For Quick Alerts
  ALLOW NOTIFICATIONS  
  For Daily Alerts

  ಓಹೋ.. 'ನಿಶಬ್ಧಂ' ಚಿತ್ರಕ್ಕಾಗಿ ಇಷ್ಟೊಂದು ಸಂಭಾವನೆ ಪಡೆದ್ರಾ ನಟಿ ಅನುಷ್ಕಾ ಶೆಟ್ಟಿ.?

  |

  ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದರೂ, ನಟಿ ಅನುಷ್ಕಾ ಶೆಟ್ಟಿ ಜನಪ್ರಿಯತೆ ಗಳಿಸಿರುವುದು ಪಕ್ಕದ ತೆಲುಗು ಸಿನಿ ಅಂಗಳದಲ್ಲಿ. 2005 ರಲ್ಲಿ ತೆರೆಗೆ ಬಂದ 'ಸೂಪರ್' ಚಿತ್ರದ ಮೂಲಕ ಟಾಲಿವುಡ್ ನಲ್ಲಿ ಗುರುತಿಸಿಕೊಂಡ ನಟಿ ಅನುಷ್ಕಾ ಶೆಟ್ಟಿ, 'ಮಹಾನಂದಿ', 'ವಿಕ್ರಮಾರ್ಕುಡು', 'ಸ್ಟಾಲಿನ್', 'ಅರುಂಧತಿ', 'ವೇದಂ', 'ನಾಗವಲ್ಲಿ', 'ಬಾಹುಬಲಿ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  ಇಂತಿಪ್ಪ ನಟಿ ಅನುಷ್ಕಾ ಶೆಟ್ಟಿ ಸದ್ಯ ಟಾಲಿವುಡ್ ನಲ್ಲಿ ಅತ್ಯಂತ ದುಬಾರಿ ನಟಿ ಪಟ್ಟಕ್ಕೇರಿದ್ದಾರೆ. 'ನಿಶಬ್ಧಂ' ಚಿತ್ರಕ್ಕಾಗಿ ನಟಿ ಅನುಷ್ಕಾ ಶೆಟ್ಟಿ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ. ತೆಲುಗು ನಟಿಯರ ಪೈಕಿ ಅನುಷ್ಕಾ ಶೆಟ್ಟಿ ಸಿಕ್ಕಾಪಟ್ಟೆ ಕಾಸ್ಟ್ಲಿ ಆಗಿದ್ದಾರೆ. ಮುಂದೆ ಓದಿರಿ...

  'ನಿಶಬ್ಧಂ' ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ಪಡೆದ ಸಂಭಾವನೆ ಎಷ್ಟು.?

  'ನಿಶಬ್ಧಂ' ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ಪಡೆದ ಸಂಭಾವನೆ ಎಷ್ಟು.?

  'ನಿಶಬ್ಧಂ' ಚಿತ್ರಕ್ಕಾಗಿ ನಟಿ ಅನುಷ್ಕಾ ಶೆಟ್ಟಿ 2.5 ಕೋಟಿ ರೂಪಾಯಿಯನ್ನ ಸಂಭಾವನೆಯಾಗಿ ಪಡೆದಿದ್ದಾರೆ ಎಂಬ ಸುದ್ದಿ ಟಾಲಿವುಡ್ ತುಂಬೆಲ್ಲಾ ಹರಿದಾಡುತ್ತಿದೆ. ಆ ಮೂಲಕ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿಯ ಪಟ್ಟಕ್ಕೇರಿದ್ದಾರೆ ನಟಿ ಅನುಷ್ಕಾ ಶೆಟ್ಟಿ.

  ಅನುಷ್ಕಾ ಶೆಟ್ಟಿ ಚಿತ್ರವನ್ನ ತಮಿಳು ಸಿನಿ ಅಂಗಳದಲ್ಲಿ ಕೇಳೋರೇ ಇಲ್ಲ ಕಣ್ರೀ.!

  ಎಲ್ಲರನ್ನೂ ಹಿಂದಿಕ್ಕಿದ ನಟಿ ಅನುಷ್ಕಾ ಶೆಟ್ಟಿ

  ಎಲ್ಲರನ್ನೂ ಹಿಂದಿಕ್ಕಿದ ನಟಿ ಅನುಷ್ಕಾ ಶೆಟ್ಟಿ

  'ನಿಶಬ್ಧಂ' ನಿರ್ಮಾಪಕರಿಂದ ಜಿ.ಎಸ್.ಟಿ ಹೊರತು ಪಡಿಸಿ 2.5 ಕೋಟಿ ರೂಪಾಯಿಯನ್ನು ನಟಿ ಅನುಷ್ಕಾ ಶೆಟ್ಟಿ ಪಡೆದಿದ್ದಾರಂತೆ. ಇದರಿಂದ ಟಾಲಿವುಡ್ ನಲ್ಲಿ ಅತ್ಯಂತ ದುಬಾರಿ ನಟಿ ಎನಿಸಿಕೊಂಡಿರುವ ಅನುಷ್ಕಾ ಶೆಟ್ಟಿ, ಕಾಜಲ್ ಅಗರ್ವಾಲ್, ತಮನ್ನಾ, ಇಲಿಯಾನಾ ಸೇರಿದಂತೆ ಹಲವು ಬಹು ಬೇಡಿಕೆಯ ನಟಿಯರನ್ನು ಸಂಭಾವನೆ ಲೆಕ್ಕದಲ್ಲಿ ಹಿಂದಕ್ಕೆ ತಳ್ಳಿದ್ದಾರೆ.

  ಅನುಷ್ಕಾ ಶೆಟ್ಟಿಯ 'ಈ' ಮಾತನ್ನು ಕೇಳಿದ ಕನ್ನಡಿಗರಿಗೆ ಬೆಲ್ಲ ತಿಂದಷ್ಟೇ ಖುಷಿ ಆಗಿದೆ.!

  ಮೂಕ ಕಲಾವಿದೆಯಾಗಿ ಅನುಷ್ಕಾ

  ಮೂಕ ಕಲಾವಿದೆಯಾಗಿ ಅನುಷ್ಕಾ

  ಮೂಕ ಕಲಾವಿದೆಯಾಗಿ ಅನುಷ್ಕಾ ಶೆಟ್ಟಿ ಅಭಿನಯದ ಚಿತ್ರ 'ನಿಶಬ್ಧಂ'. ಹೇಮಂತ್ ಮಧುಕರ್ ನಿರ್ದೇಶನ ಮಾಡಿರುವ 'ನಿಶಬ್ಧಂ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಜೊತೆಗೆ ತಮಿಳು ನಟ ಮಾಧವನ್, ಅಂಜಲಿ, ಸುಬ್ಬರಾಜು, ಶಾಲಿನಿ ಪಾಂಡೆ ಸೇರಿದಂತೆ ದೊಡ್ಡ ತಾರಾಬಳಗ ಇದೆ. 'ನಿಶಬ್ಧಂ' ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿದೆ.

  'ನಿಶಬ್ಧಂ' ರಿಲೀಸ್ ಯಾವಾಗ.?

  'ನಿಶಬ್ಧಂ' ರಿಲೀಸ್ ಯಾವಾಗ.?

  ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರೆಡಿ ಆಗಿರುವ 'ನಿಶಬ್ಧಂ' ಚಿತ್ರ ಹಿಂದಿ, ಇಂಗ್ಲೀಷ್, ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗಲಿದೆ. 'ನಿಶಬ್ಧಂ' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಸದ್ಯದಲ್ಲೇ 'ನಿಶಬ್ಧಂ' ಚಿತ್ರದ ಪ್ರಚಾರ ಕಾರ್ಯದಲ್ಲಿ ಅನುಷ್ಕಾ ಶೆಟ್ಟಿ ತೊಡಗಲಿದ್ದಾರೆ.

  English summary
  According to the latest Grapevine, Anushka Shetty gets Rs 2.5 crore as remuneration for Nishabdham film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X