For Quick Alerts
  ALLOW NOTIFICATIONS  
  For Daily Alerts

  'ಆದಿಪುರುಷ' ಚಿತ್ರದಲ್ಲಿ ಸೀತೆ ಯಾರು? ಕೀರ್ತಿ, ಕಿಯಾರಾ ಬಳಿಕ ಮತ್ತೊಂದು ಹೆಸರು

  |

  ಪ್ರಭಾಸ್ ನಟಿಸಲಿರುವ ಆದಿಪುರುಷ ಚಿತ್ರಕ್ಕೆ ಆರಂಭಕ್ಕೂ ಮುನ್ನ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಮಾಯಣದ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಮಿಂಚಲಿದ್ದಾರೆ. ಇದೀಗ, ಸೀತೆ ಪಾತ್ರಕ್ಕೆ ಯಾರು ಎಂಬ ಕುತೂಹಲ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಸೀತೆ ಪಾತ್ರಕ್ಕೆ ಸ್ಟಾರ್ ನಟಿಯರ ಹೆಸರು ಕೇಳಿ ಬರ್ತಿದ್ದು, ಇದುವರೆಗೂ ಯಾರು ಅಂತಿಮ ಆಗಿಲ್ಲ. ಕಿಯಾರಾ ಅಡ್ವಾಣಿ ಮತ್ತು ಕೀರ್ತಿ ಸುರೇಶ್ ನಂತರ ಮತ್ತೋರ್ವ ನಾಯಕಿಯ ಹೆಸರು ಸದ್ದು ಮಾಡ್ತಿದೆ. ಯಾರದು?

  'ಆದಿಪುರುಷ' ಚಿತ್ರದ ಬಜೆಟ್, VFX ಖರ್ಚು ಕೇಳಿ ದಂಗಾದ ಭಾರತ ಚಿತ್ರರಂಗ'ಆದಿಪುರುಷ' ಚಿತ್ರದ ಬಜೆಟ್, VFX ಖರ್ಚು ಕೇಳಿ ದಂಗಾದ ಭಾರತ ಚಿತ್ರರಂಗ

  ಕೀರ್ತಿನೂ ಇಲ್ಲ, ಕಿಯಾರಾನೂ ಅಲ್ಲ

  ಕೀರ್ತಿನೂ ಇಲ್ಲ, ಕಿಯಾರಾನೂ ಅಲ್ಲ

  ಆದಿಪುರುಷ ಚಿತ್ರದಲ್ಲಿ ಸೀತೆ ಪಾತ್ರಕ್ಕಾಗಿ ಸೌತ್ ಇಂಡಸ್ಟ್ರಿ ಹಾಗೂ ಬಾಲಿವುಡ್‌ ಇಂಡಸ್ಟ್ರಿಯ ಸ್ಟಾರ್ ನಟಿಯರ ಹೆಸರು ಕೇಳಿ ಬರ್ತಿದೆ. ಮೊದಲು ಕೀರ್ತಿ ಸುರೇಶ್ ಸೀತಾ ಪಾತ್ರ ಮಾಡಲಿದ್ದಾರೆ ಎನ್ನಲಾಯಿತು. ಬಳಿಕ, ಕಿಯಾರಾ ಅಡ್ವಾಣಿ ಮಾಡಬಹುದು ಎಂದು ಹೇಳಲಾಯಿತು. ಇದೀಗ, ಇಬ್ಬರು ಇಲ್ಲ ಮತ್ತೊಬ್ಬ ನಟಿ ಬರ್ತಾರೆ ಎನ್ನಲಾಗುತ್ತಿದೆ.

  ಸೀತೆ ಪಾತ್ರಕ್ಕೆ ಅನುಷ್ಕಾ ಶರ್ಮಾ!

  ಸೀತೆ ಪಾತ್ರಕ್ಕೆ ಅನುಷ್ಕಾ ಶರ್ಮಾ!

  ಕೀರ್ತಿ ಸುರೇಶ್, ಕಿಯಾರಾ ಅಡ್ವಾಣಿ ನಂತರ ಈಗ ಅನುಷ್ಕಾ ಶರ್ಮಾ ಹೆಸರು ಬಲವಾಗಿ ಕೇಳಿ ಬರ್ತಿದೆ. ವಿರಾಟ್ ಪತ್ನಿಯನ್ನು ಸೀತೆಯನ್ನಾಗಿ ಮಾಡಲು ನಿರ್ದೇಶಕ ಓಂ ರಾವತ್ ಆಸಕ್ತಿ ತೋರಿದ್ದಾರೆ. ಹೀಗಾಗಿ, ಅನುಷ್ಕಾ ಶರ್ಮಾಗೆ ನೆರವಾಗುವಂತೆ ಶೂಟಿಂಗ್ ಸಹ ಮಾಡಲು ಯೋಜಿಸಿದ್ದಾರೆ ಎನ್ನಲಾಗಿದೆ.

  ಶ್ರೀರಾಮನಾಗಿ ಪ್ರಭಾಸ್, ಸೀತೆ ಪಾತ್ರಕ್ಕೆ ಕೀರ್ತಿ ಸುರೇಶ್ ಬದಲು ಇನ್ನೊಬ್ಬ ನಟಿಗೆ ಆಫರ್!ಶ್ರೀರಾಮನಾಗಿ ಪ್ರಭಾಸ್, ಸೀತೆ ಪಾತ್ರಕ್ಕೆ ಕೀರ್ತಿ ಸುರೇಶ್ ಬದಲು ಇನ್ನೊಬ್ಬ ನಟಿಗೆ ಆಫರ್!

  Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Rakesh Adiga | Filmibeat Kannada
  ಊರ್ವಶಿ ರೌಟೇಲಾ ಹೆಸರು ಸಹ ಬಂತು!

  ಊರ್ವಶಿ ರೌಟೇಲಾ ಹೆಸರು ಸಹ ಬಂತು!

  ಈ ನಡುವೆ ಊರ್ವಶಿ ರೌಟೇಲಾ ಹೆಸರು ಸಹ ಸೀತೆ ಪಾತ್ರಕ್ಕೆ ಕೇಳಿ ಬಂತು. ಆದರೆ, ನಿರ್ದೇಶಕರ ಮನಸ್ಸು ಅನುಷ್ಕಾ ಶರ್ಮಾ ಕಡೆ ಇದೆ ಎನ್ನಲಾಗಿದೆ. ಇನ್ನುಳಿದಂತೆ ಭೂಷಣ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಸುಮಾರು 500 ಕೋಟಿ ಬಜೆಟ್ ಆಗಲಿದೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡದಲ್ಲಿ ಈ ಸಿನಿಮಾ ಬರಲಿದೆ.

  English summary
  After Keerthy suresh and kiara advani, now Anushka sharma to play sita role in prabhas Adipurush?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X