'ಕಿಸ್' ನಾಯಕನ ಜೊತೆ ಮತ್ತೊಮ್ಮೆ ಲವ್ ಸ್ಟೋರಿ ಹೇಳಲು ಸಜ್ಜಾದ ಎಪಿ ಅರ್ಜುನ್

'ಕಿಸ್' ಸಿನಿಮಾ ಬಳಿಕ ನಿರ್ದೇಶಕ ಎಪಿ ಅರ್ಜುನ್ ಮತ್ತೊಮ್ಮೆ ಲವ್ ಸ್ಟೋರಿ ಹೇಳಲು ಸಜ್ಜಾಗಿದ್ದಾರೆ. ಅಂಬಾರಿ, ಅದ್ಧೂರಿ, ರಾಟೆ ಹಾಗೂ ಕಿಸ್ ಅಂತಹ ಪ್ರೇಮಕಥೆಗಳ ಮೂಲಕ ಲವ್ ಗುರು ಎನಿಸಿಕೊಂಡಿರುವ ಅರ್ಜುನ್ ಈಗ ಹೊಸ ಲವ್ ಸ್ಟೋರಿಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಈ ಮುಂಚೆ ನಟ ನಿಖಿಲ್ ಕುಮಾರ್ ಜೊತೆ ತಮ್ಮ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ವರದಿಯಾಗಿತ್ತು. ಈ ಸಿನಿಮಾ ಮೇ ಅಥವಾ ಜೂನ್ ತಿಂಗಳಲ್ಲಿ ಸೆಟ್ಟೇರಬಹುದು ಎನ್ನಲಾಗಿತ್ತು. ಆದ್ರೀಗ, ಅದಕ್ಕೂ ಮುಂಚೆ ಇನ್ನೊಂದು ಪ್ರಾಜೆಕ್ಟ್ ಆರಂಭಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ನಟ ವಿರಾಟ್ ಜೊತೆ ಎಪಿ ಅರ್ಜುನ್ ಮತ್ತೊಮ್ಮೆ ಸಿನಿಮಾ ಮಾಡುತ್ತಿದ್ದಾರೆ. ಈ ಪ್ರಾಜೆಕ್ಟ್ ಸಹ ಸಂಪೂರ್ಣವಾಗಿ ಲವ್ ಸಬ್ಜೆಕ್ಟ್ ಆಗಿರಲಿದೆಯಂತೆ.

AP Arjun to direct a New Love Story Movie with Viraat

ಇದು ಎಪಿ ಅರ್ಜುನ್ ಅವರ ಆರನೇ ಪ್ರಾಜೆಕ್ಟ್ ಆಗಿರಲಿದ್ದು, ತಮ್ಮದೇ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಸದ್ಯಕ್ಕೆ ಈ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲ. ಜನವರಿ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಸಿನಿಮಾ ಅನೌನ್ಸ್ ಆಗಲಿದೆಯಂತೆ.

More from Filmibeat

English summary
After Kiss success, director AP Arjun to direct a new love story movie with Viraat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X