»   » ಈ ವಯಸ್ಸಲ್ಲಿ ಐಶ್ವರ್ಯಾ ರೈಗೆ ಇದೆಲ್ಲಾ ಬೇಕಾ?

ಈ ವಯಸ್ಸಲ್ಲಿ ಐಶ್ವರ್ಯಾ ರೈಗೆ ಇದೆಲ್ಲಾ ಬೇಕಾ?

Posted By:
Subscribe to Filmibeat Kannada

ಬಚ್ಚನ್ ಬಹುರಾಣಿ ಐಶ್ವರ್ಯಾ ರೈ ಸೆಕೆಂಡ್ ಇನ್ನಿಂಗ್ಸ್ ಶುರುಮಾಡ್ತಾರೆ ಅನ್ನೋ ಸುದ್ದಿ ಶುರುವಾಗಿ ಎರಡು ವರ್ಷಗಳೇ ಕಳೆದಿವೆ. ಆದ್ರೆ ಇಲ್ಲಿವರೆಗೂ ಐಶೂ ಮಾತ್ರ ಬಣ್ಣ ಹಚ್ಚೂ ಇಲ್ಲ, ತೆರೆಮೇಲೆ ಕಾಣಿಸಿಕೊಂಡೂ ಇಲ್ಲ.

ರೀ ಎಂಟ್ರಿ ಮಾತ್ರ ಧೂಮ್ ಧಾಮ್ ತರಾನೇ ಇರ್ಬೇಕು ಅಂತ ದೊಡ್ಡ ದೊಡ್ಡ ಆಫರ್ ಗಳನ್ನೇ ಹುಡುಕ್ತಾಯಿರುವ ಐಶೂ, ಅತ್ತೆ ಜಯಾ ಬಚ್ಚನ್ ಜೊತೆ ನಿರ್ದೇಶಕರ ಮನೆ ಬಾಗಿಲನ್ನ ತಟ್ಟಿದ್ದ ವಿಷಯವನ್ನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ. [ಚಾನ್ಸ್ ಗಾಗಿ ನಿರ್ದೇಶಕರ ಮನೆ ಬಾಗಿಲು ತಟ್ಟಿದ್ರಾ ಐಶೂ]

Aishwarya Rai1

'ಜಸ್ಬಾ' ಸಿನಿಮಾ ಮೂಲಕ ಐಶ್ವರ್ಯಾ ರೈ ಕಮ್ ಬ್ಯಾಕ್ ಮಾಡೋ ವಿಷಯ ಬಚ್ಚನ್ ಕುಟುಂಬದಿಂದಲೇ ಹೊರಬಂದಿತ್ತು, ಆದ್ರೆ ಅಷ್ಟರಲ್ಲೇ ಐಶ್ವರ್ಯಾ ಹೊಸ ಪ್ರಾಜೆಕ್ಟ್ ಮೇಲೆ ಕಣ್ಹಾಕಿದ್ದಾರೆ. ಐಶೂ ಆಪ್ತ ಗೆಳೆಯ ಕರಣ್ ಜೋಹರ್ ಜೊತೆ ಒಂದು ಸಿನಿಮಾ ಮಾಡ್ಬೇಕು ಅಂತ ಮಾತುಕತೆ ನಡೆಸಿದ್ದ ಐಶ್, ಈಗ ಆ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

ಕರಣ್ ಜೋಹರ್ ನಿರ್ದೇಶಿಸುವ ಈ ಚಿತ್ರಕ್ಕೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹೀರೋ ಅಂತ ಮೊದಲು ನಿಗದಿಯಾಗಿತ್ತು. ಆದ್ರೆ, ಅಂದು ಪ್ರಾಜೆಕ್ಟ್ ನ ಪೆಂಡಿಂಗ್ ನಲ್ಲಿಟ್ಟಿದ್ದ ಐಶೂ ಈಗ ಏಕ್ದಂ ಓಕೆ ಅಂದಿರುವುದಕ್ಕೆ ಕಾರಣ ಹೀರೋ ಬದಲಾಗಿರುವುದು! [ಶೀಘ್ರದಲ್ಲೇ ತಾರೆ ಐಶ್ವರ್ಯ ರೈ ಸೆಕೆಂಡ್ ಇನ್ನಿಂಗ್ಸ್ ]

Aishwarya Rai2

ಬಾಲಿವುಡ್ ಗಲ್ಲಿಗಲ್ಲಿಗಳಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಅಮೀರ್ ಜಾಗಕ್ಕೆ ಕರಣ್ ಜೋಹರ್ ರಣ್ಬೀರ್ ಕಪೂರ್ ನ ಸೆಲೆಕ್ಟ್ ಮಾಡಿದ್ದಾರೆ. ವಿಷಯ ಗೊತ್ತಾಗಿದ ತಕ್ಷಣ ಐಶ್ವರ್ಯಾ 'ರೆಡಿ' ಅಂದುಬಿಟ್ಟಿದ್ದಾರಂತೆ.

ಇದನ್ನ ಕೇಳಿದ ತಕ್ಷಣ, ಮೊನ್ನೆಮೊನ್ನೆಯಷ್ಟೇ 41ನೇ ವಸಂತಕ್ಕೆ ಕಾಲಿಟ್ಟ ಐಶ್ವರ್ಯಾ ರೈ ಎಲ್ಲಿ? 32ರ ಹರೆಯದ ರಣ್ಬೀರ್ ಕಪೂರ್ ಎಲ್ಲಿ? ಇಬ್ರೂ ಜೊತೆಯಾಗಿ ಡ್ಯುಯೆಟ್ ಹಾಡೋದುಂಟಾ! ಬಚ್ಚನ್ ಸೊಸೆಗೆ ಇದೆಲ್ಲಾ ಬೇಕಾ? ಅಂತ ಬಾಲಿವುಡ್ ನಲ್ಲಿ ತಲೆಗೊಂದು ಕಮೆಂಟ್ ಬೀಳ್ತಾಯಿದೆ.

Aishwarya Rai3

ಚಿಕ್ಕವಯಸ್ಸಿನ ಹೀರೋ ಜೊತೆ ನಟಿಸಿದ್ರೆ, ಸ್ಕ್ರೀನ್ ನಲ್ಲಿ ತನ್ನ ಚರೀಶ್ಮಾ ಹೆಚ್ಚಾಗಬಹುದು ಅಂತ್ಲೋ ಏನೋ, ಐಶ್ ಖುಷಿಯಿಂದ ಒಪ್ಪಿಕೊಂಡು ಬಿಟ್ಟಿದ್ದಾರೆ. ಇದರ ಮಧ್ಯೆ ಟ್ವಿಸ್ಟ್ ಕೊಡಬೇಕು ಅಂದ್ರೆ ಚಿತ್ರದಲ್ಲಿ ರಣ್ಬೀರ್, ಐಶ್ ಮಧ್ಯೆ ಅನುಷ್ಕಾ ಶರ್ಮಾ ಕೂಡ ಇದ್ದಾರೆ ಅನ್ನೋ ಸುದ್ದಿ ಕೂಡ ಹೊರಬಿದ್ದಿದೆ. [ಐಶೂ-ಅಭಿಷೇಕ್ ಜೋಡಿಗೆ ನಾಗಶೇಖರ್ ಆಕ್ಷನ್ ಕಟ್]

ಸಿನಿಮಾದಲ್ಲಿ ಅದ್ಯಾರ್ಯಾರು ಇದ್ದಾರೋ, ಯಾವ ಸಿನಿಮಾದಿಂದ ಐಶೂ ಸೆಕೆಂಡ್ ಇನ್ನಿಂಗ್ಸ್ ಶುರುಮಾಡ್ತಾರೋ, ಕರಣ್ ಜೋಹರ್ ರೆಡಿ ಮಾಡಿರುವ ಕಥೆ ಇನ್ನೆಂಥದ್ದೋ, ಅದೆಲ್ಲಾ ತೆರೆಮೇಲೆ ಕಾಣುವವರೆಗೂ ಯಾವುದು ಗ್ಯಾರೆಂಟಿ ಇಲ್ಲ. (ಏಜೆನ್ಸೀಸ್)

English summary
Aishwarya Rai Bachchan is roped into play a lead role in Karan Johar's next directorial venture. It is said that instead of Aamir Khan, Karan Johar has bought in Ranbir Kapoor to play opposite Aishwarya Rai. So, will Ranbir romance Aishwarya?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada