For Quick Alerts
  ALLOW NOTIFICATIONS  
  For Daily Alerts

  ಹೊಸ ಬಿಗ್‌ಬಾಸ್‌ಗೆ ನಾಗಾರ್ಜುನ ಪಡೆಯುತ್ತಿರುವ ಸಂಭಾವನೆ ಇಷ್ಟೋಂದಾ?

  |

  ಮತ್ತೆ ಬಿಗ್‌ಬಾಸ್ ಶಖೆ ಪ್ರಾರಂಭವಾಗಿದೆ. ಕನ್ನಡದಲ್ಲಿ ಈಗಾಗಲೇ ಬಿಗ್‌ಬಾಸ್ ಒಟಿಟಿ ಕನ್ನಡ ಪ್ರಸಾರವಾಗುತ್ತಿದೆ. ಅದು ಮುಗಿಯುತ್ತಿದ್ದಂತೆ ಟಿವಿ ಬಿಗ್‌ಬಾಸ್ ಪ್ರಾರಂಭವಾಗಲಿದೆ.

  ಇದೀಗ ತೆಲುಗಿನಲ್ಲಿಯೂ ಬಿಗ್‌ಬಾಸ್ ಹೊಸ ಸೀಸನ್ ಪ್ರಾರಂಭವಾಗುತ್ತಿದೆ. ತೆಲುಗು ಬಿಗ್‌ಬಾಸ್‌ನ ಆರಂಭದ ಕೆಲವು ಸೀಸನ್‌ಗಳು ಅಷ್ಟೇನೂ ಉತ್ತಮ ಪ್ರದರ್ಶನ ನೀಡಿರಲಿಲ್ಲ ಆದರೆ ಕಳೆದೆರಡು ಸೀಸನ್‌ನಿಂದ ದಾಖಲೆ ಸಂಖ್ಯೆಯ ಟಿಆರ್‌ಪಿಯನ್ನು ಈ ಶೋ ಗಳಿಸುತ್ತಿದ್ದು, ಒಂದರ ಹಿಂದೊಂದು ಸೀಸನ್‌ಗಳು ಬರುತ್ತಿವೆ.

  ಉದಯ್ ಹಿಂದಿನಿಂದ ತಬ್ಬಿಕೊಂದು ಮುತ್ತು ಕೊಡ್ತಾನೆ: ಬಿಗ್‌ಬಾಸ್ ಮನೆಯ ಹೆಣ್ಮಕ್ಳ ದೂರುಉದಯ್ ಹಿಂದಿನಿಂದ ತಬ್ಬಿಕೊಂದು ಮುತ್ತು ಕೊಡ್ತಾನೆ: ಬಿಗ್‌ಬಾಸ್ ಮನೆಯ ಹೆಣ್ಮಕ್ಳ ದೂರು

  ಕಳೆದ ಮೂರು ಸೀಸನ್‌ ಅನ್ನು ನಟ ನಾಗಾರ್ಜುನ ನಿರೂಪಣೆ ಮಾಡುತ್ತಿದ್ದು, ಇವರ ನಿರೂಪಣೆಯೂ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ. ಇದೀಗ ಹೊಸ ಸೀಸನ್ ಶುರುವಾಗಲಿದ್ದು, ಹೊಸ ಸೀಸನ್‌ಗೆ ದೊಡ್ಡ ಮೊತ್ತದ ಸಂಭಾವನೆಯನ್ನು ನಾಗಾರ್ಜುನ ಪಡೆಯುತ್ತಿದ್ದಾರೆ.

  ತೆಲುಗು ಬಿಗ್‌ಬಾಸ್‌ನ ಸೀಸನ್ ಆರು, ಸೆಪ್ಟೆಂಬರ್ 4 ರಿಂದ ಪ್ರಾರಂಭವಾಗಲಿದೆ. ಶೋನ ಹೊಸ ಪ್ರೋಮೋ ಈಗಾಗಲೇ ಬಿಡುಗಡೆ ಆಗಿದ್ದು, ನಾಗಾರ್ಜುನ ಅವರೇ ಈ ಶೋ ಅನ್ನು ನಿರೂಪಣೆ ಮಾಡಲಿರುವುದು ಖಾತ್ರಿ. ಬಿಗ್‌ಬಾಸ್ ಒಟಿಟಿ ಶೋ ಅನ್ನೂ ಅವರು ಹೋಸ್ಟ್ ಮಾಡಲಿದ್ದಾರೆ.

  ತೆಲುಗಿನಲ್ಲಿ ಬಿಗ್‌ಬಾಸ್ ಸೀಸನ್‌ನಿಂದ ಸೀಸನ್‌ಗೆ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಕಾರಣ ನಾಗಾರ್ಜುನ ಅವರ ಸಂಭಾವನೆಯೂ ಏರಿಕೆ ಆಗುತ್ತಿದೆ. ಕಳೆದ ಸೀಸನ್‌ಗೆ ಅವರು ಒಂದು ಎಪಿಸೋಡ್‌ಗೆ 12 ಲಕ್ಷ ಸಂಭಾವನೆ ಪಡೆದಿದ್ದರು. ಅಲ್ಲಿಗೆ ಎಲ್ಲ ಎಪಿಸೋಡ್‌ಗಳನ್ನು ಸೇರಿಸಿ ಸುಮಾರು 12 ಕೋಟಿ ಸಂಭಾವನೆ ಪಡೆದಿದ್ದರು. ಆದರೆ ಈ ಹೊಸ ಸೀಸನ್‌ಗೆ ನಾಗಾರ್ಜುನ ಬರೋಬ್ಬರಿ 15 ಕೋಟಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

  ಈ ಬಾರಿ ತೆಲುಗು ಬಿಗ್‌ಬಾಸ್ ಶೋನಲ್ಲಿ ಯಾವ-ಯಾವ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಾರಿ ದೀಪಿಕಾ ಪಿಲ್ಲಿ, ನೇಹಾ ಚೌಧರಿ, ಆಂಕರ್ ಉದಯ್ ಭಾನು, ನಟ ಅಮರ್‌ದೀಪ್, ಆದಿ ರೆಡ್ಡಿ, ಚಾಲಾಕಿ ಚಂಟಿ, ಗೀತು ರಾಯಲ್, ಕೋರಿಯಾಗ್ರಫರ್ ಪೋಪಿ ಮಾಸ್ಟರ್, ಶ್ರೀ ಸತ್ಯ, ಆರ್‌ಜೆ ಸೂರ್ಯ ಅವರುಗಳು ಬಿಗ್‌ಬಾಸ್ ಮನೆಯ ಒಳಗೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ, ಟಿವಿ ಹಾಗೂ ಇತರೆ ರಂಗಗಳಿಂದ ಸ್ಪರ್ಧಿಗಳನ್ನು ಆರಿಸಲಾಗಿದೆ.

  English summary
  Actor Akkineni Nagarjuna charging high remuneration for Bigg Boss season 06. Season will start telecast from September 06.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X