»   » ಸದ್ದಿಲ್ಲದಂತೆ ಬೆಂಗಳೂರಿಗೆ ವಾಪಸ್ಸಾದ ನಟಿ ರಮ್ಯಾ

ಸದ್ದಿಲ್ಲದಂತೆ ಬೆಂಗಳೂರಿಗೆ ವಾಪಸ್ಸಾದ ನಟಿ ರಮ್ಯಾ

Posted By: ಹರಾ
Subscribe to Filmibeat Kannada

ಅಂತೂ ಆಡಿದ ಮಾತನ್ನ 'ಸ್ಯಾಂಡಲ್ ವುಡ್ ಕ್ವೀನ್' ಉಳಿಸಿಕೊಂಡಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಕನವರಿಕೆಗೆ 'ಪದ್ಮಾವತಿ' ತಥಾಸ್ತು ಅಂದಿದ್ದಾರೆ. ವರ್ಷದ ಬಳಿಕ 'ಲಕ್ಕಿ ಸ್ಟಾರ್' ರಮ್ಯಾ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಇದೀಗ ಬಂದಿರುವ ಬ್ರೇಕಿಂಗ್ ನ್ಯೂಸ್ ಅಂದ್ರೆ ಇದೆ. ಲಂಡನ್ ನಿಂದ ರಮ್ಯಾ ಮರಳಿ ಬಂದಿದ್ದಾರೆ. ಎಲೆಕ್ಷನ್ ನಲ್ಲಿ ಸೋತ ಮೇಲೆ ರಾಜಕೀಯ-ಸಿನಿಮಾ ಸಹವಾಸ ಸಾಕು ಅಂತ ಸೀದಾ ವಿದೇಶಕ್ಕೆ ಹಾರಿದ್ದ ಈ ಬ್ಯೂಟಿ, ಲಂಡನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈಗ ರಜೆಯ ಮೇಲೆ ತವರು ನೆಲಕ್ಕೆ ಬಂದಿದ್ದಾರೆ. ಮುಂದೆ ಓದಿ.....

ಮಂಡ್ಯದಲ್ಲಿ ರಮ್ಯಾ 'ರಜೆ'ಯ 'ಮಜಾ'

ರಾಜಕೀಯದಲ್ಲಿ ಗಟ್ಟಿಯಾಗಿ ನೆಲೆಯೂರಬೇಕು ಅನ್ನುವ ಕಾರಣಕ್ಕೆ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ಓದುತ್ತಿರುವ ರಮ್ಯಾಗೆ ಈಗ ರಜೆ ಸಿಕ್ಕಿದೆ. ಮಂಡ್ಯದ ಸೊಗಡಲ್ಲಿ ರಜೆಯನ್ನ ಕಳೆಯುವುದಕ್ಕೆ ರಮ್ಯಾ ನಿನ್ನೆ ಮಧ್ಯರಾತ್ರಿ ಬೆಂಗಳೂರಿಗೆ ಬಂದಿದ್ದಾರೆ. [ಲಂಡನ್ ನಲ್ಲಿ ಲಕ್ಕಿ ಸ್ಟಾರ್ ರಮ್ಯಾ ಮಾಡ್ತಿರೋದು ಇದನ್ನಾ?]

'ಏಪ್ರಿಲ್'ನಲ್ಲಿ ಬರ್ತೀನಿ ಅಂದಿದ್ದ ರಮ್ಯಾ

ಅಸಲಿಗೆ 'ಏಪ್ರಿಲ್' ನಲ್ಲಿ ವಾಪಸ್ಸಾಗುತ್ತೇನೆ ಅಂತ ಈ ಹಿಂದೆ ಆಪ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ರಮ್ಯಾ ಟ್ವೀಟ್ ಮಾಡಿದ್ದರು. ಅದರಂತೆ ಸರಿಯಾಗಿ ಏಪ್ರಿಲ್ 1 ರಂದೇ ಬೆಂಗಳೂರಿಗೆ ಬಂದಿಳಿದಿದ್ದಾರೆ ರಮ್ಯಾ.! [ಏಪ್ರಿಲ್ ನಲ್ಲಿ ರಮ್ಯಾ ಪ್ರತ್ಯಕ್ಷ, ಟ್ವಿಟ್ಟರ್ ನಲ್ಲಿ ಬ್ರೇಕಿಂಗ್!]

ಏರ್ ಪೋರ್ಟ್ ನಲ್ಲಿ ಆಪ್ತೇಷ್ಟರಷ್ಟೇ ಇದ್ದರು..!

ಏರ್ ಪೋರ್ಟ್ ನಲ್ಲಿ ಅವರನ್ನ ಬರಮಾಡಿಕೊಳ್ಳುವುದಕ್ಕೆ ರಮ್ಯಾ ತಾಯಿ ಮತ್ತು ಕೆಲ ಆಪ್ತೇಷ್ಟರಷ್ಟೇ ಇದ್ದರು ಅನ್ನುತ್ತಿವೆ ಮೂಲಗಳು. ವಾಪಸ್ಸಾಗುವ ವಿಷಯವನ್ನ ಮನೆಯವರೊಂದಿಗೆ ಮಾತ್ರ ಹಂಚಿಕೊಂಡಿದ್ದ ರಮ್ಯಾ, ಸೆಕ್ಯೂರಿಟಿ ಪ್ರಾಬ್ಲಂ ಆಗುತ್ತೆ ಅನ್ನುವ ಕಾರಣಕ್ಕೆ ಮಧ್ಯರಾತ್ರಿ ಜನಜಂಗುಳಿ ಕಡಿಮೆ ಇರುವಾಗ ವಾಪಸ್ಸಾಗಿದ್ದಾರೆ.

ಸೀರೆಯುಟ್ಟು ಬಂದಿದ್ರಂತೆ ರಮ್ಯಾ..!

ವಿದೇಶದಲ್ಲಿದ್ದರೂ ನಮ್ಮ ಸಂಸ್ಕೃತಿಯನ್ನ ರಮ್ಯಾ ಮರೆತಿರುವ ಹಾಗಿಲ್ಲ. ರಮ್ಯಾ ಆಪ್ತ ವಲಯ ಹೇಳುವ ಪ್ರಕಾರ, ಏರ್ ಪೋರ್ಟ್ ನಲ್ಲಿ ರಮ್ಯಾ ಬಂದಿಳಿದಾಗ ತಮ್ಮ ಇಷ್ಟದ ಕೆಂಪು ಬಣ್ಣದ ಸೀರೆಯನ್ನ ಧರಿಸಿದ್ದರು.

ಇಂದು ಬೆಂಗಳೂರಲ್ಲಿ...ನಾಳೆ ಮಂಡ್ಯದಲ್ಲಿ..!

ರಾತ್ರಿಯಷ್ಟೇ ಬೆಂಗಳೂರಲ್ಲಿ ಲ್ಯಾಂಡ್ ಆಗಿರುವ ರಮ್ಯಾ ಇಂದು ಇಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ನಾಳೆ ಹೊತ್ತಿಗೆ, ತಮ್ಮ ತಾಯಿಯೊಂದಿಗೆ ಮಂಡ್ಯ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. [ರಾಹುಲ್ ಗಾಂಧಿ ಬಗ್ಗೆ ರಮ್ಯಾ ಮೌನ ಮಾತಾದಾಗ...]

ಮತ್ತೆ ಬಣ್ಣ ಹಚ್ತಾರಾ 'ಲಕ್ಕಿ ಸ್ಟಾರ್'?

ಇಡೀ ಸ್ಯಾಂಡಲ್ ವುಡ್ ಗೆ ಕಾಡುತ್ತಿರುವ ಪ್ರಶ್ನೆ ಇದು. ರಮ್ಯಾ ಇಲ್ಲದೇ, 'ನೀರ್ ದೋಸೆ', 'ದಿಲ್ ಕಾ ರಾಜಾ' ಸೇರಿದಂತೆ ಮೂರ್ನಾಲ್ಕು ಚಿತ್ರಗಳು ಅರ್ಧಕ್ಕೆ ನಿಂತು ಹೋಗಿದೆ. ರಮ್ಯಾ ಬರುವಿಕೆಗಾಗಿ ಕಾಯುತ್ತಿದ್ದ ನಿರ್ಮಾಪಕರು 'ಲಕ್ಕಿ ಸ್ಟಾರ್' ಜೊತೆ ಮಾತುಕತೆ ನಡೆಸಲಿದ್ದಾರೆ. ರಜೆಯಲ್ಲಿ ಮಜಮಾಡುವ ಬದಲು ರಮ್ಯಾ ಬಣ್ಣ ಹಚ್ಚಿದರೆ, ಕೋಟಿ ಕೋಟಿ ಸುರಿದಿರುವ ನಿರ್ಮಾಪಕರು ನಿಟ್ಟುಸಿರು ಬಿಟ್ಟ ಹಾಗೆ. ['ದಿಲ್ ಕಾ ರಾಜಾ'ನಿಗೆ ಮರುಜನ್ಮ ಕೊಡ್ತಾರಾ ರಮ್ಯಾ?]

''ಏಪ್ರಿಲ್ ಫೂಲ್''

ಇಲ್ಲಿವರೆಗೂ 'ರಮ್ಯಾ ಮರಳಿದ ಪುರಾಣ'ವನ್ನ ಇಂಟ್ರೆಸ್ಟ್ ನಿಂದ ಓದಿರುವ ನಿಮ್ಮೆಲ್ಲರಿಗೂ 'ಮೂರ್ಖರ ದಿನಾಚರಣೆ'ಯ ಶುಭಾಶಯಗಳು. 'ಏಪ್ರಿಲ್ 1'ರ ಪ್ರಯುಕ್ತ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಪ್ರಕಟವಾಗಿರುವ ''ವಿಶೇಷ'' ಲೇಖನ ಇದು.!!

English summary
Finally, Sandalwood Queen Ramya aka Divya Spandana has returned back to home town. The Actress arrived in the midnight and received by her mother and close friends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada