»   » ಅಜೇಯ್ ರಾವ್ ಗೆ ಎದುರಾಗಿದೆ ಆರ್ಥಿಕ ಸಂಕಷ್ಟ

ಅಜೇಯ್ ರಾವ್ ಗೆ ಎದುರಾಗಿದೆ ಆರ್ಥಿಕ ಸಂಕಷ್ಟ

By: ಹರಾ
Subscribe to Filmibeat Kannada

ಹೀರೋಗಳು ನಿರ್ಮಾಪಕರಾಗುವುದು ಹೊಸದೇನಲ್ಲ. ಸ್ಯಾಂಡಲ್ ವುಡ್ ನಿಂದ ಹಿಡಿದು ಬಾಲಿವುಡ್, ಕಾಲಿವುಡ್, ಟಾಲಿವುಡ್, ಹಾಲಿವುಡ್ ವರೆಗೂ ದೊಡ್ಡ ದೊಡ್ಡ ಹೀರೋಗಳು ಪ್ರೊಡ್ಯೂಸರ್ ಗಳಾಗಿದ್ದಾರೆ. ತಮ್ಮದೇ ಸ್ವಂತ ಪ್ರೊಡಕ್ಷನ್ ಕಂಪನಿ ನಡೆಸುತ್ತಿದ್ದಾರೆ. ಇದು ದೊಡ್ಡ ವಿಷ್ಯ ಅಲ್ಲವೇ ಅಲ್ಲ.

ದೊಡ್ಡ ಸುದ್ದಿಯಾಗುವುದು ಯಾವಾಗ ಅಂದ್ರೆ, ಹೀರೋ ಪ್ರೊಡ್ಯೂಸರ್ ಆಗಿ ಲಾಸ್ ಆದಾಗ! ಕೆಲ ಹೀರೋಗಳಂತೂ, ನಟನಾಗಿ ಸಂಪಾದಿಸಿದ ಹಣವನ್ನೆಲ್ಲಾ ಪ್ರೊಡ್ಯೂಸರ್ ಆಗಿ ಕಳೆದುಕೊಂಡಿರುವ ಜೀವಂತ ಉದಾಹರಣೆ ನಮ್ಮ ಕಣ್ಮುಂದಿವೆ.

Ajay Rao1

ಇಂಥವರ ಮಧ್ಯೆ ನಮ್ಮ ಸ್ಯಾಂಡಲ್ ವುಡ್ ಕೃಷ್ಣ ಬಯಸಿ ಬಯಸಿ ನಿರ್ಮಾಪಕನಾಗಿ, ಇದ್ದ ಬದ್ದ ದುಡ್ಡನ್ನೆಲ್ಲಾ ಸುರಿದು, ಈಗ ''ಬೇಗ ದುಡ್ಡು ಕೊಡಿಸಿ ಸಾರ್'' ಅಂತ ಬೇಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಎಲ್ಲರಿಗೂ ಗೊತ್ತಿರುವ ಹಾಗೆ, ಸ್ಮೈಲಿಂಗ್ ಕೃಷ್ಣ ಅಲಿಯಾಸ್ ಅಜೇಯ್ ರಾವ್ ಈಗ ನಿರ್ಮಾಪಕನ ಪಟ್ಟಕ್ಕೇರಿದ್ದಾರೆ. 'ಶ್ರೀ ಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಬ್ಯಾನರ್' ನಡಿ 'ಕೃಷ್ಣಲೀಲಾ' ಚಿತ್ರಕ್ಕೆ ಬಂಡವಾಳ ಹಾಕಿರುವ ಅಜೇಯ್ ರಾವ್ ಖಜಾನೆ ಈಗ ಸಂಪೂರ್ಣವಾಗಿ ಖಾಲಿಯಾಗಿದೆ ಅಂತೆ. [ನಿರ್ಮಾಪಕ ಅಜೇಯ್ ರಾವ್ ಜೇಬು ಖಾಲಿ ಖಾಲಿ!]

Ajay Rao2

ಶಶಾಂಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಕೃಷ್ಣಲೀಲಾ' ಚಿತ್ರಕ್ಕೆ ಯಾವುದೇ ರೀತಿಯಲ್ಲೂ ಕಾಂಪ್ರಮೈಸ್ ಆಗಬಾರದು ಅಂತ ಉದಾರ ಮನೋಭಾವದಿಂದ ಖರ್ಚು ಮಾಡಿರುವ ಪರಿಣಾಮ, ಅಜೇಯ್ ಈಗ ''ಪೈಸಾ ಪೈಸಾ'' ಅಂತ ಬಾಯ್ಬಾಯಿ ಬಿಡುತ್ತಿದ್ದಾರಂತೆ.

ತಮ್ಮ 'ಕೃಷ್ಣಲೀಲಾ' ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಂದ ಹಾಡಿಸಿದ್ದ ಅಜೇಯ್, ಭರ್ಜರಿ ಪ್ರಚಾರವನ್ನೇನೋ ಗಿಟ್ಟಿಸುತ್ತಿದ್ದಾರೆ. ಆದ್ರೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಇನ್ನೂ ನಡೆಯುತ್ತಲೇ ಇರುವುದರಿಂದ ಅಜೇಯ್ ಗೆ ದಿನದಿಂದ ದಿನಕ್ಕೆ ಬಿಪಿ ಜಾಸ್ತಿಯಾಗುತ್ತಿದೆ.

Ajay Rao3

ಇದ್ರಿಂದ ಸುಸ್ತಾಗಿರುವ ಅಜೇಯ್ ''ಹೇಗೋ ಒಂದು ಬೇಗ ಮುಗಿಸಿ, ನನಗೆ ಕಾಸು ಕೊಡಿಸಿ ಸಾರ್'' ಅಂತ ನಿರ್ದೇಶಕ ಶಶಾಂಕ್ ಬಳಿ ಬೇಡಿಕೊಳ್ಳುತ್ತಿದ್ದಾರಂತೆ. ಅಜೇಯ್ ಪರಿಸ್ಥಿತಿಯನ್ನು ನೋಡಿ ನಗುವುದಕ್ಕೂ ಆಗದೆ, ಅಳುವುದಕ್ಕೂ ಆಗದೆ ಸದ್ಯಕ್ಕೆ 'ಪೆಸಲ್ ಸಾಂಗ್' ರಿಲೀಸ್ ಮಾಡಿ ಪ್ರಚಾರ ಕಾರ್ಯಕ್ಕೆ ಶಶಾಂಕ್ ಚಾಲನೆ ಕೊಟ್ಟಿದ್ದಾರೆ.

ಇದೇ ತಿಂಗಳ 20 ಕ್ಕೆ 'ಕೃಷ್ಣಲೀಲಾ' ಆಡಿಯೋ ರಿಲೀಸ್ ಆಗುತ್ತಿದೆ. ಜನವರಿಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಲ್ಲಿವರೆಗೂ ಅಜೇಯ್ ಅದ್ಹೇಗೆ ನಿಭಾಯಿಸುತ್ತಾರೋ ಪಾಪ...ಬಹುಶಃ ಅಜೇಯ್ ಪರಿಸ್ಥಿತಿಯನ್ನ ನೋಡೇ ಸಂಗೀತ ನಿರ್ದೇಶಕರು ''ಜೇಬು ಖಾಲಿ ಆದ್ರೂ ನಗುವವನೇ ಪೆಸಲ್ ಮ್ಯಾನ್'' ಅಂತ ಹಾಡು ಬರೆದಿರಬೇಕು..!? (ಫಿಲ್ಮಿಬೀಟ್ ಕನ್ನಡ)

English summary
Actor Ajay Rao of Krishnan Love Story fame is facing financial crisis after becoming Producer for the movie Krishna Leela. Ajay Rao is on his toes to release the movie to pay off debts.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada