»   » 'ಸಾಹೋ' ನಂತರ ಪ್ರಭುದೇವ ಚಿತ್ರದಲ್ಲಿ 'ಬಾಹುಬಲಿ' ಪ್ರಭಾಸ್?

'ಸಾಹೋ' ನಂತರ ಪ್ರಭುದೇವ ಚಿತ್ರದಲ್ಲಿ 'ಬಾಹುಬಲಿ' ಪ್ರಭಾಸ್?

Posted By:
Subscribe to Filmibeat Kannada

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಟಾಲಿವುಡ್ ನಟ ಪ್ರಭಾಸ್ ಕಾಲ್ ಶೀಟ್ ಗಾಗಿ ಬಾಲಿವುಡ್ ನ ಖ್ಯಾತ ನಿರ್ಮಾಪಕರೆಲ್ಲಾ ಮುಗಿಬಿದ್ದಾರೆ. ಆದರೆ ಬಾಲಿವುಡ್ ನ ಯಾವ ನಿರ್ಮಾಪಕರಿಗೂ 'ಡಾರ್ಲಿಂಗ್' ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.

ಬಾಲಿವುಡ್ ನಲ್ಲಿ ಪ್ರಭಾಸ್ ರನ್ನು ಖ್ಯಾತ ನಿರ್ದೇಶಕ ಕರಣ್ ಜೋಹರ್ ಲಾಂಚ್ ಮಾಡಲಿದ್ದಾರೆ ಎಂಬ ಸುದ್ದಿ ಬಿಟೌನ್ ನಲ್ಲಿ ಹರಿದಾಡಿತ್ತು. ಆದರೆ ಈ ರೂಮರ್ಸ್ ಗಳಿಗೆಲ್ಲಾ ಸ್ವತಃ ಕರಣ್ ಬ್ರೇಕ್ ಹಾಕಿದ್ದರು. ಅಂದಹಾಗೆ 'ಸಾಹೋ' ನಂತರ ಪ್ರಭಾಸ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲಕ್ಕೆ ಈಗೊಂದು ಹೊಸ ಸುದ್ದಿ ಕೇಳಿಬಂದಿದೆ. ಅದೇನಂದ್ರೆ ಪ್ರಭಾಸ್ ಮುಂದಿನ ಚಿತ್ರಕ್ಕೆ ಡ್ಯಾನ್ಸ್ ಕಿಂಗ್ ಪ್ರಭುದೇವ ರವರು ಆಕ್ಷನ್ ಕಟ್ ಹೇಳಲಿದ್ದಾರಂತೆ. ಮುಂದೆ ಓದಿ..

ಪ್ರಭಾಸ್ ಗೆ ಪ್ರಭುದೇವ ಆಕ್ಷನ್ ಕಟ್

ಪ್ರಭಾಸ್ 'ಬಾಹುಬಲಿ-2' ಚಿತ್ರದ ನಂತರ ಬಹುಬೇಡಿಕೆಯ ನಟ ಆಗಿದ್ದು, ಅವರಿಗೆ ಎಷ್ಟೇ ಅವಕಾಶಗಳು ಬಂದರೂ ಸಾಕಷ್ಟು ಅಲೋಚಿಸಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಹೀಗಿರುವಾಗ ಪ್ರಭಾಸ್ 'ಸಾಹೋ' ನಂತರ ಪ್ರಭುದೇವ ನಿರ್ದೇಶನ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ, ಇದನ್ನು ಸ್ವತಃ ಪ್ರಭುದೇವ ಅವರೇ ದೃಢಪಡಿಸಿದ್ದಾರೆ ಎಂದು ಲೇಟೆಸ್ಟ್ ವರದಿಗಳಿಂದ ತಿಳಿದಿದೆ.

ಪ್ರಭು-ಪ್ರಭಾಸ್ ಕಾಂಬಿನೇಷನ್ ನಲ್ಲಿ ಎರಡನೇ ಚಿತ್ರ

ಒಂದು ವೇಳೆ ಪ್ರಭಾಸ್ 'ಸಾಹೋ' ನಂತರ ಪ್ರಭುದೇವ ನಿರ್ದೇಶನದ ಚಿತ್ರದಲ್ಲಿ ನಟಿಸಿದ್ದೇ ಆದಲ್ಲಿ ಇವರಿಬ್ಬರ ಕಾಂಬಿನೇಷನ್ ನ ಎರಡನೇ ಚಿತ್ರ ಮೂಡಿಬರಲಿದೆ. ಈ ಹಿಂದೆ ಪ್ರಭುದೇವ ಅವರು 2006 ರಲ್ಲಿ ಪ್ರಭಾಸ್ ಮತ್ತು ತ್ರಿಶ ಕೃಷ್ಣನ್ ಅಭಿನಯದ 'ಪೌರ್ಣಮಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು.

ಬಾಲಿವುಡ್ ಚಿತ್ರ

ಅಂದಹಾಗೆ ಪ್ರಭಾಸ್‌ 'ಬಾಹುಬಲಿ-2' ಚಿತ್ರದಿಂದ ಬಿಟೌನ್ ಸಿನಿಪ್ರಿಯರ ನೆಚ್ಚಿನ ನಟ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಹಿಂದಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಪ್ರಭುದೇವ ಅವರು ಪ್ರಭಾಸ್ ಗೆ ಬಾಲಿವುಡ್ ನಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಗುಲ್ಲು ಟಾಲಿವುಡ್ ಅಂಗಳದಲ್ಲು ಹಬ್ಬಿದೆ. ಆದರೆ ಈ ಸುದ್ದಿ ಎಷ್ಟು ನಿಜ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಸದ್ಯ ಇಬ್ಬರು ಬ್ಯುಸಿ

ಸದ್ಯದಲ್ಲಿ ಪ್ರಭುದೇವ ಮತ್ತು ಪ್ರಭಾಸ್ ಇಬ್ಬರು ಸಹ ಇತರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಡ್ಯಾನ್ಸ್ ಕಿಂಗ್ ಪ್ರಭುದೇವ ತಮಿಳು ಸಿನಿಮಾ 'Gulebagavali', 'ಯಂಗ್ ಮಂಗ್ ಸಂಗ್', 'ಮರ್ಕ್ಯೂರಿ' ಮತ್ತು ತಮ್ಮದೇ ನಿರ್ದೇಶನದ 'ಕರುಪ್ಪು ರಾಜ ವೆಲೈ ರಾಜ' ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಪ್ರಭಾಸ್ ರವರು 'ಸಾಹೋ' ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.

ಪ್ರಭಾಸ್ ಬಾಲಿವುಡ್ ಎಂಟ್ರಿ ಬಗೆಗಿನ ಇತ್ತೀಚಿನ ಸುದ್ದಿ

ಪ್ರಭಾಸ್ ರನ್ನು ಕರಣ್ ಜೋಹರ್ ಬಾಲಿವುಡ್ ನಲ್ಲಿ ಲಾಂಚ್ ಮಾಡಲಿದ್ದಾರೆ ಎಂಬ ಸುದ್ದಿಯನ್ನು ಸ್ವತಃ ಕರಣ್ ರವರೇ ತಳ್ಳಿಹಾಕಿ, ಖ್ಯಾತ ನಿರ್ದೇಶಕ ಸಾಜಿದ್ ನಡಿಯಾದ್ವಾಲಾ ಅವರ ಚಿತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎಂದಿದ್ದರು. ಅಲ್ಲದೇ ಈ ಬಗ್ಗೆ ಈಗಾಗಲೇ ಸಾಜಿದ್ ಮತ್ತು ಪ್ರಭಾಸ್ ಹಲವು ಭಾರಿ ಮಾತುಕತೆ ನಡೆಸಿದ್ದಾರೆ. ನಿರ್ದೇಶಕರು ಸದ್ಯದಲ್ಲೇ ಈ ಬಗ್ಗೆ ಫೈನಲೈಸ್ ಮಾಡಲಿದ್ದಾರೆ ಎಂದು ಕರಣ್ ಜೋಹರ್ ಹೇಳಿರುವುದನ್ನು 'ಮಿಡ್‌-ಡೇ' ವರದಿ ಮಾಡಿತ್ತು.

ಪ್ರಭಾಸ್ ಬಾಲಿವುಡ್ ಚಿತ್ರದ ಬಗ್ಗೆ ಇದೀಗ ಬಂದ ಹೊಸ ಸುದ್ದಿ..

English summary
According to Grapevine 'Baahubali' star Prabhas and Prabhu Dheva are all set to come together for a film. The buzz is that Prabhu Deva is likely to direct Prabhas in his upcoming film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada