Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬ್ರಿಟಿಷ್ ಕೋಟ್ಯಾಧಿಪತಿ ಜೊತೆ 'ವಿಲನ್' ಬೆಡಗಿ ಆಮಿ ಜಾಕ್ಸನ್ ಡೇಟಿಂಗ್.!
ಭಾರತೀಯ ನಟಿಯರನ್ನ ಹಿಂದಿಕ್ಕಿ ತನ್ನದೇ ಪ್ರತಿಭೆ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಯಶಸ್ಸು ಕಂಡಿರುವ ಬ್ರಿಟಿಷ್ ನಟಿ ಆಮಿ ಜಾಕ್ಸನ್ ಸದ್ಯ ಸೌತ್ ಇಂಡಿಯಾದ ದೊಡ್ಡ ಸ್ಟಾರ್ ನಟರ ಜೊತೆ ನಟಿಸುತ್ತಿದ್ದಾರೆ.
ಈಗಾಗಲೇ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ '2.0' ಚಿತ್ರವನ್ನ ಮುಗಿಸಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಅದರ ಹಿಂದೆಯೇ ಕನ್ನಡದ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರಗಳು : ಚಿಕ್ಕಮಗಳೂರಿನಲ್ಲಿ ಹಾಟ್ ಮಲ್ಲಿಗೆ ಆಮಿ ಜಾಕ್ಸನ್
ಹೀಗೆ, ಸತತ ಶೂಟಿಂಗ್ ನಲ್ಲಿ ಬಿಜಿಯಾಗಿದ್ದ ಆಮಿ ಜಾಕ್ಸನ್ ಈಗ ಖಾಸಗಿ ವಿಚಾರಕ್ಕೆ ಸುದ್ದಿಯಾಗಿದ್ದಾಳೆ. ಮಿಲಿಯನೇರ್ ಜೊತೆ ಡೇಟಿಂಗ್ ಮಾಡ್ತಿದ್ದು, ಇಬ್ಬರು ಫೋಟೋಗಳು ಹೊರಬಿದ್ದಿದೆ. ಮುಂದೆ ಓದಿ.....

ಆಮಿ ಸಿಂಗಲ್ ಅಲ್ಲ
ಆಮಿ ಜಾಕ್ಸನ್ ಇನ್ನು ಸಿಂಗಲ್ ಆಗಿದ್ದಾರೆ. ಯಾರೂ ಬಾಯ್ ಫ್ರೆಂಡ್ ಇಲ್ಲ ಎಂದುಕೊಂಡಿದ್ದರೇ ಅದು ಸುಳ್ಳು. ಆಮಿ ಜಾಕ್ಸನ್ ಲವ್ವಲ್ಲಿ ಇದ್ದಾರೆ. ಬ್ರಿಟಿಷ್ ಮೂಲದ ಮಿಲಿಯನೇರ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ.

ಮಿಲಿಯನೇರ್ ಜೊತೆ ಡೇಟಿಂಗ್
ಬ್ರಿಟಿಷ್ ನಾಡಿನ ಕೋಟ್ಯಧೀಶ್ವರ ಜಾರ್ಜ್ ಪಾನಾಯ್ಟೊವ್ ಅವರ ಜೊತೆ ನಟಿ ಆಮಿ ಜಾಕ್ಸನ್ ಸುತ್ತಾಡುತ್ತಿದ್ದಾರೆ. ಸ್ಟಾರ್ ಹೋಟೆಲ್ ಗಳ ಮಾಲೀಕ ಜಾರ್ಜ್ ಮತ್ತು ಆಮಿ ಇಬ್ಬರು ಪ್ರೀತಿಯಲ್ಲಿದ್ದಾರೆ ಎನ್ನಲಾಗಿದೆ.

ಇಬ್ಬರು ಪ್ರೀತಿಸುತ್ತಿದ್ದಾರೆ
ಬ್ರಿಟನ್ ಮೂಲದ ಜಾರ್ಜ್ ಪಾನಾಯ್ಟೊವ್ ಹಾಗೂ ನಟಿ ಆಮಿ ಜಾಕ್ಸನ್ ಪರಸ್ಪರ ಪ್ರೀತಿಸುತ್ತಿದ್ದಾರಂತೆ. 2015 ರಲ್ಲಿ ಭೇಟಿಯಾಗಿದ್ದ ಇವರಿಬ್ಬರಲ್ಲಿ ಪ್ರೀತಿಯ ಅಂಕುರವಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಮ್ಯಾಕ್ಸಿಕೋ ಸೇರಿದಂತೆ ಕೆಲ ಸ್ಥಳಗಳಲ್ಲಿ ಸುತ್ತಾಡಿದೆ ಈ ಜೋಡಿ. ಅಷ್ಟೇ ಅಲ್ಲದೇ ವ್ಯಾಲೆಂಟೈನ್ಸ್ ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
'ದಿ ವಿಲನ್' ಬೆಡಗಿಯ ಈ ಫೋಟೋ ಬಗ್ಗೆ ಈಗ ಬಿಸಿ ಬಿಸಿ ಚರ್ಚೆ

ಆಮಿ ಫ್ರೊಫೈಲ್ ನಲ್ಲಿ ಜಾರ್ಜ್
ಆಮಿ ಜಾಕ್ಸನ್ ಅವರ ಇನ್ಸ್ಟಾಗ್ರಾಮ್ ನಲ್ಲಿ ಜಾರ್ಜ್ ಅವರ ಜೊತೆಗಿರುವ ಫೋಟೋಗಳನ್ನ ಅಪ್ಲೌಡ್ ಮಾಡಿರುವುದು ಇಷ್ಟೆಲ್ಲಾ ಚರ್ಚೆಗೆ ಕಾರಣವಾಗಿದೆ. ಆದ್ರೆ, ಈ ಬಗ್ಗೆ ಆಮಿ ಜಾಕ್ಸನ್ ಮತ್ತು ಜಾರ್ಜ್ ಯಾರು ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ.
ಶೋ ಮ್ಯಾನ್ ಪ್ರೇಮ್ ಹುಟ್ಟುಹಬ್ಬಕ್ಕೆ ಅಪ್ಸರೆ ಆಮಿ ಜಾಕ್ಸನ್ ಮಾಡಿದ ವಿಶ್ ಹೀಗಿತ್ತು