»   » ಶಿವಣ್ಣ ಚಿತ್ರದ ಮೂಲಕ ಕನ್ನಡಕ್ಕೆ ಐಶ್ವರ್ಯಾ ರೈ ಎಂಟ್ರಿ

ಶಿವಣ್ಣ ಚಿತ್ರದ ಮೂಲಕ ಕನ್ನಡಕ್ಕೆ ಐಶ್ವರ್ಯಾ ರೈ ಎಂಟ್ರಿ

By: ಉದಯರವಿ
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ತಾರೆ ಐಶ್ವರ್ಯಾ ರೈ ಎಂಟ್ರಿಕೊಡುವುದು ನಿಜಕ್ಕೂ ಕನಸಿನ ಮಾತು. ಯಾವ ಕಾಲಕ್ಕೆ ಬರಬೇಕು ಬಿಡು ಗುರು ಎಂಬ ಉದ್ಗಾರಗಳು ಆಗಾಗ ಕೇಳಿಬರುತ್ತಿದ್ದವು. ಆ ಕಾಲ ಈಗ ಬಂದಿದೆ ಅಂತ ಕಾಣುತ್ತೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಚಿತ್ರದ ಮೂಲಕ ಅವರು ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿರುವ 'ಮನಮೋಹಕ' ಚಿತ್ರದ ಮೂಲಕ ಅವರು ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಚಿತ್ರದಲ್ಲಿ ಐಶ್ವರ್ಯಾ ಅವರದು ವಿಶೇಷ ಪಾತ್ರ ಎನ್ನಲಾಗಿದೆ. ಆದರೆ ಐಶ್ವರ್ಯಾ ಎಂಟ್ರಿ ಕೊಡುತ್ತಿರುವುದು ಅಧಿಕೃತವಾಗಿ ಘೋಷಣೆಯಾಗುವುದು ಮಾತ್ರ ಬಾಕಿ ಇದೆ. [ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಅತ್ತೆ ಸೊಸೆ ಜಗಳ]

'ಮನಮೋಹಕ' ಚಿತ್ರದಲ್ಲಿ ಶಿವಣ್ಣ ಅವರು ಈ ಹಿಂದೆದೂ ಪೋಷಿಸದ ಪಾತ್ರವನ್ನು ಮಾಡುತ್ತಿದ್ದಾರೆ. ಅವರನ್ನು ಕಂಪ್ಲೀಟ್ ಡಿಫರೆಂಟ್ ಆಗಿ ತೋರಿಸುವ ಪ್ರಯತ್ನವನ್ನು ಸಿಂಪಲ್ ಸುನಿ ಈ ಚಿತ್ರದಲ್ಲಿ ಮಾಡುತ್ತಿದ್ದಾರೆ. ಬನ್ನಿ ನೋಡೋಣ ಐಶ್ವರ್ಯಾ ರೈ ಎಂಟ್ರಿ ಡೀಟೇಲ್ಸ್ ಸ್ಲೈಡ್ ರೀಲ್ ನಲ್ಲಿ...

ಮಾವನ ಜೊತೆ ಕನ್ನಡಕ್ಕೆ ಸೊಸೆ ಐಶ್ವರ್ಯಾ ರೈ

ಈಗಾಗಲೆ ಶಿವಣ್ಣ ಅಭಿನಯಿಸಲಿರುವ ಭಕ್ತಿ ಪ್ರಧಾನ ಚಿತ್ರ 'ಕಬೀರ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅಭಿನಯಿಸಲು ವಿನಂತಿಸಲಾಗಿದೆ. ಈ ಬಗ್ಗೆ ಬಿಗ್ ಬಿ ಗ್ರೀನ್ ಸಿಗ್ನಲ್ ಕೊಟ್ಟಾಗಿ. ಇದೀಗ ಇದೇ ತಂಡದ ಜೊತೆಗೆ 'ಮನಮೋಹಕ' ಚಿತ್ರತಂಡವೂ ಹೋಗಿದ್ದು ಐಶ್ವರ್ಯಾ ರೈ ಅವರನ್ನು ಕರೆತರಲು ಮಾತುಕತೆ ನಡೆದಿದೆ.

ಸೈಕಲ್ ರಿಕ್ಷಾದಲ್ಲಿ ಕುಳಿತಿರುವ ಮಹಿಳೆ ಯಾರು?

ಶಿವಣ್ಣ ತುಳಿಯುತ್ತಿರುವ ಸೈಕಲ್ ರಿಕ್ಷಾದಲ್ಲಿ ಕುಳಿತಿರುವ ಮಹಿಳೆಯೇ ಐಶ್ವರ್ಯಾ ರೈ ಪಾತ್ರ ಎನ್ನಲಾಗಿದೆ.

ಕನ್ನಡಕ್ಕೆ ಐಶೂ ಬರುವುದು ಬಹುತೇಕ ಖಚಿತ

'ಮನಮೋಹಕ' ಚಿತ್ರದಲ್ಲಿ ಅಭಿನಯಿಸಲು ಐಶ್ವರ್ಯಾ ರೈ ಅವರು ಬಹುತೇಕ ಒಪ್ಪ್ಪಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಇನ್ನೂ ಯಾವುದೂ ಅಂತಿಮವಾಗಿಲ್ಲ ಎಂಬುದು ಗಮನಾರ್ಹ ವಿಚಾರ.

ಕಥೆಗೆ ಪೂರಕವಾದ ಪಾತ್ರವಂತೆ

ಇಷ್ಟಕ್ಕೂ ಚಿತ್ರದಲ್ಲಿ ಐಶ್ವರ್ಯಾ ರೈ ಅವರ ಪಾತ್ರ ಏನೆಂದರೆ...ಅವರ ಪಾತ್ರ ಚಿತ್ರಕಥೆಗೆ ಪೂರಕವಾಗಿದೆ ಇದೆ ಎನ್ನುತ್ತವೆ ಮೂಲಗಳು.

ವಿಶ್ವ ಕನ್ನಡ ಸಮ್ಮೇಳನದಲ್ಲೇ ಆಸೆ ತೋಡಿಕೊಂಡಿದ್ದರು

2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡ ಚಿತ್ರದಲ್ಲಿ ಅಭಿನಯಿಸುವ ಮಹದಾಸೆಯನ್ನು ತೋರಿಕೊಂಡಿದ್ದರು. ಇದೀಗ ಅವರ ಆಸೆ ನೆರವೇರುತ್ತಿದೆ.

ಈಗಲಾದರೂ ಕನ್ನಡಕ್ಕೆ ಬಂದರಲ್ಲಾ ಬಿಡಿ

ಒಂದು ಮಗುವಿನ ತಾಯಿಯಾದ ಮೇಲೆ ಐಶ್ವರ್ಯಾ ರೈ ಬೆಳ್ಳಿಪರದೆಯಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಂಡಿದ್ದಾರೆ. ಈಗ ಅವರ ದೇಹದ ತೂಕವೂ ಹೀರೋಯಿನ್ ಪಾತ್ರಗಳಿಗೆ ಹೊಂದಾಣಿಕೆಯಾಗುತ್ತಿಲ್ಲ. ಈಗಲಾದರೂ ಕನ್ನಡಕ್ಕೆ ಬಂದರಲ್ಲಾ ಬಿಡಿ. ಅಂದಹಾಗೆ ಐಶ್ವರ್ಯಾ ಮೊಟ್ಟ ಮೊದಲು ಅಭಿನಯಿಸಿದ ಚಿತ್ರ ಮಣಿರತ್ನಂ ನಿರ್ದೇಶನದ ತಮಿಳಿನ 'ಇರುವರ್' ಚಿತ್ರ.

English summary
Latest buzz from Sandalwood has said that Simple Suni has decided to rope in Bollywood beauty Aishwarya Rai Bachchan for the special role in the movie 'Manamohaka'. Suni, who is showing Shivanna in an ever seen and different avatar, has decided to make Manamohaka a special movie for Kannadigas.
Please Wait while comments are loading...