For Quick Alerts
  ALLOW NOTIFICATIONS  
  For Daily Alerts

  ತಮಿಳಿಗೆ ಹೊರಟ ಸುನಿ 'ಬಜಾರ್'?

  |

  ಸಿಂಪಲ್ ಸುನಿ ನಿರ್ದೇಶನದ 'ಬಜಾರ್' ಸಿನಿಮಾ ಈ ವಾರ ರಾಜ್ಯಾದ್ಯಂತ ತೆರೆಕಂಡಿದೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಸ್ಯಾಂಡಲ್ ವುಡ್ ಗೆ ಒಬ್ಬ ಮಾಸ್ ಹೀರೋ ಪರಿಚಯ ಆದ್ರು ಎಂದೇ ಹೇಳಲಾಗ್ತಿದೆ.

  ಸಿನಿಮಾ ರಿಲೀಸ್ ಆಗಿ ಒಂದೇ ದಿನದಲ್ಲಿ ಬಜಾರ್ ಬಗ್ಗೆ ಬ್ರೇಕಿಂಗ್ ನ್ಯೂಸ್ ಒಂದು ಹರಿದಾಡ್ತಿದೆ. ಕನ್ನಡದಲ್ಲಿ ಕಮಾಲ್ ಮಾಡ್ತಿರುವ ಬಜಾರ್ ಈಗ ತಮಿಳಿನಲ್ಲಿ ರೀಮೇಕ್ ಆಗಲಿದೆ ಎಂಬ ಸುದ್ದಿ ಬಹಿರಂಗವಾಗಿದೆ.

  ಸುನಿ ತೋರಿಸಿದ 'ಬಜಾರ್' ವಿಮರ್ಶಕರಿಗೆ ಇಷ್ಟ ಆಯ್ತಾ.?

  ರಿಲೀಸ್ ಗೂ ಮುಂಚೆ ಭಾರಿ ನಿರೀಕ್ಷೆ ಮೂಡಿಸಿದ್ದ ಬಜಾರ್ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಆಗಲೇ ಸೇಲ್ ಆಗಿತ್ತು. ಈಗ ತಮಿಳಿನ ರೀಮೇಕ್ ಹಕ್ಕು ಖರೀದಿಸಿಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಆದ್ರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಎಲ್ಲ ಅಂದುಕೊಂಡಂತೆ ಆದ್ರೆ, ಕಾಲಿವುಡ್ ನಲ್ಲೂ ಸುನಿ ಬಜಾರ್ ಹೋಗುವುದು ಪಕ್ಕಾ.

  ಇನ್ನುಳಿದಂತೆ ಧನ್ವೀರ್ ನಾಯಕನಾಗಿದ್ದು, ಅಧಿತಿ ಪ್ರಭುದೇವ ಹೀರೋಯಿನ್ ಆಗಿ ನಟಿಸಿದ್ದಾರೆ. ಸಾಧುಕೋಕಿಲಾ, ಶರತ್ ಲೋಹಿತಾಶ್ವ ಮುಖ್ಯ ಪಾತ್ರಗಳಲ್ಲಿ ಮಿಂಚಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನವಿದ್ದು, ಸಂತೋಷ್ ಪಜಾಜೇ ಅವರ ಛಾಯಗ್ರಹಣವಿದೆ. ಭಾರತಿ ಫಿಲಂ ಪ್ರೊಡಕ್ಷನ್ ಮೂಲಕ ತಿಮ್ಮೇಗೌಡ ನಿರ್ಮಾಣ ಮಾಡಿದ್ದಾರೆ.

  English summary
  Kannada film Bazaar released to positive buzz on February 1 with good theatre occupancy. If things go well, Bazaar may be remade in Tamil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X