»   » ಯಥಾ ಗುರು ತಥಾ ಶಿಷ್ಯ, ಅರ್ಜುನನಂತೇ ಚೇತನ್! ಹೌದಾ?

ಯಥಾ ಗುರು ತಥಾ ಶಿಷ್ಯ, ಅರ್ಜುನನಂತೇ ಚೇತನ್! ಹೌದಾ?

Posted By: ಜೀವನರಸಿಕ
Subscribe to Filmibeat Kannada

ಇದು ಗಾಂಧಿನಗರದ ಗರಮಾಗರಂ ರಿಯಾಲಿಟಿ ನ್ಯೂಸ್. ಸದಾಶಿವನಗರದ ಅಣ್ಣಾವ್ರ ಮನೆಯಿಂದ ಬಂದಿರೋ ಅಗದೀ ಅಚ್ಚರಿಯ ಮತ್ತು ಬಿಸಿಬಿಸಿ ಸುದ್ದಿ. ಅಂದಹಾಗೆ ಇದು ಭರ್ಜರಿ ನಿರ್ದೇಶಕ ಚೇತನ್ ಸ್ಟೋರಿ. ಭರ್ಜರಿ ನಿರ್ದೇಶಕ ಅಂದಾಗ ನೆನಪಾಗಲಿಲ್ವಾ? ಇದು ಬಹಾದ್ದೂರ್ ನಿರ್ದೇಶಕ ಚೇತನ್ ಕುಮಾರ್ ಕಥೆ.

ಚೇತನ್ 'ಅದ್ಧೂರಿ' ಸಿನಿಮಾದಲ್ಲಿ ಎಪಿ ಅರ್ಜುನ್ಗೆ ಅಸೋಸಿಯೇಟ್ ನಿರ್ದೇಶಕನಾಗಿ ಕೆಲಸ ಮಾಡಿ, ನಂತ್ರ ದ್ರುವ ಸರ್ಜಾಗೆ ಕಥೆ ಹೇಳಿ ಎರಡನೇ ಸಿನಿಮಾಗೆ ಅವಕಾಶ ಗಿಟ್ಟಿಸಿಕೊಂಡು ಸ್ವತಂತ್ರ ನಿರ್ದೇಶಕರಾದ್ರು. ಅಂತೂ ಇಂತೂ ಧ್ರುವ ಮತ್ತು ರಾಧಿಕಾ ಪಂಡಿತ್ ನಾಯಕ ನಾಯಕಿಯರಾಗಿದ್ದ ಬಹಾದ್ದೂರ್ ಸಿನಿಮಾ ಗೆಲ್ತು, ನೂರು ದಿನ ಓಡಿತು.

ಬಹಾದ್ದೂರ್ ಗೆದ್ದಿದ್ದರಲ್ಲಿ ನಿರ್ದೇಶಕ ಚೇತನ್ ವಿಶೇಷವಾಗಿದ್ದೇನೂ ಮಾಡಿರಲಿಲ್ಲ. ನಿರ್ಮಾಪಕರಿಂದ ಬೇಜಾನ್ ಹಣ ಖರ್ಚು ಮಾಡಿಸಿದ್ದರು. ಸಿನಿಮಾ ನೋಡೋಕೆ ಅಂದ ಚಂದವಾಗಿದೆ ಅಷ್ಟೆ, ನಿರ್ದೇಶಕನಾಗಿ ನೀರಿಳಿಸೋ ಶ್ರಮ ಏನೂ ಹಾಕಿಲ್ಲ ಚೇತನ್ ಅಂತಾನೂ ಸಿನಿಪಂಡಿತರು ಅವರವರಲ್ಲಿ ಮಾತಾಡಿಕೊಂಡರು. ಆ ಸಿನಿಮಾಗೂ ಈಗ ಹೇಳ್ತಿರೋ ಕಥೆಗೂ ಏನು ಸಂಬಂಧ ಅಂತೀರಾ? ಖಂಡಿತ ಇದೆ. ಅದೇನಂತ ಈ ಸ್ಲೈಡ್ ನೋಡ್ತಾ ಹೋಗಿ.. [ದರ್ಶನ್ ಮತ್ತು ಎ.ಪಿ.ಅರ್ಜುನ್ ಮಧ್ಯೆ ತಂದಿಟ್ಟವರಾರು?]

ಬಿಗ್ ಬಜೆಟ್ ಬಹಾದ್ದೂರ್

ಸಿನಿಮಾ ಅಷ್ಟಾಗಿ ಕಲೆಕ್ಷನ್ ಮಾಡದಿದ್ರೂ ನಿರ್ಮಾಪಕ ಕೆ ಪಿ ಶ್ರೀಕಾಂತ್ ಮತ್ತು ಕನಕಪುರ ಶ್ರೀನಿವಾಸ್ ಸುಮ್ಮನೇ ಪ್ರಚಾರ ಮಾಡಿ ಹಾಕಿದ್ದ ಬಿಗ್ ಬಜೆಟ್ನ ವಾಪಸ್ ಪಡೆಯೋಕೆ ಥಿಯೇಟರ್ ಬಾಡಿಗೆ ಕಟ್ಟಿ ಸಿನಿಮಾವನ್ನ ಥಿಯೇಟರ್ನಲ್ಲಿ ಉಳಿಸಿಕೊಂಡು 75 ದಿನ 100 ಡೇಸ್ ಹಬ್ಬ ಆಚರಿಸಿದ್ರು ಅನ್ನೋದು ಥಿಯೇಟರ್ ಮೂಲಗಳ ಮಾಹಿತಿ.

ಚೇತನ್ಗೆ ಗೂಸಾ ಬಿದ್ದಿತ್ತಾ?

ಇದ್ರ ನಡುವೆ ಹಳೆಯ ನಿರ್ಮಾಪಕರು ಚೇತನ್ಗೆ ಗೂಸಾ ಕೊಟ್ರು ಅಂತ ಸುದ್ದಿಯಾಯ್ತು. ಚೇತನ್ ಆಸ್ಪತ್ರೆಯಲ್ಲಿದ್ದ ಬಗ್ಗೆಯೂ ಮಾಧ್ಯಮಗಳು ಸುದ್ದಿ ಮಾಡಿದ್ವು. ಇತ್ತೀಚೆಗೆ ಅರ್ಜುನ್ಗೆ ದರ್ಶನ್ ಐರಾವತ ಶೂಟಿಂಗ್ ವೇಳೆ ಗೂಸಾ ಕೊಟ್ಟಿದ್ರು ಅಂತ ಸುದ್ದಿಯಾಗಿತ್ತು.

ಜೇಮ್ಸ್ಗೆ ಕಥೆ ಮಾಡ್ತಿದ್ದ ಚೇತನ್

ಬಹಾದ್ದೂರ್ ಗೆದ್ದ ನಂತ್ರ ಪವರ್ಸ್ಟಾರ್ಗೆ ಕಥೆ ಹೇಳಿ ಒಪ್ಪಿಸಿದ್ದ ಚೇತನ್ ಜೇಮ್ಸ್ ಅನ್ನೋ ಟೈಟಲ್ ಇಟ್ಟು ಡೇಟ್ಸ್ ಕೂಡ ಪಡೆದಿದ್ರು. ಆದ್ರೆ ಅದಕ್ಕಾಗಿ ಒ0ದೂವರೆ ವರ್ಷ ಕಾಯಲೇಬೇಕಾಗಿತ್ತು.

ಈ ಭರ್ಜರಿ ಗ್ಯಾಪ್ನಲ್ಲಿ

ಜೇಮ್ಸ್ಗೆ ಕಥೆ ಮಾಡಿದ್ದ ಚೇತನ್ ಒಂದೂವರೆ ವರ್ಷ ಕಾಯಬೇಕಲ್ವಾ ಅಂತ ಯೋಚಿಸ್ತಿದ್ದಾಗ ದೊಡ್ಮನೆ ರಾಘಣ್ಣ ಚೇತನ್ರನ್ನ ಕರೆದು ಸಿದ್ಧಾರ್ಥ ನಂತ್ರ ತನ್ನ ಮಗ ವಿನಯ್ಗೆ ಒಂದು ಸಿನಿಮಾ ಮಾಡು ಅಂತ ಹೇಳಿದ್ರು..

ಆಗಲ್ಲ ಅಂದ್ರು ಚೇತನ್

ಇಲ್ಲ ರಾಘಣ್ಣ ನಾನು ಅಪ್ಪು ಸರ್ ಸಿನಿಮಾಗೇ ಕಂಪ್ಲೀಟ್ ವರ್ಕ್ ಮಾಡ್ತೀನಿ. ಅದನ್ನ ಬಿಟ್ಟು ಬೇರೆಯದ್ದು ಕಾನ್ಸಂಟ್ರೇಟ್ ಮಾಡೋದು ಬೇಡ ಅನ್ಕೊಂಡಿದ್ದೀನಿ ಅಂದ್ರು. ಇದಕ್ಕೆ ರಾಘಣ್ಣನೂ ಸಮ್ಮತಿಸಿದ್ರು.

ಚೇತನ್ ದುರಾಸೆ?

ಆದ್ರೆ ಈ ನಡುವೆ ಹಳೆಯ ನಿರ್ಮಾಪಕರು ದ್ರುವ ಸರ್ಜಾಗೆ ಒಂದು ಸಿನಿಮಾ ಮಾಡೋಕೆ ಚೇತನ್ಗೆ ಹೇಳಿದ್ದಾರೆ. ಇದ್ರಿಂದ ಒಂದು ಕಡೆ ಹಣಕಾಸಿನ ಲಾಭವಾದ್ರೆ ಮತ್ತೊಂದು ಕಡೆ ಮೂರನೇ ಸಿನಿಮಾ ಪವರ್ಸ್ಟಾರ್ಗೆ ಪಕ್ಕಾ ಹಿಟ್ ಕೊಡ್ಬಹುದು. ಎರಡನೇ ಸಿನಿಮಾ `ಭರ್ಜರಿ'ಯಾಗಿ ಮಾಡೋಣ ಅಂತ ಚೇತನ್ ಯೋಚಿಸಿದ್ದಾರೆ.

ವಿನಯ್ರಾಜ್ಕುಮಾರ್ ಗ್ಯಾರಂಟಿಯಲ್ಲ

ವಿನಯ್ ರಾಜ್ಕುಮಾರ್ಗಿಂತ ದ್ರುವ ಸರ್ಜಾ ಬೆಸ್ಟ್ ಅಂತ ಲೆಕ್ಕಾಚಾರ ಹಾಕಿದ್ದ ಚೇತನ್ರನ್ನ ಕರೆದ ರಾಘಣ್ಣ ನೀನು ವಿನಯ್ಗೆ ಸಿನಿಮಾ ಮಾಡಲ್ಲ ಅಪ್ಪು ಸಿನಿಮಾಗೆ ಕಾಂಸಂಟ್ರೇಟ್ ಮಾಡ್ತೀನಿ ಅಂತ ಹೇಳಿದವ್ನು, ಈಗ ಬೇರೊಂದು ಸಿನಿಮಾ ಮಾಡ್ತಿದ್ದಿಯಾ ಅಂದ್ರೆ ಅಪ್ಪು ಡೇಟ್ಸ್ ಸಿಗಲ್ಲ ಬೇರೆ ಸಿನಿಮಾ ಮಾಡ್ಕೋ ಅಂದಿದ್ದಾರೆ.

ಸೋ ಜೇಮ್ಸ್ ಖಲಾಸ್

ರಾಘಣ್ಣನ ಖಡಕ್ ನಿರ್ಧಾರದಿಂದ ಜೇಮ್ಸ್ ಕಥೆ ಅಲ್ಲಿಗೇ ಮುಗಿದಿದೆ. ಇನ್ನು ಚೇತನ್ಗೆ ಪವರ್ಸ್ಟಾರ್ ಡೇಟ್ ಸಿಗೋದು ಕಷ್ಟ ಅಂತಿದೆ ಗಾಂಧಿನಗರ.

ಅರ್ಜುನ್ಗೆ ಕೂಡ ಹೀಗೇ ಆಗಿತ್ತು

ಈ ಹಿಂದೆ ಪವರ್ಸ್ಟಾರ್ಗೆ ಸಿನಿಮಾ ಮಾಡಬೇಕಿದ್ದ ಅರ್ಜುನ್ ಎಡವಟ್ಟು ಮಾಡಿಕೊಂಡಿದ್ದರಿಂದ ಅದೇ ಸಿನಿಮಾವನ್ನ ಐರಾವತ ಅನ್ನೋ ಹೆಸ್ರಲ್ಲಿ ದರ್ಶನ್ಗೆ ಮಾಡ್ತಿರೋದು. ಇದ್ದನ್ನ ನೋಡಿ ಗುರುವಿನಂತೆ ಶಿಷ್ಯ ಅನ್ನೋ ಮಾತು ಮತ್ತೆ ಸತ್ಯವಾಗಿದೆ ಅಂದುಕೊಳ್ತಿದ್ದಾರೆ ಸಿನಿಪಂಡಿತರು.

ಅರ್ಜುನ್ ಆವಾಂತರಕ್ಕೆ ರಿವೇಂಜ್

ಇದೇ ರಿವೇಂಜ್ಗಾಗಿ ಪವರ್ಸ್ಟಾರ್ ಪುನೀತ್ ಒಡೆಯರ್ ಮೂಲಕ ರಣವಿಕ್ರಮ ಸಿನಿಮಾ ಮಾಡುವ ಮೂಲಕ ತಾನೂ ಪೊಲೀಸ್ ಆಫೀಸರ್ ರೋಲ್ನ ಕಥೆ ಮಾಡಿಸಿದ್ದೂ ಎಲ್ಲರಿಗೂ ಗೊತ್ತಿರೋ ವಿಷ್ಯಾನೇ ಅಂತಿದ್ದಾರೆ ಸಿನಿಪಂಡಿತರು.

English summary
Here is some hot news about Bahaddur director Chetan Kumar. Why didn't he get chance to direct Puneeth Rajkumar for James? Why did Chetan reject movie for Siddharth Raghavendra Rajkumar? Inside story tells something else. Read on.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada