For Quick Alerts
  ALLOW NOTIFICATIONS  
  For Daily Alerts

  ಕತ್ರಿನಾ ಮದುವೆಗೂ ಮುನ್ನ ಆಲಿಯಾ ರಣ್‌ಬೀರ್ ಮನೆಯಲ್ಲಿ ಸಂಭ್ರಮ: ಯಾವಾಗ ನಿಶ್ಚಿತಾರ್ಥ?

  |

  ಈ ವರ್ಷ ಬಾಲಿವುಡ್‌ನಲ್ಲಿ ಸಂಭ್ರಮವೋ ಸಂಭ್ರಮ. ಸ್ಟಾರ್ ನಟ ನಟಿಯರೆಲ್ಲಾ ಮದುವೆ, ನಿಶ್ಚಿತಾರ್ಥ ಅಂತ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ವಿಭಿನ್ನ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆಯುವ ಬಾಲಿವುಡ್‌ ನಟ ರಾಜ್‌ಕುಮಾರ್ ರಾವ್ ತನ್ನ ಬಹುಕಾಲದ ಗೆಳತಿ ಹಾಗೂ ನಟಿಯೂ ಆಗಿರುವ ಪತ್ರಲೇಖಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಾಲ್‌ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ನಿಶ್ಚಿತಾರ್ಥದ ಬಗ್ಗೆನೂ ಸುದ್ದಿ ಹರಿದಾಡುತ್ತಿದೆ.

  ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಬಾಲಿವುಡ್ ಲವ್‌ಬರ್ಡ್ಸ್ ಅನ್ನುವುದು ರಹಸ್ಯವಾಗಿ ಉಳಿದಿಲ್ಲ. ಮೊದಲು ಕದ್ದು ಮುಚ್ಚಿ ಓಡಾಡುತ್ತಿದ್ದ ಜೋಡಿ ಈಗ ರಾಜಾ ರೋಷವಾಗೇ ಮದುವೆ, ಡೇಟಿಂಗ್ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದೆ. ಸದ್ಯ ಇಬ್ಬರೂ ಎಂಗೇಜ್ ಆಗಲಿದ್ದಾರೆ ಅನ್ನುವ ಮಾತು ಬಾಲಿವುಡ್‌ನಲ್ಲಿ ಓಡಾಡುತ್ತಿದೆ.

  ಇದೇ ನವೆಂಬರ್‌ನಲ್ಲಿ ಆಲಿಯಾ-ರಣ್‌ಬೀರ್ ನಿಶ್ಚಿತಾರ್ಥ

  ಕಳೆದೊಂದು ವರ್ಷದಿಂದ ಬಾಲಿವುಡ್‌ನಲ್ಲಿ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಮದುವೆ ವಿಷಯ ಕೇಳಿ ಬರುತ್ತಲೇ ಇದೆ. ಇನ್ನೇನು ಮದುವೆ ಆಗೇ ಬಿಟ್ರು ಅನ್ನುವಷ್ಟು ಸುದ್ದಿಗಳು ಹಬ್ಬಿದ್ದವು. ಕಳೆದ ವರ್ಷ ಡಿಸೆಂಬರ್‌ನಲ್ಲೇ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತೆ ಅಂತಲೇ ಬಾಲಿವುಡ್ ಮಾತಾಡಿಕೊಂಡಿತ್ತು. ಆದರೆ, 2022 ಡಿಸೆಂಬರ್ ಬರುತ್ತಿದೆ. ಆದರೂ ಇಬ್ಬರೂ ಮದುವೆ ಆಗುವ ಬಗ್ಗೆ ಮಾತಾಡುತ್ತಿಲ್ಲ. ಆದರೆ, ಇದೇ ತಿಂಗಳಲ್ಲಿ ಇಬ್ಬರೂ ಎಂಗೇಜ್ ಆಗಲಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ.

  ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ರಾಜಸ್ಥಾನದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಿದ್ದಾರಂತೆ. ನವೆಂಬರ್ 21ಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದು, ರಣ್‌ವೀರ್ ಕಪೂರ್ ಇದೇ ಕಾರಣಕ್ಕೆ ರಾಜಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಆಲಿಯಾ ಗೆಳತಿ ಅನುಷ್ಕಾ ರಂಜನ್ ಮದುವೆ ವೇಳೆನೇ ಆಲಿಯಾ, ರಣ್‌ಬೀರ್ ಕೂಡ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  ರಣ್‌ಬೀರ್ ಮಾಜಿ ಗರ್ಲ್‌ಫ್ರೆಂಡ್ ಕತ್ರಿನಾ ಕೈಫ್ ಮದುವೆಗೂ ಮುನ್ನ ನಿಶ್ಚಿತಾರ್ಥ

  ರಣ್‌ಬೀರ್ ಕಪೂರ್ ಮಾಜಿ ಗೆಳತಿ ಬಾಲಿವುಡ್ ಸೆನ್ಸೇಷನ್ ಕತ್ರಿನಾ ಕೈಫ್ ಡಿಸೆಂಬರ್‌ನಲ್ಲಿ ವಿವಾಹವಾಗುತ್ತಿದ್ದಾರೆ. 'ಉರಿ' ಸಿನಿಮಾದ ನಾಯಕ ನಟ ವಿಕ್ಕಿ ಕೌಶಾಲ್ ಜೊತೆ ಡಿಸೆಂಬರ್ ಮೊದಲ ವಾರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಜಸ್ಥಾನದಲ್ಲಿ ಡಿಸೆಂಬರ್ 7 ರಿಂದ 12ರ ವರೆಗೆ ಈ ವಿವಾಹ ಸಂಭ್ರಮ ಜರುಗಲಿದ್ದು, ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಮಾಜಿ ಗೆಳತಿ ಕತ್ರಿಕಾ ಕೈಫ್ ವಿವಾಹಕ್ಕೂ ಮುನ್ನವೇ ರಣ್‌ಬೀರ್ ಕಪೂರ್ ಆಲಿಯಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ ಅನ್ಉವ ಸುದ್ದಿ ಬಾಲಿವುಡ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ.

  Alia Bhatt and Ranbir Kapoor getting engaged in Rajasthan this November 21st?

  ರಣ್‌ಬೀರ್ ರಾಜಸ್ಥಾನಕ್ಕೆ ಭೇಟಿ ಕೊಟ್ಟಿದ್ದೇಕೆ?

  ರಣ್‌ಬೀರ್ ಕಪೂರ್ ಇತ್ತೀಚೆಗೆ ನಿಶ್ಚಿತಾರ್ಥದ ತಯಾರಿ ಮಾಡಲೆಂದೇ ರಾಜಸ್ಥಾನ ಹೋಗಿ ಬಂದಿದ್ದಾರೆ ಅಂತ ಹೇಳಲಾಗುತ್ತಿದೆ. ಆದರೆ, ನವೆಂಬರ್ 21ರಂದೇ ಆಲಿಯಾ ಗೆಳತಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ರಂಜನ್ ಅವರ ವಿವಾಹವೂ ನಡೆಯಲಿದೆ. ಹೀಗಾಗಿ ಆಲಿಯಾ ಹಾಗೂ ರಣ್‌ಬೀರ್ ಕಪೂರ್ ಇಬ್ಬರೂ ಮುಂದೆ ನಿಂತು ಗೆಳತಿಯ ಮದುವೆ ನಡೆಸಿಕೊಡಲಿದ್ದಾರೆ. ಹೀಗಾಗಿ ಪೂರ್ವ ತಯಾರಿ ಹೇಗಿದೆ ಎಂದು ನೋಡಲು ರಣ್‌ಬೀರ್ ಕಪೂರ್ ರಾಜಸ್ಥಾನಕ್ಕೆ ಹೋಗಿದ್ದರು ಅನ್ನುವ ಮಾತು ಕೂಡ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಆಲಿಯಾ ಭಟ್ ರಣ್‌ಬೀರ್ ಕಪೂರ್ ಮದುವೆ ನೋಡಲು ಇಡೀ ಬಾಲಿವುಡ್ ಕಾದು ಕೂತಿದೆ. ಆದರೆ, ಈ ಜೋಡಿ ಮಾತ್ರ ಇನ್ನೂ ವಿವಾಹದ ವಿಚಾರದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಲೇ ಇದೆ.

  English summary
  Alia Bhatt and Ranbir Kapoor will get married soon. Now, there have been rumours that they will be getting engaged in november 21st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X