For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್‌ ನಂತರ ಮತ್ತೊಂದು ಸೌತ್ ಚಿತ್ರದಲ್ಲಿ ಆಲಿಯಾ ಭಟ್‌?

  |

  ಬಾಲಿವುಡ್ ನಟಿ ಆಲಿಯಾ ಭಟ್ ದಕ್ಷಿಣಕ್ಕೆ ಬಂದಿದ್ದಾರೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಲ್ಲುರಿ ಸೀತಾ ರಾಮರಾಜು ಪಾತ್ರದಲ್ಲಿ ನಟಿಸುತ್ತಿರುವ ರಾಮ್ ಚರಣ್ ತೇಜಗೆ ಜೋಡಿಯಾಗಿ ಆಲಿಯಾ ಭಟ್ ಅಭಿನಯಿಸುತ್ತಿದ್ದಾರೆ. ತೆಲುಗಿನಲ್ಲಿ ಆಲಿಯಾ ಭಟ್ ನಟಿಸಿರುವ ಮೊದಲ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಅಷ್ಟರೊಳಗೆ ಮತ್ತೊಂದು ಮೆಗಾ ಚಿತ್ರದಲ್ಲಿ ಹೈವೇ ಸುಂದರಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಕೊರಟಲಾ ಶಿವ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ NTR30 ಚಿತ್ರದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸುವ ಸಾಧ್ಯತೆ ಹೆಚ್ಚಿದೆಯಂತೆ. ಈ ಕುರಿತು ಮಾತುಕತೆ ಸಹ ಆಗಿದ್ದು, ಪಾಸಿಟಿವ್ ರೆಸ್‌ಪಾನ್ಸ್ ಬಂದಿದೆ ಎನ್ನುವ ಸುದ್ದಿ ಟಾಲಿವುಡ್‌ ಮಾಯಾನಗರಿಯಲ್ಲಿ ಚರ್ಚೆಯಾಗುತ್ತಿದೆ. ಆಲಿಯಾ ಭಟ್ ಮಾತ್ರವಲ್ಲ ಆಕೆಯ ಜೊತೆ ಮತ್ತೊಬ್ಬ ಬಾಲಿವುಡ್ ನಟಿಯ ಹೆಸರು ಸುದ್ದಿಯಲ್ಲಿದೆ. ಮುಂದೆ ಓದಿ....

  ಆಲಿಯಾ ಭಟ್‌ಗೆ ಹೊಸ ಜವಾಬ್ದಾರಿ ಕೊಟ್ಟ 'ಆರ್‌ಆರ್‌ಆರ್‌' ಚಿತ್ರತಂಡಆಲಿಯಾ ಭಟ್‌ಗೆ ಹೊಸ ಜವಾಬ್ದಾರಿ ಕೊಟ್ಟ 'ಆರ್‌ಆರ್‌ಆರ್‌' ಚಿತ್ರತಂಡ

  ಮತ್ತೆ ಕೊರಟಲಾ ಜೊತೆ ಯಂಗ್ ಟೈಗರ್

  ಮತ್ತೆ ಕೊರಟಲಾ ಜೊತೆ ಯಂಗ್ ಟೈಗರ್

  ಜನತಾ ಗ್ಯಾರೇಜ್ ಚಿತ್ರದ ಯಶಸ್ಸಿನ ನಂತರ ಜೂನಿಯರ್ ಎನ್‌ಟಿಆರ್ ಮತ್ತು ಕೊರಟಲಾ ಶಿವ ಮತ್ತೊಮ್ಮೆ ಒಂದಾಗುತ್ತಿದ್ದು, Ntr30ನೇ ಸಿನಿಮಾ ಆರಂಭವಾಗುತ್ತಿದೆ. ಈ ಪ್ರಾಜೆಕ್ಟ್‌ಗೆ ಪೂರ್ವ ತಯಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್ ಸಹ ಪ್ರಾರಂಭವಾಗಲಿದೆ.

  ಮದುವೆಯಾದ್ರೆ ರಣ್ಬೀರ್-ಆಲಿಯಾ ಡಿವೋರ್ಸ್ ಆಗುತ್ತೆ ಎಂದ ಕೆಆರ್‌ಕೆಮದುವೆಯಾದ್ರೆ ರಣ್ಬೀರ್-ಆಲಿಯಾ ಡಿವೋರ್ಸ್ ಆಗುತ್ತೆ ಎಂದ ಕೆಆರ್‌ಕೆ

  ಆಲಿಯಾ ಭಟ್ ಅಥವಾ ಕಿಯಾರಾ?

  ಆಲಿಯಾ ಭಟ್ ಅಥವಾ ಕಿಯಾರಾ?

  ಕೊರಟಲಾ ಶಿವ ಮತ್ತು ಜೂ ಎನ್‌ಟಿಆರ್ ಕಾಂಬಿನೇಷನ್‌ನ ಈ ಚಿತ್ರಕ್ಕೆ ಆಲಿಯಾ ಭಟ್ ನಾಯಕಿಯನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಆಲಿಯಾ ಭಟ್ ಪ್ರಥಮ ಆಯ್ಕೆಯಾಗಿದ್ದರೆ, 'ಭರತ್ ಅನೇ ನೇನು' ಖ್ಯಾತಿಯ ಕಿಯಾರಾ ಅಡ್ವಾಣಿ ಎರಡನೇ ಆಯ್ಕೆಯಲ್ಲಿದ್ದಾರೆ. ಒಂದು ವೇಳೆ ಆಲಿಯಾ ಈ ಪ್ರಾಜೆಕ್ಟ್‌ ಮಾಡಲ್ಲ ಅಂದ್ರೆ ಬಹುಶಃ ಈ ಅವಕಾಶ ಆಲಿಯಾಗೆ ಹೋಗಬಹುದು.

  ಅನಿರುದ್ಧ್ ಸಂಗೀತ, ರತ್ನವೇಲು ಕ್ಯಾಮೆರಾ

  ಅನಿರುದ್ಧ್ ಸಂಗೀತ, ರತ್ನವೇಲು ಕ್ಯಾಮೆರಾ

  ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಲಿದ್ದಾರೆ. ಹಾಗೆಯೇ ಯಶಸ್ವಿ ಛಾಯಾಗ್ರಾಹಕ ರತ್ನವೇಲು ಕೆಲಸ ಮಾಡಲಿದ್ದಾರೆ. ದಸರಾ ಹಬ್ಬದ ವಿಶೇಷವಾಗಿ Ntr30 ಸಿನಿಮಾದ ಪೂಜೆ ನಡೆಯುವ ನಿರೀಕ್ಷೆ ಇದೆ. ಈ ಬಗ್ಗೆ ಇದುವರೆಗೂ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

  ಆರ್‌ಆರ್‌ಆರ್‌ ಮತ್ತು ಆಚಾರ್ಯ

  ಆರ್‌ಆರ್‌ಆರ್‌ ಮತ್ತು ಆಚಾರ್ಯ

  ಪ್ರಸ್ತುತ ಜೂನಿಯರ್ ಎನ್ ಟಿ ಆರ್ ರಾಜಮೌಳಿ ನಿರ್ದೇಶನದ ಆರ್‌ ಆರ್‌ ಆರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ಆಲಿಯಾ ಭಟ್ ಸಹ ಕಾಣಿಸಿಕೊಂಡಿದ್ದು, ಇದು ಈಕೆಗೆ ಮೊದಲ ಸೌತ್ ಸಿನಿಮಾ. ಈ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರುವ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ನಿರ್ದೇಶಕ ಕೊರಟಲಾ ಶಿವ ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

  'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'

  'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'

  2012ರಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ಬಿಟೌನ್ ಪ್ರವೇಶಿಸಿದ ಆಲಿಯಾ ಭಟ್, ಹೈವೇ, 2 ಸ್ಟೇಟ್ಸ್, ಉಂಗ್ಲಿ, ಶಾಂದರ್, ಉಡ್ತಾ ಪಂಜಾಬ್, ರಾಝಿ, ಗಲ್ಲಿಬಾಯ್ ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಬಿಡುಗಡೆಯಾಗಬೇಕಿದೆ. ಬ್ರಹ್ಮಾಸ್ತ್ರ ಚಿತ್ರೀಕರಣ ಆಗ್ತಿದೆ. ಡಾರ್ಲಿಂಗ್ಸ್ ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರವೂ ಕೈಯಲ್ಲಿದೆ. ಈಗ ಎನ್‌ಟಿಆರ್ 30 ಚಿತ್ರಕ್ಕೆ ಆಫರ್ ಬಂದಿದ್ದು, ಈ ಜೋಡಿ ನೋಡಲು ಸೌತ್ ಇಂಡಸ್ಟ್ರಿ ಕಾಯ್ತಿದೆ.

  English summary
  After RRR movie Bollywood Actress Aliaa Bhatt likely to play the female lead in NTR30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X