For Quick Alerts
  ALLOW NOTIFICATIONS  
  For Daily Alerts

  ಡೈರೆಕ್ಟರ್ ಗೆ 'ಬಾಸ್ಟರ್ಡ್' ಎಂದರೇ ಐಂದ್ರಿತಾ ರೇ ?

  By ಉದಯರವಿ
  |

  ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಿ ನಟಿ ಐಂದ್ರಿತಾ ರೇ ವಿರುದ್ಧ ದೂರು ದಾಖಲಿಸಲಾಗಿದೆ. ಕನ್ನಡದ 'ಬರ್ಫಿ' ಚಿತ್ರದ ನಿರ್ದೇಶಕ ಶೇಖರ್ ಅವರು ಕನ್ನಡ ನಿರ್ದೇಶಕರ ಸಂಘಕ್ಕೆ ಸೋಮವಾರ (ಸೆ.2) ದೂರು ನೀಡಿದ್ದಾರೆ.

  ಚಿತ್ರದ ಪ್ರೊಮೋನಲ್ಲಿ ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ತಮ್ಮನ್ನು ನಿಂದಿಸಿದ್ದಾಗಿ ಶೇಖರ್ ದೂರಿದ್ದಾರೆ. ಐಂದ್ರಿತಾ ಹೆಸರನ್ನು ತಾವು ಎಲ್ಲಿಯೂ ಬಳಸಿಕೊಂಡಿಲ್ಲ ಎಂದೂ ಶೇಖರ್ ಹೇಳಿದ್ದಾರೆ.

  ಸಾಮಾಜಿಕ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಪ್ರೊಮೋದಲ್ಲೂ ಅವರ ಹೆಸರನ್ನು ಮ್ಯೂಟ್ ಮಾಡಲಾಗಿದೆ. ಆದರೂ ಐಂದ್ರಿತಾ ಅವರು ತಮಗೆ ಕರೆ ಮಾಡಿ "ಬಾಸ್ಟರ್ಡ್" ಎಂದು ನಿಂದಿಸಿರುವುದಾಗಿ ಶೇಖರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ಐಂದ್ರಿತಾ ರೇ ಅವರ ವರ್ತನೆಯಿಂದ ತಮ್ಮ ಮನಸ್ಸಿಗೆ ಬೇಸರವಾಗಿದೆ. ಅವರು ತಮ್ಮಲ್ಲಿ ಕ್ಷಮೆ ಕೇಳಬೇಕು ಎಂದು ಶೇಖರ್ ಆಗ್ರಹಿಸಿದ್ದಾರೆ. ತಾವು ಬರ್ಫಿ ಚಿತ್ರದಲ್ಲಿ ಐಂದ್ರಿತಾ ಅವರನ್ನು ಕೆಟ್ಟದಾಗಿ ಬಿಂಬಿಸಿಲ್ಲ. ಅವರ ಹೆಸರನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ಒಂದು ವೇಳೆ ಅವರನ್ನು ಕೆಟ್ಟದಾಗಿ ಬಿಂಬಿಸಿದ್ದರೆ ಸಾಬೀತು ಮಾಡಲಿ ಎಂದು ಶೇಖರ್ ಕೇಳಿದ್ದಾರೆ.

  ತಮ್ಮ ಚಿತ್ರದಲ್ಲಿ ಯಾರ ಬಗ್ಗೆಯೂ ಅಗೌರವ ತೋರಿಸಿಲ್ಲ. ಒಬ್ಬರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನೂ ಮಾಡಿಲ್ಲ. ಐಂದ್ರಿತಾ ಅವರು ನಿರ್ದೇಶಕರೊಬ್ಬರಿಗೆ ಗೌರವ ಕೊಡದೆ ಬಾಸ್ಟರ್ಡ್ ಎಂದು ನಿಂದಿಸಿರುವುದು ಎಷ್ಟು ಸರಿ ಎಂದು ಶೇಖರ್ ಪ್ರಶ್ನಿಸಿದ್ದಾರೆ.

  ಈ ಬಗ್ಗೆ ಪ್ರತಿಕ್ರಿಯಿಸಿರುವ ಐಂದ್ರಿತಾ ಅವರು. ಇದೊಂದು ಪಬ್ಲಿಸಿಟಿ ಗಿಮ್ಮಿಕ್ ಅಷ್ಟೇ. ನಾನು ಅವರನ್ನು ನಿಂದಿಸಿಯೇ ಇಲ್ಲ. ಬಿಟ್ಟಿ ಪ್ರಚಾರಕ್ಕಾಗಿ ಅವರು ಈ ರೀತಿ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.

  ತಮ್ಮ ಬಳಿ ನಿರ್ದೇಶಕರಾದ ಶೇಖರ್ ಅವರ ಮೊಬೈಲ್ ಸಂಖ್ಯೆಯೇ ಇಲ್ಲ. ತಮ್ಮ ವಿರುದ್ಧ ಅವರು ಮಾಡುತ್ತಿರುವುದು ಸುಳ್ಳು ಆರೋಪ ಎಂದಿದ್ದಾರೆ. ಬರ್ಫಿ ಚಿತ್ರದಲ್ಲಿ ದಿಗಂತ್ ಜೊತೆ ಮಲ್ಲು ಬೆಡಗಿ ಭಾಮಾ ನಾಯಕಿಯಾಗಿ ಅಭಿನಯಿಸಿದ್ದಾರೆ.

  English summary
  Kannada film Barfi director Shekar has complained against actress Aindritra Ray with the Karnataka Film Chamber of Commerce, producers association and the directors association for allegedly abusing him on phone. In his complaint, the director alleges that the actress abused him over phone after calling him for referring to her in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X