For Quick Alerts
  ALLOW NOTIFICATIONS  
  For Daily Alerts

  'ಬನಾರಸ್' ಬೆನ್ನಲ್ಲೆ ಝೈದ್ ಖಾನ್‌ಗೆ ಬೇಡಿಕೆ ಶುರು, ಹೊಸ ಸಿನಿಮಾ ಯಾರ ಜೊತೆ?

  |

  ಮಾಜಿ ಸಚಿವ, ಹಾಲಿ ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಮೊದಲ ಬಾರಿ ನಟಿಸಿರುವ 'ಬನಾರಸ್' ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಚಿತ್ರಮಂದಿರಗಳಲ್ಲಿ ಮಿಶ್ರ ಫಲಿತಾಂಶ ಪಡೆದಿದೆ.

  ಸಿನಿಮಾದ ಬಗ್ಗೆ ಕೆಲವರು ಉತ್ತಮ ಮಾತುಗಳನ್ನಾಡಿದ್ದರೂ ಸಹ 'ಕಾಂತಾರ' ಹಾಗೂ 'ಗಂಧದ ಗುಡಿ' ಅಬ್ಬರದ ನಡುವೆ ಹೆಚ್ಚು ಸಮಯ ಚಿತ್ರಮಂದಿರಗಳಲ್ಲಿ ಉಳಿಯಲಿಲ್ಲ ಸಿನಿಮಾ. ಹಾಗೆಂದು ಸಿನಿಮಾ ಕೆಟ್ಟದಾಗಿತ್ತೆಂದೇನೂ ಇಲ್ಲ.

  ಟೈಮ್ ಲೂಪ್‌ ವಿಷಯ ಆಧರಿಸಿದ ಈ ಸಿನಿಮಾದ ಬಗ್ಗೆ ವಿಮರ್ಶಕರು ಉತ್ತಮ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದರು. ಅದರಲ್ಲೂ ವಿಶೇಷವಾಗಿ ಈ ಸಿನಿಮಾದ ಮೂಲಕ ನಾಯಕ ನಟನಾಗಿ ಎಂಟ್ರಿ ನೀಡಿದ ಝೈದ್ ಖಾನ್‌ ಬಗ್ಗೆ ಪ್ರಶಂಸೆ ಮಾತುಗಳು ಕೇಳಿ ಬಂದಿದ್ದವು.

  ಮೊದಲ ಸಿನಿಮಾ ಎಂಬುದು ಅರಿವಾಗದ ರೀತಿಯಲ್ಲಿ ಝೈದ್ ನಟಿಸಿದ್ದಾರೆ ಎಂದು ಹಲವರು ಶ್ಲಾಘಿಸಿದ್ದರು. ಮೊದಲ ಸಿನಿಮಾ ಆದರೂ ಹೆಚ್ಚಿನ ಬಿಲ್ಡಪ್‌ಗಳಿಲ್ಲದೆ, ಸಂಯಮದಿಂದ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

  ನೋಡಲು ಸ್ಪುರದ್ರೂತಿಯಾಗಿಯೂ ಇರುವ ಝೈದ್ ಖಾನ್‌ಗೆ 'ಬನಾರಸ್' ಬೆನ್ನಲ್ಲೆ ಇದೀಗ ಹೊಸ ಸಿನಿಮಾದ ಅವಕಾಶವೊಂದು ಅರಸಿ ಬಂದಿರುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

  ಶಿವರಾಜ್ ಕುಮಾರ್ ಅವರ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರಾಗಿರುವ ಎ ಹರ್ಷ ಅವರು ಝೈದ್ ಖಾನ್‌ಗೆ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಸುದ್ದಿ ಇನ್ನೂ ಬಂದಿಲ್ಲವಾದರೂ, ಆಕ್ಷನ್ ಭರಿತ ಪ್ರೇಮಕತೆಯೊಂದನ್ನು ಹರ್ಷ, ಝೈದ್ ಖಾನ್‌ಗಾಗಿ ತಯಾರು ಮಾಡಿಕೊಂಡಿದ್ದಾರಂತೆ.

  ಹರ್ಷ ಪ್ರಸ್ತುತ, ಶಿವರಾಜ್ ಕುಮಾರ್ ನಟನೆಯ 'ವೇದಾ' ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. 'ವೇದಾ' ಸಿನಿಮಾ ಬಿಡುಗಡೆ ಆದ ಬಳಿಕ ಝೈದ್ ಖಾನ್ ಜೊತೆಗಿನ ಸಿನಿಮಾದ ಬಗ್ಗೆ ಘೋಷಣೆ ಆಗಲಿದೆ ಎನ್ನಲಾಗಿದೆ.

  ''ಬನಾರಸ್' ಸಿನಿಮಾ ಓಡದಿದ್ದರೆ ನನ್ನೊಳಗಿನ ನಟ ಸತ್ತು ಹೋಗುತ್ತಾನೆ' ಎಂದು ಝೈದ್ ಖಾನ್, 'ಬನಾರಸ್' ಪ್ರಚಾರ ಸಂದರ್ಭದಲ್ಲಿ ಹೇಳಿದ್ದರು. 'ಬನಾರಸ್' ಗೆದ್ದಿಲ್ಲವಾದರು ಪೂರ್ಣವಾಗಿ ಸೋತಿಲ್ಲ. ಅಲ್ಲದೆ, ಝೈದ್ ಖಾನ್‌ ಬಗ್ಗೆಯೂ ಉತ್ತಮ ಅಭಿಪ್ರಾಯ ಕೇಳಿ ಬರುತ್ತಿದೆ. ಝೈದ್ ಖಾನ್‌ ಕನ್ನಡ ಚಿತ್ರರಂಗದಲ್ಲಿ ಮುಂದುವರೆಯುತ್ತಾರೊ ಅಥವಾ ರಾಜಕೀಯದತ್ತ ಹೊರಳುತ್ತಾರೊ ಕಾದು ನೋಡಬೇಕಿದೆ.

  English summary
  Banaras movie hero Zaid Khan will act in director Harsha's next movie. This movie is a romantic action movie.
  Monday, November 14, 2022, 10:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X