ಸಿನಿಮಾ ಊಹೆಗೂ ಮೀರಿದ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಪುಷ್ಪ ಸಿನಿಮಾ ಹೊಸ ದಾಖಲೆ ಮಾಡಿದೆ. ವಿಶ್ವದಾದ್ಯಂತ ಪುಷ್ಪ ಕಲೆಕ್ಷನ್ 300 ಕೋಟಿಯ ಗಡಿ ದಾಟಿದೆ. ಇದು ನಟ ಅಲ್ಲು ಅರ್ಜುನ್ ಅವರ ಸಿನಿಮಾ ಬದುಕಿನಲ್ಲೆ ಬರೆದ ಮೊದಲ ರೆಕಾರ್ಡ್. ಇಲ್ಲಿ ತನಕ ಅಲ್ಲು ಅರ್ಜುನ್ ಸಿನಿಮಾಗಳು ಈ ಮಟ್ಟಿಗಿನ ದಾಖಲೆ ಮಾಡಿರಲಿಲ್ಲ.

ಹಿಂದಿಯಲ್ಲಿ 75 ಕೋಟಿಗೂ ಅಧಿಕ ಗಳಿಕೆ!
ಹಿಂದಿಯಲ್ಲೂ ರಿಲೀಸ್ ಆಗಿರುವ ಪುಷ್ಪ ಚಿತ್ರ ದೊಡ್ಡ ಮಟ್ಟದ ದಾಖಲೆ ನಿರ್ಮಿಸಿದೆ. ಈ ಹಿಂದೆ ಬಾಲಿವುಡ್‌ನಲ್ಲಿ ದಾಖಲೆ ಮಾಡಿದ್ದ ಸೌತ್ ಸಿನಿಮಾ ಅಂದರೆ ಅದು ಬಾಹುಬಲಿ ಮಾತ್ರವೇ ಆಗುತ್ತು. ಆದರೆ ಈಗ ಪುಷ್ಪ ಸಿನಿಮಾ ಹಿಂದಿ ಅವತರಣಿಕೆಯಲ್ಲಿ 75 ಕೋಟಿ ರೂಪಾಯಿಗೂ ಮೀರಿದ ಗಳಿಕೆ ಮಾಡಿ ದಾಖಲೆ ಬರೆದಿದೆ. ಈ ಚಿತ್ರವನ್ನು ಬಾಲಿವುಡ್‌ನ ಕಲಾವಿದರು ಕೂಡ ಮೆಚ್ಚಿ ಕೊಂಡಾಡಿದ್ದಾರೆ. ಹಾಗಾಗಿ ಅಲ್ಲು ಅರ್ಜುನ್ ಸಂಭಾವನೆ 100 ಕೋಟಿಗೆ ಏರಿದೆ ಎನ್ನಲಾಗುತ್ತಿದೆ.