For Quick Alerts
  ALLOW NOTIFICATIONS  
  For Daily Alerts

  Alia Bhatt: ಚಿತ್ರದಲ್ಲಿ ಆಲಿಯಾ ಪಾತ್ರಕ್ಕೆ ಕತ್ತರಿ, ರಾಜಮೌಳಿ ವಿರುದ್ಧ ಮುನಿಸಿಕೊಂಡ ನಟಿ!

  |

  ಬಾಲಿವುಡ್ ತಾರೆ ಆಲಿಯಾ ಭಟ್, ರಾಜಮೌಳಿ ನಿರ್ದೇಶನದ 'RRR' ಚಿತ್ರದ ಮೂಲಕ ಸೌತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಆರ್‌ಆರ್‌ಆರ್' ಚಿತ್ರದಲ್ಲಿನ ಆಲಿಯಾ ಪಾತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಆಲಿಯಾ ಕೂಡ ಈ ಚಿತ್ರದ ಭಾಗ ಆಗಿದ್ದಕ್ಕೆ ಹಲವು ಸಂತಸ ವ್ಯಕ್ತ ಪಡಿಸಿದ್ದರು.

  ಚಿತ್ರದಲ್ಲಿ ಇಬ್ಬರೂ ಸ್ಟಾರ್ ನಟರಿದ್ದರೂ, ಆಲಿಯಾ ಒಬ್ಬಳೇ ನಾಯಕಿ. ಹಾಗಾಗಿ ಚಿತ್ರದಲ್ಲಿ ಆಲಿಯಾ ಪಾತ್ರಕ್ಕೆ ತುಂಬಾನೆ ಪ್ರಾಮುಖ್ಯತೆ ಇರುತ್ತೆ ಎಂದು ಹೇಳಲಾಗಿತ್ತು. ಅಂತೆಯೆ ಆಲಿಯಾ ಪಾತ್ರಕ್ಕೆ ಚಿತ್ರದಲ್ಲಿ ಪ್ರಾಮುಖ್ಯತೆ ಇದೆ. ಆದರೆ ಆಲಿಯಾ ಹೆಚ್ಚು ಹೊತ್ತು ಸಿನಿಮಾದಲ್ಲಿ ಇರುವುದಿಲ್ಲ. ನಿಯಮಿತ ದಶ್ಯಗಳಲ್ಲಿ ಮಾತ್ರವೆ ಆಲಿಯಾ ಬಂತು ಹೋಗುತ್ತಾರೆ. ಹಾಗಾಗಿ ಆಕೆಯ ಪಾತ್ರ ಅಷ್ಟೇನು ಪ್ರಭಾವ ಬೀರುವುದಿಲ್ಲ.

  RRR ಕಾರಣಕ್ಕೆ ಚಿತ್ರಮಂದಿರ ಸಿಗದೆ ಪರದಾಡುತ್ತಿರುವ ಕನ್ನಡ ಸಿನಿಮಾಗಳು!RRR ಕಾರಣಕ್ಕೆ ಚಿತ್ರಮಂದಿರ ಸಿಗದೆ ಪರದಾಡುತ್ತಿರುವ ಕನ್ನಡ ಸಿನಿಮಾಗಳು!

  ಇದೇ ವಿಚಾರಕ್ಕೆ ಆಲಿಯಾ ಈಗ ಮುನಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ನಟಿ ಆಲಿಯಾ ನಿರ್ದೇಶಕ ರಾಜಮೌಳಿ ವಿರುದ್ಧ ಅಸಮಾಧಾನಗೊಂಡಿದ್ದಾರಂತೆ. ಹಾಗಾಗಿ RRR ಚಿತ್ರದ ಪೋಸ್ಟ್ ಡಿಲೀಟ್ ಮಾಡಿ, ನಿರ್ದೇಶಕ ರಾಜಮೌಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅನ್‌ಫಾಲೋ ಮಾಡಿದ್ದಾರೆ ಎನ್ನಲಾಗಿದೆ.

  Actresses who reject RRR: ರಾಜಮೌಳಿ ಸಿನಿಮಾ ತಿರಸ್ಕರಿಸಿ ಮೋಸ ಹೋದ ನಟಿಯರು!Actresses who reject RRR: ರಾಜಮೌಳಿ ಸಿನಿಮಾ ತಿರಸ್ಕರಿಸಿ ಮೋಸ ಹೋದ ನಟಿಯರು!

  ರಾಜಮೌಳಿ ವಿರುದ್ಧ ಮುನಿಸಿಕೊಂಡ ಆಲಿಯಾ ಭಟ್!

  ರಾಜಮೌಳಿ ವಿರುದ್ಧ ಮುನಿಸಿಕೊಂಡ ಆಲಿಯಾ ಭಟ್!

  ನಟಿ ಆಲಿಯಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ RRR ಚಿತ್ರದ ಬಗ್ಗೆ ಪೋಸ್ಟ್‌ಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದಾರಂತೆ. ಅಷ್ಟೆ ಅಲ್ಲ ನಿರ್ದೇಶಕ ರಾಜಮೌಳಿಯನ್ನು ಅನ್‌ಫಾಲೋ ಮಾಡಿದ್ದಾರೆ ಎನ್ನುವುದು ವರದಿ ಆಗಿದೆ. ಇದಕ್ಕೆ ಕಾರಣ ಮತ್ಯಾರು ಅಲ್ಲ ಸ್ವತಃ ನಿರ್ದೇಶಕ ರಾಜಮೌಳಿ ಎಂದು ಹೇಳಲಾಗುತ್ತಿದೆ. ಹೌದು RRR ಚಿತ್ರದಲ್ಲಿ ಆಲಿಯಾ ಪಾತ್ರವನ್ನು ಚಿಕ್ಕದಾಗಿಸಿ ಆಲಿಯಾ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಮ್ಮ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎನ್ನುವ ಕಾರಣಕ್ಕೆ ಆಲಿಯಾ RRR ಚಿತ್ರತಂಡದ ವಿರುದ್ಧ ಮುನಿಸಿಕೊಂಡಿದ್ದಾರಂತೆ.

  RRR ನಲ್ಲಿ ಆಲಿಯಾ ಪಾತ್ರ ಟ್ರಿಮ್!

  RRR ನಲ್ಲಿ ಆಲಿಯಾ ಪಾತ್ರ ಟ್ರಿಮ್!

  RRR ಚಿತ್ರದಲ್ಲಿ ಆಲಿಯಾ ಭಟ್ ಪಾತ್ರವನ್ನು ಹೆಚ್ಚಾಗಿ ಚಿತ್ರೀಕರಿಸಲಾಗಿದ್ದು, ಅದನ್ನು ಟ್ರಿಮ್ ಮಾಡಲಾಗಿದೆಯಂತೆ. ಈ ವಿಚಾರ ಆಲಿಯಾ ಮೊದಲೆ ಗೊತ್ತಿರಲಿಲ್ಲವಂತೆ. ಚಿತ್ರವನ್ನು ದೊಡ್ಡ ಪರದೆ ಮೇಲೆ ನೋಡಿದಾಗಲೇ ತಮ್ಮ ಪಾತ್ರವನ್ನು ಟ್ರಿಮ್ ಮಾಡಿರುವು ತಿಳಿದು ಬಂದಿದೆ. ಹಾಗಾಗಿ ಆಲಿಯಾ ಭಟ್ ರಾಮೌಳಿ ಬಗ್ಗೆ ಬೇಸರಗೊಂಡಿದ್ದಾರೆ ಎಂದು ಬಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಾ ಇದೆ. ಇದಕ್ಕೆ ತಕ್ಕಂತೆ ನಟಿ ಆಲಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದ ಪೋಸ್ಟ್‌ಗಳನ್ನು ಡಿಲಿಟ್ ಮಾಡಿದ್ದಾರೆ. ಸ್ಟೋರಿಯಲ್ಲಿ ಮಾತ್ರ ಒಂದು ಪೋಟೋ ಉಳಿಸಿಕೊಂಡಿದ್ದಾರೆ.

  RRR ಚಿತ್ರದಲ್ಲಿ ಆಲಿಯಾ ಪಾತ್ರ ಹೇಗಿದೆ!

  RRR ಚಿತ್ರದಲ್ಲಿ ಆಲಿಯಾ ಪಾತ್ರ ಹೇಗಿದೆ!

  RRR ಚಿತ್ರ ಎಂದರೆ ಮೊದಲು ನೆನಪಾಗೋದೆ ನಟ ರಾಮ್‌ ಚರಣ್ ಮತ್ತು ಜೂ.ಎನ್‌ಟಿಆರ್. ಈ ಚಿತ್ರದ ಪ್ರಮುಖ ಜೀವಾಳ ಅಂದರೆ ಈ ಇಬ್ಬರು ನಾಯಕ ನಟರು. ಬೆಂಕಿ, ನೀರಾಗಿ ಇಬ್ಬರು ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಸಿನಿಮಾದಲ್ಲಿ ಆಲಿಯಾ, ರಾಮ್‌ ಚರಣ್‌ಗೆ ಅತ್ತೆ ಮಗಳು. ಹಾಗಾಗಿ ರಾಮ್‌ ಚರಣ್ ಲವ್ ಇಂಟ್ರಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ರಾಮ್‌ಚರಣ್ ಮತ್ತು ಜೂ.ಎನ್‌ಟಿಆರ್ ನಡುವೆ ಭಿನ್ನಾಭಿಪ್ರಾಯ ಬಂದಾಗ ಅದನ್ನು ತಿಳಿಗೊಳಿಸುವುದು, ಜೂ ಎನ್ ಟಿಆರ್ ಪಾತ್ರಕ್ಕೆ ಸತ್ಯ ಅರಿವಾಗುವಂತೆ ಮಾಡುವುದು ಆಲಿಯಾ ಭಟ್ ಪಾತ್ರವೆ.

  ಆಲಿಯಾಗೆ RRRನಲ್ಲಿ ಬೆರಳೆಣಿಕೆಯ ದೃಶ್ಯಗಳು!

  ಆಲಿಯಾಗೆ RRRನಲ್ಲಿ ಬೆರಳೆಣಿಕೆಯ ದೃಶ್ಯಗಳು!

  ನಟಿ ಆಲಿಯಾ ಭಟ್‌ ಪಾತ್ರ ಸಿನಿಮಾ ನೋಡಿದವರ ಮನಸ್ಸಲ್ಲಿ ಅಷ್ಟಾಗಿ ಉಳಿಯುವುದಿಲ್ಲ. ಬೆರಳೆಣಿಕೆಯ ದೃಶ್ಯಗಳಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್‌ ಆಫ್‌ನಲ್ಲಿ ಕೇವಲ ಒಂದು ದೃಶ್ಯದಲ್ಲಿ ಮಾತ್ರ ಆಲಿಯಾ ಕಾಣಿಸಿಕೊಳ್ಳುತ್ತಾರೆ. ನಂತರ ಸೆಕೆಂಡ್‌ ಆಫ್‌ನಲ್ಲಿ ಆಗಾಗ ಬಂದು ಹೋಗುತ್ತಾರೆ. ಜೊತೆಗೆ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ದೃಶ್ಯ ಬಿಟ್ಟರೆ ಮತ್ಯಾವ ದೃಶ್ಯಗಳು ಆಕೆಯ ಪಾತ್ರಕ್ಕೆ ಅಷ್ಟು ಪ್ರಮುಖ ಅನಿಸುವುದಿಲ್ಲ.

  English summary
  Alia Bhatt Unhappy With Rajamouli Because Her Roll Trimmed In RRR, She Delete All Insta Posts
  Tuesday, March 29, 2022, 13:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X