»   » 'ಬಾಹುಬಲಿ' ಪೋಸ್ಟರ್ ರಿಲೀಸ್, ಕದ್ದಿದ್ದು ಎಲ್ಲಿಂದ?

'ಬಾಹುಬಲಿ' ಪೋಸ್ಟರ್ ರಿಲೀಸ್, ಕದ್ದಿದ್ದು ಎಲ್ಲಿಂದ?

By: ಉದಯರವಿ
Subscribe to Filmibeat Kannada

ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅತ್ಯದ್ಭುತ ಚಿತ್ರ ಎಂದೇ ಬಿಂಬಿತವಾಗಿರುವ 'ಬಾಹುಬಲಿ' ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರಗಳ ಬಗ್ಗೆ ಟ್ವಿಟ್ಟರ್ ನಲ್ಲಿ ರಾಜಮೌಳಿ ಒಂದೊಂದಾಗಿ ಬಹಿರಂಗಪಡಿಸುತ್ತಿದ್ದಾರೆ.

ಮೇ.1ರ ಕಾರ್ಮಿಕರ ದಿನದಂದು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಆದರೆ ಅವರ ಸಂಭ್ರಮ ಬಹಳ ಕಾಲ ಉಳಿಯಲಿಲ್ಲ. ಏಕೆಂದರೆ ಈ ಪೋಸ್ಟರ್ ಯಾವ ಚಿತ್ರದ 'ಸ್ಫೂರ್ತಿ' ಎಂಬುದು ಗೊತ್ತಾಗಿ ಭ್ರಮನಿರಸನವಾಗಿದೆ. [ದಂಗುಬಡಿಸುವ ರಾಜಮೌಳಿ 'ಬಾಹುಬಲಿ' ಚಿತ್ರದ ಸೆಟ್ಸ್]

Baahubali

ಅಮೆರಿಕನ್ ಕಾಮಿಡಿ ಡ್ರಾಮಾ 'ಸೈಮನ್ ಬಿರ್ಚ್' ಚಿತ್ರದ ಪೋಸ್ಟರನ್ನು ಯಥಾವತ್ ಹೋಲುತ್ತಿದೆ 'ಬಾಹುಬಲಿ' ಚಿತ್ರ ಪೋಸ್ಟರ್. ಅಯ್ಯೋ ರಾಜಮೌಳಿ ಸಹ ಕಾಪಿ ಹೊಡೆದರಲ್ಲಪ್ಪಾ ಎಂದು ಅವರ ಅಭಿಮಾನಿಗಳಿಗೆ ಕೊಂಚ ಬೇಸರವಾಗಿದೆ.

'ಬಾಹುಬಲಿ' ಚಿತ್ರಕ್ಕೆ ಕನ್ನಡಿ ಹಿಡಿದಂತಿರುವ ಈ ಪೋಸ್ಟರ್ ನೋಡಿದರೆ ಕಥೆ ಇದರ ಸುತ್ತ ಸುತ್ತುತ್ತದೆ ಎಂಬ ಸುಳಿವನ್ನೂ ರಾಜಮೌಳಿ ನೀಡಿದ್ದಾರೆ. ಅಂದರೆ 'ಸೈಮನ್ ಬಿರ್ಚ್' ಚಿತ್ರದ ಕಥೆಯನ್ನು ಹೋಲುತ್ತದೆಯೇ ಎಂಬ ಅನುಮಾನವನ್ನೂ ಬಾಹುಬಲಿ ಚಿತ್ರ ಮೂಡಿಸಿದೆ.

ರಾಜಮೌಳಿ ಚಿತ್ರಗಳು ಈ ರೀತಿ ವಿವಾದಗೊಳಗಾಗಿದ್ದು ಇದೇ ಮೊದಲಲ್ಲ. ಈ ಹಿಂದೆ 'ಈಗ' ಚಿತ್ರಕ್ಕೂ ವಿವಾದ ಅಂಟಿಕೊಂಡಿತ್ತು. ಹಾಲಿವುಡ್ ಕಿರುಚಿತ್ರ 'ಕಾಕ್ರೋಚ್' ಚಿತ್ರವನ್ನೇ ಕದ್ದು 'ಈಗ' ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಈ ಬಗ್ಗೆ ರಾಜಮೌಳಿ ಸ್ಪಷ್ಟೀಕರಣ ಕೊಟ್ಟಿದ್ದರು. ತಾವು ಹಾಲಿವುಡ್ ಜಿರಲೆ(ಳೆ) ಕದ್ದು ನೊಣ ಮಾಡಿಲ್ಲ ಎಂದು ಹೇಳಿದ್ದರು. ಅಲ್ಲಿಗೆ ವಿವಾದ ಬಗೆಹರಿದಿತ್ತು. ಈಗ ಬಾಹುಬಲಿ ಚಿತ್ರಕ್ಕೂ ಅದೇ ರೀತಿಯ ಸಮಸ್ಯೆ ಎದುರಾಗಿದೆ.

English summary
As promised earlier, S S Rajamouli has kick started releasing few of Baahubali's principle characters on twitter. Starting with a baby's picture on May 1st, he has revealed a poster of Baahubali The Beginning online. But the hype and the excitement around the poster did not last long. Few of the fans and movie lovers were kick enough in finding the original poster, from where Rajamouli got 'inspired'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada