»   » ನಿಖಿಲ್ 'ಜಾಗ್ವಾರ್' ಬಗ್ಗೆ ಜನ ಹೀಗೂ ಯೋಚನೆ ಮಾಡ್ತಿದ್ದಾರೆ ಸ್ವಾಮಿ!

ನಿಖಿಲ್ 'ಜಾಗ್ವಾರ್' ಬಗ್ಗೆ ಜನ ಹೀಗೂ ಯೋಚನೆ ಮಾಡ್ತಿದ್ದಾರೆ ಸ್ವಾಮಿ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳ ಸಿನಿಮಾಗಳು ತೆರೆಗೆ ಬಂದ್ರೆ ಮಾತ್ರ ಮೇನಿಯಾ...ಮಾಸ್ ಹಿಸ್ಟೀರಿಯಾ. ಅದ್ರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳು ತೆರೆ ಕಾಣಲು ಸಿದ್ಧವಾದ್ರಂತೂ 'ಕ್ರೇಜ್' ಕೇಳೋದೇ ಬೇಡ.

ಸ್ಟಾರ್ ಸಿನಿಮಾಗಳಿಗೆ ವಾರದ ಹಿಂದೆಯೇ ಬುಕ್ಕಿಂಗ್ ಶುರು ಆಗುತ್ತೆ. ಮೊದಲ ದಿನ, ಮೊದಲ ಶೋ ನೋಡ್ಬೇಕು ಅಂತ ಅದೆಷ್ಟೋ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಸಿನಿಮಾ ನೋಡ್ತಾರೆ.! ['ಜಾಗ್ವಾರ್' ಚಿತ್ರದ ಈ ಸುದ್ದಿ ಕೇಳಿದ್ರೆ, ನೀವು ತಲೆ ತಿರುಗಿ ಬೀಳ್ತೀರಾ!]


ಈಗ ಇದೇ ಕ್ರೇಜ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರಕ್ಕೂ ಅಂಟಿದೆ ಅಂದ್ರೆ ನೀವು ನಂಬಲೇಬೇಕು. ಮುಂದೆ ಓದಿ....


ನಿಖಿಲ್ ಕುಮಾರ್ ಗಿದೆ ಫ್ಯಾನ್ ಕ್ಲಬ್.!

ನಿಖಿಲ್ ಕುಮಾರ್ ಇನ್ನೂ ತೆರೆಮೇಲೆ ಕಾಣಿಸಿಕೊಂಡೇ ಇಲ್ಲ. ಅವರ ಆಕ್ಟಿಂಗ್ ಹೇಗಿರಲಿದೆ ಎಂಬ ಊಹೆ ಕೂಡ ಇಲ್ಲ. ಆದರೂ ನಿಖಿಲ್ ಕುಮಾರ್ ಗೆ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ. [ಎಕ್ಸ್ ಕ್ಲೂಸಿವ್ ಫೋಟೋ: 'ಜಾಗ್ವಾರ್' ಅಡ್ಡದಲ್ಲಿ ತಮನ್ನಾ ಜಿಂಗಿಚಕ್ಕ]


ಸಾಮಾಜಿಕ ಜಾಲತಾಣಗಳಲ್ಲಿ ನಿಖಿಲ್ ಫ್ಯಾನ್ಸ್

ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ 'ನಿಖಿಲ್ ಕುಮಾರ್ ಫ್ಯಾನ್ ಕ್ಲಬ್' ಸಖತ್ ಆಕ್ಟೀವ್ ಆಗಿದ್ದಾರೆ. [ಗಾಸಿಪ್ ನಿಜ ಆಯ್ತಲ್ಲ: ಮಿಲ್ಕಿ ಬ್ಯೂಟಿ ತಮನ್ನಾ ಕನ್ನಡಕ್ಕೆ ಬಂದ್ರಲ್ಲ.!]


'ಜಾಗ್ವಾರ್' ಮೊದಲ ಟಿಕೆಟ್ ಪಡೆಯಲು ಬಿಡ್ಡಿಂಗ್.!

ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಜಾಗ್ವಾರ್' ಮೊದಲ ಟಿಕೆಟ್ ಪಡೆಯಲು ಅಭಿಮಾನಿಗಳು ಬಿಡ್ಡಿಂಗ್ ನಡೆಸುತ್ತಿದ್ದಾರೆ. ನಿಮಗೆ ಅಚ್ಚರಿ ಅನಿಸಿದ್ರೂ ಇದೇ ಸತ್ಯ. [ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!]


ಎಷ್ಟು ದುಡ್ಡು ಆದರೂ ಸರಿ, ಮೊದಲ ಟಿಕೆಟ್ ಬೇಕೇ ಬೇಕ್.!

''ಎಷ್ಟು ದುಡ್ಡು ಆದರೂ ಪರ್ವಾಗಿಲ್ಲ, 'ಜಾಗ್ವಾರ್' ಚಿತ್ರದ ಮೊದಲ ಟಿಕೆಟ್ ನನಗೆ ಬೇಕೇ ಬೇಕು'' ಅಂತ ಒತ್ತಾಯ ಮಾಡುವ ಅನೇಕ ಫೋನ್ ಕರೆಗಳು 'ಜಾಗ್ವಾರ್' ಚಿತ್ರತಂಡಕ್ಕೆ ಬರುತ್ತಿವೆ.


ಹತ್ತು ಲಕ್ಷ ಕೊಡೋಕೂ ರೆಡಿ ಇದ್ದಾರೆ

ಮೈಸೂರು ಮೂಲಕ ಲೋಕೇಶ್ ಎಂಬ ವ್ಯಕ್ತಿ 'ಜಾಗ್ವಾರ್' ಚಿತ್ರದ ಮೊದಲ ಟಿಕೆಟ್ ಖರೀದಿಸಲು ಹತ್ತು ಲಕ್ಷ ರೂಪಾಯಿ ಕೊಡಲು ರೆಡಿಯಿದ್ದಾರಂತೆ.


ಇಷ್ಟೊಂದು ಕ್ರೇಜ್?

ಹೊಸ ಪ್ರತಿಭೆ ನಿಖಿಲ್ ಗೆ ಇಷ್ಟೊಂದು ಕ್ರೇಜ್ ಇರುವುದನ್ನು ನೋಡಿ ಸ್ವತಃ 'ಜಾಗ್ವಾರ್' ಚಿತ್ರತಂಡವೇ ಅಚ್ಚರಿ ವ್ಯಕ್ತಪಡಿಸಿದೆ.


'ಜಾಗ್ವಾರ್'ಗೆ ಬಿಗ್ ಓಪನ್ನಿಂಗ್?

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ 'ಜಾಗ್ವಾರ್' ಚಿತ್ರ ವಿಶ್ವದಾದ್ಯಂತ 16 ದೇಶಗಳಲ್ಲಿ, ಬರೋಬ್ಬರಿ 1000 ಚಿತ್ರಮಂದಿರಗಳಲ್ಲಿ ತೆರೆಗೆ ತರುವ ಬಗ್ಗೆ ಪ್ಲಾನ್ ಮಾಡಲಾಗುತ್ತಿದೆ.


'ಜಾಗ್ವಾರ್' ಕುರಿತು....

ಚೆನ್ನಾಂಬಿಕ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅನಿತಾ ಕುಮಾರಸ್ವಾಮಿ ನಿರ್ಮಿಸುತ್ತಿರುವ ಮಹದೇವ್ ಆಕ್ಷನ್ ಕಟ್ ಹೇಳಿರುವ 'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಕುಮಾರ್, ದೀಪ್ತಿ ಸತಿ, ರಮ್ಯಾ ಕೃಷ್ಣ, ಜಗಪತಿ ಬಾಬು, ಸಾಧು ಕೋಕಿಲ ಸೇರಿದಂತೆ ದೊಡ್ಡ ತಾರಾಬಳಗ ಇದೆ.


English summary
According to the latest buzz, Nikhil Kumar fans are bidding to buy First Ticket of 'Jaguar' Movie directed by Mahadev, Produced by Anita Kumaraswamy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada