For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್‌ ಗೆ ಹಾರಲಿರುವ ತಮಿಳಿನ ಖ್ಯಾತ ನಿರ್ದೇಶಕ?

  |

  ಗಜಿನಿ, ಸ್ಟ್ಯಾಲಿನ್, ಎಂಗೆಯುಮ್ ಎಪ್ಪೋತುಮ್, ತುಪಾಕಿ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎ.ಆರ್.ಮುರುಗದಾಸ್ ಹಾಲಿವುಡ್ ಹಾದಿ ಹಿಡಿದಿದ್ದಾರೆ.

  ನಿರ್ದೇಶಕ ಮುರುಗದಾಸ್, ಪ್ರತಿಷ್ಠಿತ ಹಾಲಿವುಡ್ ಸಿನಿಮಾ ನಿರ್ಮಾಣ ಸಂಸ್ಥೆ ಡಿಸ್ನಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಭಾರತೀಯ ಕತೆ ಆಧರಿತ ಅನಿಮೇಶನ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.

  ರಾಜಕೀಯ ಪ್ರವೇಶದ ಬಗ್ಗೆ ರಜನೀಕಾಂತ್ ಮಹತ್ವದ ಹೇಳಿಕೆ

  ಈ ಅನಿಮೇಶನ್ ಸಿನಿಮಾ ಭಾರತದ ಸಿನಿಮಾ ಪ್ರೇಕ್ಷಕರು ಮತ್ತು ಮಾರುಕಟ್ಟೆ ಮಾತ್ರವಲ್ಲದೆ, ವಿಶ್ವ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತಿದೆಯಂತೆ.

  ದಿ ಲಯನ್ ಕಿಂಗ್, ಬ್ಯುಟಿ ಆಂಡ್ ದಿ ಬೀಸ್ಟ್ ಮಾದರಿಯಲ್ಲಿ ಪೂರ್ಣ ಅನಿಮೇಶನ್ ಸಿನಿಮಾ ಇದಾಗಲಿದ್ದು, ಭಾರತೀಯ ಕತೆಯನ್ನು ಸಿನಿಮಾ ಒಳಗೊಂಡಿರಲಿದೆ.

  ಲೈವ್ ಆಕ್ಷನ್ ಕ್ಯಾಪ್ಚರ್ ಸೇರಿದಂತೆ ಇನ್ನೂ ಅನೇಕ ಹೊಸ ತಂತ್ರಜ್ಞಾನವನ್ನು ಬಳಸಿ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರಂತೆ ಎಆರ್ ಮುರುಗದಾಸ್. ಈ ಸಿನಿಮಾಕ್ಕೆ ಭಾರಿ ದೊಡ್ಡ ಬಜೆಟ್ ಅನ್ನೇ ನೀಡುತ್ತಿದೆಯಂತೆ ಡಿಸ್ನಿ.

  ಸಿನಿಮಾದ ನಿರ್ದೇಶನ ಮುರುಗದಾಸ್ ಮಾಡುತ್ತಿದ್ದರೂ, ಸಾಕಷ್ಟು ತಂತ್ರಜ್ಞರು ಹಾಲಿವುಡ್‌ನಿಂದ ಬರಲಿದ್ದಾರಂತೆ. ಸಿನಿಮಾ ಸಹ ಭಾರತದಲ್ಲಿಯೇ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ. ಅಧಿಕೃತ ಮಾಹಿತಿ ಇನ್ನಷ್ಟೆ ಹೊರಗೆ ಬೀಳಬೇಕಿದೆ.

  ಮುರುಗದಾಸ್, ವಿಜಯ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು, ಆದರೆ ಕೆಲವು ಕಾರಣಗಳಿಂದಾಗಿ ಮುರುಗದಾಸ್ ಆ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಈ ಹಿಂದೆ ವಿಜಯ್ ಅವರ ತುಪ್ಪಾಕಿ, ಸರ್ಕಾರ್, ಕತ್ತಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಮುರುಗದಾಸ್.

  English summary
  Tamil director AR Murugadoss collaborating with Hollywood production company Disney for a high budget animation movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X