»   » ಮದುವೆ ಬಗ್ಗೆ ಮೌನ ಮುರಿದ ನಟಿ ಅನುಷ್ಕಾ ಶೆಟ್ಟಿ

ಮದುವೆ ಬಗ್ಗೆ ಮೌನ ಮುರಿದ ನಟಿ ಅನುಷ್ಕಾ ಶೆಟ್ಟಿ

By: ಉದಯರವಿ
Subscribe to Filmibeat Kannada

ಬೆಂಗಳೂರು ಸಂಪಿಗೆ ಅನುಷ್ಕಾ ಶೆಟ್ಟಿ ಅವರ ಮದುವೆ ಬಗ್ಗೆ ಆಗಾಗ ಸುದ್ದಿಗಳು ಬರುತ್ತಲೇ ಇವೆ. ಆದರೆ ಇವೆಲ್ಲವೂ ಗಾಳಿಸುದ್ದಿಗಳಾಗಿಯೇ ಉಳಿದವು. ಇನ್ನೇನು ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯ ಜೊತೆ ಮದುವೆ ನಡೆದೇ ಹೋಯಿತು ಎಂಬ ಸುದ್ದಿ ಸ್ಫೋಟಗೊಂಡಿತ್ತು.

ತನ್ನ ಮದುವೆ ಬಗ್ಗೆ ಬಂದಂತಹ ವದಂತಿಗಳಿಗೆ ಅನುಷ್ಕಾ ತೆರೆ ಎಳೆದರು. ಈಗ ಸ್ವತಃ ತನ್ನ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. "ನಾನು ಚಿತ್ರೋದ್ಯಮಕ್ಕೆ ಅಡಿಯಿಟ್ಟಂದಿನಿಂದಲೂ ನನ್ನ ಮದುವೆ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹಬ್ಬುತ್ತಿವೆ. ಆದರೆ ನಾನು ಇದುವರೆಗೂ ಸೂಕ್ತ ಹುಡುಗನನ್ನು ಆಯ್ಕೆ ಮಾಡಿಕೊಂಡಿಲ್ಲ...


ಇದುವರೆಗೂ ತಮಗೆ ಮದುವೆಯಾಗಬೇಕೆಂಬ ಆಲೋಚನೆಯನ್ನೂ ಮಾಡಿಲ್ಲ ಎಂದು ಅನುಷ್ಕಾ ಸ್ಪಷ್ಟವಾಗಿ ಹೇಳಿದ್ದಾರೆ. ಇದುವರೆಗೂ ನಾನು ಯಾರನ್ನೂ ಪ್ರೀತಿಸಿಲ್ಲ. ಆದರೂ ಪ್ರೇಮವಿವಾಹವಾಗಲು ಬಯಸುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನೀವು ಕೈಹಿಡಿಯುವ ಹುಡುಗ ಹೇಗಿರಬೇಕೆಂದು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅನುಷ್ಕಾ, "ನನಗಿಂತಲೂ ಎತ್ತರವಾಗಿರಬೇಕು. ನನಗಿಂತಲೂ ಸುಂದರವಾಗಿರಬೇಕು ಎಂಬ ಕೋರಿಕೆಗಳಿಲ್ಲ. ಯಾಕೆಂದರೆ ಈಗಲೇ ನನಗೆ ಮದುವೆಯಾಗಬೇಕೆಂದಿಲ್ಲ" ಎಂದಿದ್ದಾರೆ.

ಸದ್ಯಕ್ಕೆ ಅನುಷ್ಕಾ ಶೆಟ್ಟಿ ಅವರು ಎಸ್ಎಸ್ ರಾಜಮೌಳಿ ಅವರ 'ಬಾಹುಬಲಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ 'ರುದ್ರಮದೇವಿ' ಎಂಬ ಭಾರಿ ಜಜೆಟ್ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ಸೂಕ್ತ ಪಾತ್ರ ಸಿಕ್ಕಿದರೆ ಕನ್ನಡ ಚಿತ್ರಗಳಲ್ಲೂ ಬಣ್ಣ ಹಚ್ಚಲು ರೆಡಿ ಎಂದಿದ್ದಾರೆ.

English summary
Anushka Shetty, in her words, was married off by gossip mongers many a times. Point taken. She is probably one actress from South, who has been linked up with numerous of actors. Rumour mills had also speculated her affair with a superstar father at one point of time and strangely with his son last year.
Please Wait while comments are loading...