»   » ರಾಧಿಕಾ ಕುಮಾರಸ್ವಾಮಿ ನಟನೆ ಮಾಡಲ್ಲ ಅಂದಿದ್ಯಾಕೆ? ಕಾರಣ ಇದೇನಾ?

ರಾಧಿಕಾ ಕುಮಾರಸ್ವಾಮಿ ನಟನೆ ಮಾಡಲ್ಲ ಅಂದಿದ್ಯಾಕೆ? ಕಾರಣ ಇದೇನಾ?

Posted By:
Subscribe to Filmibeat Kannada

  ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಒಂದು ಸ್ಫೋಟಕ ಸುದ್ದಿ ಹೊರಬಿದ್ದಿತ್ತು. ''ನಮಗಾಗಿ' ಚಿತ್ರವೇ ರಾಧಿಕಾ ಕುಮಾರಸ್ವಾಮಿ ನಟನೆಯ ಕೊನೆಯ ಸಿನಿಮಾ'' ಅಂತ ಜಗಜ್ಜಾಹೀರಾಗಿದ್ರಿಂದ ಅಭಿಮಾನಿಗಳಿಗೆ ಹಾರ್ಟ್ ಬ್ರೇಕ್ ಆಗಿತ್ತು.

  'ನಟನೆ ಅಂದ್ರೆ ಪಂಚಪ್ರಾಣ' ಅಂತ ಹೇಳಿಕೊಳ್ಳುತ್ತಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಆಕ್ಟಿಂಗ್ ಗೆ ಗುಡ್ ಬೈ ಹೇಳಿದ್ದು ಯಾಕೆ? ನಟನೆ ಜೊತೆಗೆ ಚಿತ್ರ ನಿರ್ಮಾಣದಲ್ಲೂ ಸಕ್ರಿಯರಾಗಿರುವ ರಾಧಿಕಾ ಕುಮಾರಸ್ವಾಮಿ ಚಿತ್ರರಂಗ ತೊರೆಯಲು ಕಾರಣವೇನು? [ನಟನೆಗೆ ಗುಡ್ ಬೈ ಹೇಳ್ತಾರಂತೆ ನಟಿ ರಾಧಿಕಾ ಕುಮಾರಸ್ವಾಮಿ.!]

  ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಅದೇನು ಅಂತ ವಿವರವಾಗಿ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ.....

  ಹೊಸ ಸಿನಿಮಾಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾಯ್ತು!

  ಈಗಾಗಲೇ 'ನಮಗಾಗಿ' ಸಿನಿಮಾದ ಚಿತ್ರೀಕರಣ ಅರ್ಧಂಬರ್ಧ ಆಗಿರುವ ಕಾರಣ ಅದನ್ನ ಮುಗಿಸಿಕೊಡಲು ಒಪ್ಪಿಕೊಂಡಿದ್ದಾರಷ್ಟೆ ಹೊರತು ರಾಧಿಕಾ ಕುಮಾರಸ್ವಾಮಿ ಬೇರೆ ಯಾವ ಚಿತ್ರಕ್ಕೂ ಚಾಲನೆ ಕೊಟ್ಟಿಲ್ಲ. ಈ ಹಿಂದೆ ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರೂ, ಅದಕ್ಕೂ ಫುಲ್ ಸ್ಟಾಪ್ ಇಟ್ಟಿದ್ದಾಗಿದೆ. ಮುಂದೆ ಓದಿ...

  ಕಾಲ್ ಶೀಟ್ ಸಿಕ್ಕಲ್ಲ!

  ರಾಧಿಕಾ ಕುಮಾರಸ್ವಾಮಿ ರವರ ಕಾಲ್ ಶೀಟ್ ಇನ್ಮುಂದೆ ಕನ್ನಡ ಚಿತ್ರರಂಗದಲ್ಲಿ ಯಾರಿಗೂ ಸಿಕ್ಕಲ್ಲ. ಅದು ಯಾಕೆ ಅಂತ ಹೇಳ್ತೀವಿ, ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

  ರಾಜಕೀಯಕ್ಕೆ ರಾಧಿಕಾ ಕುಮಾರಸ್ವಾಮಿ?

  ಮೂಲಗಳ ಪ್ರಕಾರ, ನಟಿ ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಧುಮುಕುವ ಯೋಚನೆ ಮಾಡಿದ್ದಾರೆ. ಅದರ ತಯಾರಿಯಲ್ಲಿ ತೊಡಗಿರುವ ರಾಧಿಕಾ ಕುಮಾರಸ್ವಾಮಿ ನಟನೆಗೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.

  ರಾಧಿಕಾ ಕುಮಾರಸ್ವಾಮಿಗೆ ಪ್ರೇರಣೆ ಯಾರು?

  ನಟಿ ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಬರಲು ಪ್ರಮುಖ ಕಾರಣ ಅವರ 'ಫ್ಯಾಮಿಲಿ' ಅಂತ ನೀವು ಯೋಚನೆ ಮಾಡುತ್ತಿದ್ರೆ, ಸ್ವಲ್ಪ ತಾಳಿ...ಇಲ್ಲಿ ಇನ್ನೊಂದು ಟ್ವಿಸ್ಟ್ ಇದೆ.[ರಾಧಿಕಾ ಕುಮಾರಸ್ವಾಮಿ ಬಗ್ಗೆ ಸ್ಫೋಟಗೊಂಡಿರುವ ಸುದ್ದಿ ನಿಜವೇ?]

  ಪ್ರೇರಣೆ 'ಅವರಲ್ಲ'.! 'ಇವರು'.!

  ರಾಧಿಕಾ ಕುಮಾರಸ್ವಾಮಿ ರವರು ರಾಜಕೀಯಕ್ಕೆ ಬರಲು ಪ್ರೇರಣೆ ಬೇರಾರೂ ಅಲ್ಲ, ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್, ಮಂಡ್ಯದ ಮಾಜಿ ಸಂಸದೆ ನಟಿ ರಮ್ಯಾ. [ರಾಧಿಕಾ ಕುಮಾರಸ್ವಾಮಿ ಬಗ್ಗೆ ನಟಿ ರಮ್ಯಾ ಮಾಡಿದ ಕಾಮೆಂಟ್ ಏನು?]

  ರಮ್ಯಾ ಕೂಡ ನಟನೆಗೆ ಗುಡ್ ಬೈ!

  ಎಲ್ಲರಿಗೂ ಗೊತ್ತಿರುವ ಹಾಗೆ, ಮಂಡ್ಯದ ಮಾಜಿ ಸಂಸದೆ ರಮ್ಯಾ ನಟನೆಗೆ 'ಬೈ ಬೈ' ಹೇಳಿದ್ದಾಗಿದೆ. 'ನೀರ್ ದೋಸೆ' ಹಾಗೂ 'ದಿಲ್ ಕಾ ರಾಜ' ಚಿತ್ರಗಳಲ್ಲಿ ರಮ್ಯಾ ಬದಲಿಗೆ ಬೇರೆ ನಾಯಕಿಯರು ಬಣ್ಣ ಹಚ್ಚಿದ್ದೂ ಆಗಿದೆ. ನಟನೆ ಬಿಟ್ಟು ರೈತರಿಗೆ ನೆರವು ನೀಡಲು ಊರೂರು ತಿರುಗುತ್ತಿರುವ ರಮ್ಯಾ ರವರ ಹಾದಿಯಲ್ಲಿ ರಾಧಿಕಾ ಕುಮಾರಸ್ವಾಮಿ ಸಾಗಲು ಮನಸ್ಸು ಮಾಡಿದ್ದಾರೆ. [ಸೂಪರ್ ಸ್ಟಾರ್ ರಜನಿ ಕಾಂತ್ ಚಿತ್ರರಂಗಕ್ಕೆ ಗುಡ್ ಬೈ!]

  ರಾಜಕಾರಣದಲ್ಲಿ ರಮ್ಯಾ ಮೇಡಂ ಬಿಜಿ

  ರಾಜಕಾರಣ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ರಮ್ಯಾಗೆ ನಟನೆ ಮಾಡುವಷ್ಟು ಟೈಮ್ ಇಲ್ಲ. ಹೀಗಾಗಿ ಸಿನಿಮಾ ಮಾಡಲ್ಲ ಎಂದಿದ್ದರು. ಸಮಾಜಸೇವೆಯಲ್ಲಿ ರಾಧಿಕಾ ಕುಮಾರಸ್ವಾಮಿ ರವರಿಗೂ ಆಸಕ್ತಿ ಇರುವ ಕಾರಣ ಚಿತ್ರರಂಗ ತೊರೆಯಲು ನಿರ್ಧರಿಸಿದ್ದಾರೆ ಅಂತ ಹೇಳಲಾಗುತ್ತಿದೆ. [ಎಲ್ಲರ ಕಿವಿ ಮೇಲೆ ಫ್ಲವರ್ ಇಟ್ಟ ಅಭಿ-ಐಶ್ ದಂಪತಿ.!]

  ರಮ್ಯಾಗೆ ಶುಭ ಹಾರೈಸಿದ್ರು ರಾಧಿಕಾ!

  ನಿಮಗೆ ಗೊತ್ತಿದ್ಯೋ ಇಲ್ವೋ, ನಟಿ ರಮ್ಯಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರಿಗೆ ಫೋನ್ ಮಾಡಿ ರಾಧಿಕಾ ಕುಮಾರಸ್ವಾಮಿ ಶುಭ ಹಾರೈಸಿದ್ರು. ಈಗ ಅದೇ ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಬರುವುದಕ್ಕೆ ರಮ್ಯಾ ಪ್ರೇರೇಪಿಸಿದ್ದಾರಂತೆ.

  ಹಾಗಾದ್ರೆ ಯಾವ ಪಾರ್ಟಿಗೆ ರಾಧಿಕಾ ಸೇರುತ್ತಾರೆ?

  ಕಾಂಗ್ರೆಸ್ ನಲ್ಲಿ ರಮ್ಯಾ ಮೇಡಂ ಗುರುತಿಸಿಕೊಂಡಿರುವ ಕಾರಣ, ಅವರ ಸಪೋರ್ಟ್ ನೊಂದಿಗೆ 'ಕೈ' ಹಿಡಿಯಲು ರಾಧಿಕಾ ಕುಮಾರಸ್ವಾಮಿ ಒಪ್ಪಿಕೊಳ್ಳಬಹುದು.

  'ಹೂ' ಮುಡಿದರೆ?

  ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಬರುತ್ತಾರೆ ಅಂತ ಗೊತ್ತಾದ ಕೂಡಲೆ, ಬಿಜೆಪಿ ಪಕ್ಷದ ಪ್ರಮುಖರು ರಾಧಿಕಾ ಕುಮಾರಸ್ವಾಮಿ ಜೊತೆ ಮಾತನಾಡಿದ್ದಾರೆ. ಮಾತುಕತೆ ಸಫಲ ಆದ್ರೆ, ರಾಧಿಕಾ ಮೇಡಂ ಕಮಲ ಹಿಡಿಯಬಹುದು. [ಶಿವಣ್ಣ ಜೊತೆ ಐಶ್ವರ್ಯ ರೈ ಚಿತ್ರ ಕನ್ಫರ್ಮ್]

  ಹೊರೆ ಹೊರುವುದಿಲ್ಲವೇ?

  ಕಾಂಗ್ರೆಸ್ ಗೆ 'ಕೈ' ಕೊಟ್ಟು, 'ಕಮಲದ ಹೂ' ಬಿಟ್ಟು, 'ಹೊರೆ' ಹೊರುತ್ತೇನೆ ಅಂತ ರಾಧಿಕಾ ಕುಮಾರಸ್ವಾಮಿ ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿದರೂ ಅಚ್ಚರಿ ಪಡಬೇಡಿ.

  HAPPY ALL FOOL'S DAY

  ನಟಿ ರಾಧಿಕಾ ಕುಮಾರಸ್ವಾಮಿ ಬಗೆಗಿನ ಈ ವರದಿಯನ್ನ ಓದಿರುವ ಎಲ್ಲರಿಗೂ HAPPY ALL FOOL'S DAY. ನಟನೆಗೆ ಫುಲ್ ಸ್ಟಾಪ್ ಇಡಲು ರಾಧಿಕಾ ಕುಮಾರಸ್ವಾಮಿ ನಿರ್ಧರಿಸಿರುವ ಬಗ್ಗೆ ಅವರ ಆಪ್ತ ವಲಯದಿಂದ ಬಂದಿರುವ ಮಾಹಿತಿ ನಿಜ. ಆದ್ರೆ, ಅದಕ್ಕೆ 'ರಾಜಕೀಯ' ಕಾರಣ ಎನ್ನುವುದು ಇವತ್ತಿನ ಮಟ್ಟಿಗೆ ಸುಳ್ಳು. ಮುಂದೆ ನಿಜವಾದರೂ, ಆಗಬಹುದು. ಮೂರ್ಖರ ದಿನಾಚರಣೆ ಪ್ರಯುಕ್ತ ಬರೆದಿರುವ ಕಾಲ್ಪನಿಕ ವರದಿ ಇದು ಅಷ್ಟೆ. ನಿಜ ಅಂತ ಭಾವಿಸಬೇಡಿ.

  English summary
  Filmibeat Kannada wishes all Readers 'A Very Happy All Fool's Day'. On this ocassion, here is an article about Kannada Actress Radhika Kumaraswamy which is out and out fictitious. Have a look.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more