»   » ಚಾನ್ಸ್ ಗಾಗಿ ನಿರ್ದೇಶಕರ ಮನೆ ಬಾಗಿಲು ತಟ್ಟಿದ್ರಾ ಐಶೂ

ಚಾನ್ಸ್ ಗಾಗಿ ನಿರ್ದೇಶಕರ ಮನೆ ಬಾಗಿಲು ತಟ್ಟಿದ್ರಾ ಐಶೂ

Posted By:
Subscribe to Filmibeat Kannada

ನೀವು ನಂಬುತ್ತೀರೋ ಬಿಡುತ್ತೀರೋ...ಬಚ್ಚನ್ ಬಹು ಆಗಿ, ಆರಾಧ್ಯ ಮಮ್ಮಿ ಆದ್ಮೇಲೆ ಲಾಂಗ್ ಗ್ಯಾಪ್ ನಂತರ ಇದೀಗ ಬಾಲಿವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಸ್ಟಾರ್ಟ್ ಮಾಡೋ ಹುಮ್ಮಸ್ಸಲ್ಲಿರೋ ಐಶ್ವರ್ಯಾ ರೈ, ಅವಕಾಶಕ್ಕೋಸ್ಕರ ನಿರ್ದೇಶಕರೊಬ್ಬರ ಮನೆಗೆ ಹೋಗಿದ್ರಂತೆ.

ಇಂಟ್ರೆಸ್ಟಿಂಗ್ ಅಂದ್ರೆ, ಐಶೂ ಜೊತೆ ನಿರ್ದೇಶಕರ ಮನೆಗೆ ಅತ್ತೆ ಜಯಾ ಬಚ್ಚನ್ ಕೂಡ ಹೋಗಿದ್ರಂತೆ. ಹಾಗಂತ ಬಾಲಿವುಡ್ ಗಲ್ಲಿಗಲ್ಲಿಗಳಲ್ಲಿ ಗುಲ್ಲೆದ್ದಿದೆ. ಈ ಗುಲ್ಲಿಗೆ ಕಾರಣ, ಬಾಲಿವುಡ್ ನ ಖ್ಯಾತ ನಿರ್ದೇಶಕ ವಿಪುಲ್ ಶಾ ಮನೆಗೆ ಐಶ್ವರ್ಯಾ ರೈ ಮತ್ತು ಜಯಾ ಬಚ್ಚನ್ ಇತ್ತೀಚೆಗಷ್ಟೇ ಭೇಟಿ ನೀಡಿರೋದು. ಸ್ಲೈಡ್ ನಲ್ಲಿ ಇನ್ನಷ್ಟು ಮಸ್ತ್ ಮಜಾ ಇದೆ ನೋಡಿ.

ಅವಕಾಶಕ್ಕಾಗಿ ನಿರ್ದೇಶಕರ ಬಾಗಿಲು ತಟ್ಟಿದ ಐಶೂ

ಜಸ್ಟ್ ಮೀಟಿಂಗ್ ಆಗಿದ್ರೆ ಪರ್ವಾಗಿಲ್ಲ, ವಿಪುಲ್ ಶಾ ಮನೆಯಲ್ಲೇ ಅತ್ತೆ-ಸೊಸೆ ಎರಡು ಗಂಟೆಗಳು ಕಾಲ ಕಳೆದ್ರಂತೆ. ಅವರ ಮೀಟಿಂಗ್ ನಡೆಯೋ ಸಂದರ್ಭದಲ್ಲಿ ಆ ಫ್ಲೋರ್ ನಲ್ಲಿ ಯಾರೂ ಓಡಾಡದಂತೆ ಸೆಕ್ಯೂರಿಟಿಯನ್ನೂ ಅರೇಂಜ್ ಮಾಡಿದ್ರಂತೆ. ಇದನ್ನೆಲ್ಲಾ ನೋಡಿರೋ ಬಾಲಿವುಡ್ ಪಂಡಿತರು, ಅವಕಾಶಕ್ಕಾಗೇ ಅತ್ತೆ-ಸೊಸೆ ವಿಪುಲ್ ಶಾ ಮನೆಗೆ ಬಂದಿದ್ದು ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

ಆಫರ್ ಗಾಗಿ ಅಲ್ಲದೆ ಮತ್ತೇನು?

ಅವ್ರ ಮಾತಿಗೆ ಪುಷ್ಠಿ ಸಿಗುವಂತೆ ತಮ್ಮ ಹುಟ್ಟುಹಬ್ಬದ ದಿನದಂದೇ ಐಶೂ, ಹೆಚ್ಚು ಹೆಚ್ಚು ಪ್ರಾಜೆಕ್ಟ್ಸ್ ಮಾಡ್ತೀನಿ ಅಂತ ಹೇಳಿಕೆ ನೀಡಿದ್ರು. ಅಂದ್ಮೇಲೆ ವಿಪುಲ್ ಶಾ ಜೊತೆಗಿನ ಮೀಟಿಂಗ್ ಆಫರ್ ಗಾಗಿ ಅಲ್ಲದೇ ಮತ್ತೇನು.

ವಿಪುಲ್ ಶಾ ಮಾತ್ರ ಯಾಕೆ?

ಫಿಲ್ಮ್ ಮೇಕರ್ ವಿಪುಲ್ ಶಾ, ಬಚ್ಚನ್ ಕುಟುಂಬಕ್ಕೆ ಅತ್ಯಾಪ್ತ. ಅಮಿತಾಬ್ ಬಚ್ಚನ್ ಜೊತೆ ಆಂಕೇನ್, ವಕ್ತ್: ದಿ ರೇಸ್ ಅಗೇನ್ಸ್ಟ್ ಟೈಮ್ ಮತ್ತು ಐಶ್ವರ್ಯಾ ರೈ ಜೊತೆ ಆಕ್ಷನ್ ರೀಪ್ಲೇ ಸಿನಿಮಾ ಮಾಡಿರೋ ವಿಪುಲ್, ಮತ್ತೆ ಮಾಜಿ ವಿಶ್ವಸುಂದರಿಗಾಗಿ ಕತೆ ರೆಡಿಮಾಡ್ತಿದ್ದಾರಂತೆ.

ಐಶ್ ಜೊತೆ ಜಯಾ ಕೂಡ ಮಿಂಚ್ತಾರಾ?

''ಐಶ್ ಜೊತೆ ವರ್ಕ್ ಮಾಡೋದಂದ್ರೆ ತುಂಬಾ ಇಷ್ಟ. ಆದಷ್ಟು ಬೇಗ ಇಬ್ಬರು ಒಂದು ಸಿನಿಮಾ ಮಾಡ್ಬೇಕು. ಜಯಾ ಬಚ್ಚನ್ ಜೊತೆಗೂ ಕೆಲಸ ಮಾಡೋ ಅವಕಾಶ ಸಿಕ್ರೆ ಖಂಡತ ಮಾಡ್ತೀನಿ'' ಅಂತ ಹೇಳಿರೋ ವಿಪುಲ್ ಶಾ, ತಮ್ಮ ಚಿತ್ರದಲ್ಲಿ ಅತ್ತೆ-ಸೊಸೆಯನ್ನ ಒಂದಾಗಿಸುತ್ತಾರಾ? ಗೊತ್ತಿಲ್ಲ..!

ಐಶ್ವರ್ಯಾ ಕಮ್ ಬ್ಯಾಕ್ ಯಾವಾಗ?

ವರ್ಷದಿಂದಲೂ ಐಶ್ವರ್ಯಾ ರೀ ಎಂಟ್ರಿ ಬಗ್ಗೆ ದಿನಕ್ಕೊಂದು ಬ್ರೇಕಿಂಗ್ ನ್ಯೂಸ್ ಸಿಗ್ತಾನೇ ಇದೆ. ಆದ್ರೆ ಐಶ್ ಕಮ್ ಬ್ಯಾಕ್ ಸಿನಿಮಾ 'ಜಸ್ಬಾ' ಅನ್ನೋದು ಕೆಲ ದಿನಗಳ ಹಿಂದೆಯಷ್ಟೇ ಪಕ್ಕಾ ಆಗಿತ್ತು. ಜನವರಿಯಲ್ಲಿ ಜಸ್ಬಾ ಶೂಟಿಂಗ್ ಆರಂಭವಾಗಲಿದ್ದು, ಮುಂಬೈನಲ್ಲೇ ಬಹುತೇಕ ಚಿತ್ರೀಕರಣವಾಗಲಿರೋದ್ರಿಂದ ಐಶ್ ಫುಲ್ ಖುಷ್ ಆಗಿದ್ದಾರೆ.

English summary
Aishwarya Rai and her mother-in-law Jaya Bachchan met filmmaker vipul shah to seek offer for film.. It is speculated that Aish and Jaya met vipul to discuss about the new project. Meanwhile Aishwarya is making her comeback with the movie Jasba

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada