»   » ಬಿಡುಗಡೆಗೂ ಮುನ್ನವೇ ಬಯಲಾಯ್ತು 'ಕಟ್ಟಪ್ಪ ಬಾಹುಬಲಿಯನ್ನು ಕೊಂದ' ರಹಸ್ಯ

ಬಿಡುಗಡೆಗೂ ಮುನ್ನವೇ ಬಯಲಾಯ್ತು 'ಕಟ್ಟಪ್ಪ ಬಾಹುಬಲಿಯನ್ನು ಕೊಂದ' ರಹಸ್ಯ

Posted By:
Subscribe to Filmibeat Kannada

'ಬಾಹುಬಲಿ 2' ಚಿತ್ರದ ಬಿಡುಗಡೆಗಾಗಿ ದೇಶದಾದ್ಯಂತ ಸಿನಿ ಪ್ರಿಯರು ಕಾದು ಕುಳಿತಿದ್ದಾರೆ. ಅದಕ್ಕೆ ಕಾರಣ ನಿರ್ದೇಶಕ ಎಸ್.ಎಸ್.ರಾಜಮೌಳಿ 'ಬಾಹುಬಲಿ - ದಿ ಬಿಗಿನ್ನಿಂಗ್' ಚಿತ್ರದಿಂದ ಪ್ರೇಕ್ಷಕರಲ್ಲಿ ಹುಟ್ಟು ಹಾಕಿರುವ 'ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ?" ಎಂಬ ಮಿಲಿಯನ್ ಡಾಲರ್ ಪ್ರಶ್ನೆ.[ಕೊನೆಗೂ 'ಕಟ್ಟಪ್ಪ'ನನ್ನ ಕ್ಷಮಿಸಿದ ಕರುನಾಡು]

ಕೋಟ್ಯಾಂತರ ಚಿತ್ರ ಪ್ರೇಮಿಗಳನ್ನು ಕಾಡುತ್ತಿರುವ ಪ್ರಶ್ನೆಗೆ ಉತ್ತರ ಇರುವ 'ಬಾಹುಬಲಿ - ದಿ ಕನ್ ಕ್ಲೂಶನ್' ತೆರೆಗೆ ಬರಲು ಕೇವಲ ಮೂರು ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಜನರು ಚಿತ್ರವನ್ನು ಕಣ್ತುಂಬಿಕೊಳ್ಳುವ ಮೊದಲೇ 'ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಏಕೆ?' ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆಯಂತೆ. ಆ ಉತ್ತರ ತಿಳಿದುಕೊಳ್ಳುವ ಕುತೂಹಲವಿರುವವರು ಮುಂದೆ ಓದಿ...

ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ಕಿದೆ ಉತ್ತರ

ಅಂದಹಾಗೆ 'ಬಾಹುಬಲಿ 2' ಚಿತ್ರ ಬಿಡುಗಡೆಗೂ ಮುನ್ನ 'ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ?' ಎಂಬ ಗುಟ್ಟು ಈಗ ಆಂಧ್ರ ಪ್ರದೇಶದಲ್ಲಿ ರಟ್ಟಾಗಿದೆ ಎಂದು ಟಾಲಿವುಡ್ ಮೂಲಗಳು ಹೇಳುತ್ತಿವೆ.[ಅದ್ಭುತಗಳ ಅನಾವರಣ ಮಾಡಿದ 'ಬಾಹುಬಲಿ 2' ಟ್ರೈಲರ್]

ಲೀಕ್ ಆದ ರಹಸ್ಯ ಇದು...

ಆದರೆ ಉತ್ತರ ನಿಜನಾ ಅಥವಾ ರೂಮರ್ಸ್ ಇರಬಹುದಾ ಎಂಬ ಖಚಿತ ಮಾಹಿತಿ ತಿಳಿದಿಲ್ಲ. ಯಾಕಂದ್ರೆ ಬಾಹುಬಲಿಯನ್ನು ಕಟ್ಟಪ್ಪ ಕೊಂದ ಕಾರಣವನ್ನು ಚಿತ್ರತಂಡದ ಯಾರು ಸಹ ಬಿಟ್ಟುಕೊಟ್ಟಿಲ್ಲ. ಆದ್ರೆ ಉತ್ತರ ಮಾತ್ರ ಅಚ್ಚರಿ ಮೂಡಿಸಿದೆ. ಯಾಕಂದ್ರೆ....

ಶಿವಗಾಮಿಯೇ ಕಾರಣ..

ಹೌದು... ಬಾಹುಬಲಿಯನ್ನು ಕಟ್ಟಪ್ಪ ಹತ್ಯೆ ಮಾಡಲು ಕಾರಣ ಶಿವಗಾಮಿಯಂತೆ. ಹೀಗೆಂದು ಸುದ್ದಿಯೊಂದು ಈಗ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಬಾಹುಬಲಿ ವಿರುದ್ಧ ಶಿವಗಾಮಿಗೆ ಸುಳ್ಳು ಮಾಹಿತಿ

ಬಾಹುಬಲಿ ವಿರುದ್ಧ ಶಿವಗಾಮಿಗೆ, ಬಲ್ಲಾಳ ದೇವ ಮತ್ತು ತಂದೆ ಬಿಜ್ಜಳ ದೇವ ಸುಳ್ಳೊಂದನ್ನು ಹೇಳುತ್ತಾರಂತೆ. ಇದನ್ನು ನಂಬಿದ ಶಿವಗಾಮಿ, ಬಾಹುಬಲಿ ಮೇಲೆ ಕೋಪಗೊಂಡು, ಬಾಹುಬಲಿಯನ್ನು ಸಾಯಿಸುವಂತೆ ಕಟ್ಟಪ್ಪನಿಗೆ ಆಜ್ಞೆ ನೀಡುತ್ತಾಳಂತೆ. ಈ ರಹಸ್ಯ ಲೀಕ್ ಆದ ನಂತರ ಈಗ ಇನ್ನೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಅದೇನಂದ್ರೆ ಶಿವಗಾಮಿಗೆ, ಬಾಹುಬಲಿ ವಿರುದ್ಧ ಹೇಳಿದ ಸುಳ್ಳು ಏನು ಎಂಬುದು.?

ಇದೇ ನಿಜನಾ?

ಆದ್ರೆ ಬಾಹುಬಲಿಯನ್ನು ಕಟ್ಟಪ್ಪ ಕೊಲ್ಲಲು ಇದೇ ನಿಜವಾದ ಕಾರಣವೇ ಎಂಬುದಕ್ಕೆ ಎಲ್ಲರೂ 'ಬಾಹುಬಲಿ -ದಿ ಕನ್ ಕ್ಲೂಶನ್' ನೋಡಿಯೇ ಉತ್ತರ ತಿಳಿಯಬೇಕಿದೆ.

'ಬಾಹುಬಲಿ'ಗಿಂತ 'ಬಾಹುಬಲಿ 2' ರೋಮಾಂಚನಕಾರಿಯಾಗಿದೆ

ಆದ್ರೆ ನೀವು ನೋಡಿದ 'ಬಾಹುಬಲಿ - ದಿ ಬಿಗಿನ್ನಿಂಗ್' ಚಿತ್ರಕ್ಕಿಂತ 'ಬಾಹುಬಲಿ - ದಿ ಕನ್ ಕ್ಲೂಶನ್' ಚಿತ್ರವನ್ನು ನಿರ್ದೇಶಕ ಎಸ್.ಎಸ್.ರಾಜಮೌಳಿ ಅತ್ಯದ್ಭುತವಾದ ಯುದ್ಧ ಸನ್ನಿವೇಶಗಳ ದೃಶ್ಯಗಳಿಂದ ಮೇಕಿಂಗ್ ಮಾಡಿದ್ದು, ಹಾಲಿವುಡ್ ಚಿತ್ರಗಳ ರೀತಿ ಸೂಪರ್ ಆಗಿದೆಯಂತೆ.['ಬಾಹುಬಲಿ' ಚಿತ್ರಕ್ಕಿಂತ 'ಬಾಹುಬಲಿ-2' ಸೂಪರ್ ಆಗಿದ್ಯಂತೆ.! ಹೇಳಿದವರ್ಯಾರು ಗೊತ್ತೇ.?]

ಏಪ್ರಿಲ್ 28 ಕ್ಕೆ ಬಿಡುಗಡೆ

ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ, ಪ್ರಭಾಸ್, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ, ರಾಣಾ ದಗ್ಗುಬಾಟಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಮೂಡಿಬಂದಿರುವ 'ಬಾಹುಬಲಿ 2' ಏಪ್ರಿಲ್ 28 ರಂದು ಬಿಡುಗಡೆ ಆಗಲಿದೆ.

English summary
SS Rajamounli directorial 'Baahubali 2' story leaked, here is why Kattappa killed Bahubali.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada