For Quick Alerts
  ALLOW NOTIFICATIONS  
  For Daily Alerts

  'ಲೈಗರ್' ಸೋಲಿನಿಂದಾಗಿ '#NTR30' ಇಂದ ಅನನ್ಯಾ ಪಾಂಡೆ ಔಟ್?

  |

  #NTR30 ಸಿನಿಮಾ ಹಲವು ದಿನಗಳಿಂದ, ಹಲವು ಕಾರಣಗಳಿಗೆ ಸುದ್ದಿ ಆಗುತ್ತಲೇ ಇದೆ. ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವುದೇ ದೊಡ್ಡ ಪ್ರಶ್ನೆ. ಜೂನಿಯರ್ ಎನ್‌ಟಿಆರ್ ಸಿನಿಮಾ ಅಂದರೆ, ಸಾಕಷ್ಟು ನಟಿಯರು ನಟಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಈ ಚಿತ್ರಕ್ಕೆ ಹಲವರ ಹೆಸರು ಕೇಳಿಬಂದರೂ ಕೂಡ ಫೈನಲ್ ಆಗಿಲ್ಲ.

  ಮೊದಲು ಜೂನಿಯರ್ ಎನ್‌ಟಿಆರ್ ಜೊತೆಗೆ ಈ ಚಿತ್ರದಲ್ಲಿ ನಟಿ ಸಮಂತಾ ನಟಿಸುತ್ತಾರೆ ಎನ್ನಲಾಗಿತ್ತು. ಬಳಿಕ ಸಂಭಾವನೆಯ ವಿಚಾರವಾಗಿ ನಟಿ ಸಮಂತಾ ಈ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಯಿತು. ಸಮಂತಾ ಜೊತೆಗೆ ಈ ಚಿತ್ರಕ್ಕೆ ಲೈಗರ್ ನಟಿ ಅನನ್ಯಾ ಪಾಂಡೆ ಹೆಸರು ಕೂಡ ಕೇಳಿ ಬಂದಿತ್ತು.

  ಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಶುರುವಾಗುವುದು ಯಾವಾಗ? ಸಿಕ್ಕಿತು ಉತ್ತರಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಶುರುವಾಗುವುದು ಯಾವಾಗ? ಸಿಕ್ಕಿತು ಉತ್ತರ

  'ಲೈಗರ್' ಸಿನಿಮಾಗೂ ಮುನ್ನವೇ ಚಿತ್ರತಂಡ ಅನನ್ಯಾ ಪಾಂಡೆಯನ್ನು ಈ ಚಿತ್ರಕ್ಕಾಗಿ ಸಂಪರ್ಕ ಮಾಡಿದೆಯಂತೆ. ಅದರೆ 'ಲೈಗರ್' ಸಿನಿಮಾ ರಿಲೀಸ್ ಆದ ಬಳಿಕ, ಈ ಚಿತ್ರದಲ್ಲಿ ನಟಿಸೋ ಬಗ್ಗೆ ನಿರ್ಧಾರ ಮಾಡುತ್ತೇನೆ. 'ಲೈಗರ್' ಸಿನಿಮಾ ರಿಲೀಸ್ ಆಗುವ ತನಕ ನನಗೆ ಸಮಯ ಬೇಕು ಎಂದು ಅನನ್ಯಾ ಕೇಳಿದ್ದರಂತೆ.

  ಈಗ ಸಿನಿಮಾ ರಿಲೀಸ್ ಆಗಿದೆ. ಆದರೆ ಜೂನಿಯರ್ ಎನ್‌ಟಿಆರ್ 30ನೇ ಚಿತ್ರದಲ್ಲಿ ಅನನ್ಯಾ ನಟಿಸಲ್ಲ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ. ಯಾಕೆಂದರೆ 'ಲೈಗರ್' ಸಿನಿಮಾ ಸೋಲುಂಡ ಕಾರಣ, ಚಿತ್ರತಂಡವೇ ಆಕೆಯನ್ನು ಕೈ ಬಿಟ್ಟಿದೆ ಎನ್ನಲಾಗುತ್ತಿದೆ.

  Ananya Panday Out From Jr NTR 30th Film

  'ಲೈಗರ್' ಸೋಲಿನ ಎಫೆಕ್ಟ್ ಅಷ್ಟೂ ಬೇಗ ಕಡಿಮೆ ಆಗಲಾರದು. ಸಿನಿಮಾ ಬದಿಗಿಟ್ಟು ಕೇವಲ ಅನನ್ಯಾ ಪಾತ್ರ ನೀಡಿದರೆ, ಅವ್ರ ಪಾತ್ರಕ್ಕೂ ಹೆಚ್ಚಿನ ಪ್ರಶಂಸೆ ಸಿಕ್ಕಿಲ್ಲ. ಹಾಗಾಗಿ ಈ ಚಿತ್ರದ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕೆ ಈ ಚಿತ್ರದಿಂದ ಅನನ್ಯಾ ಪಾಂಡೆಯನ್ನು ಕೈಬಿಡಲಾಗಿದೆ. ಮತ್ತು ಬಾಲಿವುಡ್‌ ಟಾಪ್‌ ನಟಿಗಾಗಿ ಚಿತ್ರತಂಡ ಹುಡುಕಾಟ ನಡೆಸಿದೆ ಎನ್ನಲಾಗುತ್ತಿದೆ.

  English summary
  Ananya Panday Out From Jr NTR 30th Film, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X