For Quick Alerts
  ALLOW NOTIFICATIONS  
  For Daily Alerts

  ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ದೊಡ್ಡ ಸುದ್ದಿಗಳಿವು.!

  |
  ಗಾಂಧಿ ನಗರದಲ್ಲಿ ಕೇಳಿ ಬರುತ್ತಿರುವ ಸುದ್ದಿ ನಿಜಾನಾ? | FILMIBEAT KANNADA

  ಗಾಂಧಿನಗರ ಅಂದ್ರೆನೇ ಹಾಗೆ. ಅಧಿಕೃತವಾಗಿ ಘೋಷಣೆಯಾಗುವುದಕ್ಕೆ ಮುನ್ನವೇ ಅನೇಕ ವಿಷ್ಯಗಳು ಇಲ್ಲಿ ಚರ್ಚೆಯಾಗುತ್ತೆ. ಯಾರ ನಿರ್ದೇಶನದಲ್ಲಿ, ಯಾರು ಆಕ್ಟ್ ಮಾಡ್ತಾರೆ ಎಂಬ ಬ್ರೇಕಿಂಗ್ ಸುದ್ದಿಗಳು ಇಲ್ಲಿ ಲೀಕ್ ಆಗ್ತಾವೆ. ಆದ್ರೆ, ಅದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಘೋಷಣೆ ಮಾಡಿದ ಬಳಿಕವೇ ಗೊತ್ತಾಗುತ್ತೆ.

  ಇದೀಗ, ಕನ್ನಡ ಚಿತ್ರರಂಗದಲ್ಲಿ ಎರಡು ದೊಡ್ಡ ಸುದ್ದಿಗಳು ಸಂಚಲನ ಸೃಷ್ಟಿಸುತ್ತಿದೆ. ಒಂದು ಕಿಚ್ಚ ಸುದೀಪ್ ಅವರ ಬಗ್ಗೆ ಹಾಗೂ ಇನ್ನೊಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಕುರಿತು. ಈ ಎರಡು ಸುದ್ದಿಗಳು ಸಿನಿಪ್ರೇಮಿಗಳಿಗೆ ಹಬ್ಬದ ವಿಷ್ಯವೇ.

  I Love You Review : ಒಂದೇ ಒಂದು ಸಂದೇಶ, ಬಾಕಿ ಏನಿಲ್ಲ ವಿಶೇಷ

  ಪೈಲ್ವಾನ್, ಕೋಟಿಗೊಬ್ಬ 3 ಮುಗಿಸಿ, ತೆಲುಗಿನ ಸೈರಾ ಸಿನಿಮಾ ಮುಗಿಸಿ, ಹಿಂದಿಯಲ್ಲಿ ದಬಾಂಗ್ 3 ಚಿತ್ರವನ್ನ ಕೂಡ ಸುದೀಪ್ ಮುಗಿಸಿದ್ದಾರೆ. ಈ ಕಡೆ ಉಪೇಂದ್ರ ಐ ಲವ್ ಯೂ ಚಿತ್ರವನ್ನ ಮುಗಿಸಿ ತಮ್ಮದೇ ನಿರ್ದೇಶನ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ಹಾಗಿದ್ರೆ, ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ಆ ದೊಡ್ಡ ಸುದ್ದಿಗಳು ಯಾವುದು? ಮುಂದೆ ಓದಿ.....

  ಸೂರಿ ಜೊತೆ ಸುದೀಪ್ ಸಿನಿಮಾ

  ಸೂರಿ ಜೊತೆ ಸುದೀಪ್ ಸಿನಿಮಾ

  ದುನಿಯಾ ಸೂರಿ ಮತ್ತು ಕಿಚ್ಚ ಸುದೀಪ್ ಜೋಡಿಯಲ್ಲಿ ಸಿನಿಮಾ ಬರಬೇಕು ಎಂದು ಕಾಯುತ್ತಿರುವ ಅಭಿಮಾನಿ ಬಳಗವಿದೆ. ಆದರೆ, ಈ ಬಗ್ಗೆ ಯಾವುದೇ ಮುನ್ಸೂಚನೆ ಸಿಕ್ಕಿರಲಿಲ್ಲ. ಇದೀಗ, ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಸುದೀಪ್ ಚಿತ್ರವನ್ನ ಸೂರಿ ನಿರ್ದೇಶನ ಮಾಡಲಿದ್ದಾರಂತೆ.

  ಕುರುಕ್ಷೇತ್ರ ಮಾತ್ರವಲ್ಲ ಪೈಲ್ವಾನ್ ಗೆ ಎದುರಾಗಲಿವೆ ಮೂರು ದೊಡ್ಡ ಚಿತ್ರಗಳು.!

  ಅತಿ ದೊಡ್ಡ ಬಜೆಟ್ ಅಂತೆ.!

  ಅತಿ ದೊಡ್ಡ ಬಜೆಟ್ ಅಂತೆ.!

  ಸೂರಿ ಹಾಗೂ ಸುದೀಪ್ ಜೋಡಿಯಲ್ಲಿ ಬರಲಿರುವ ಈ ಚಿತ್ರ ಅತಿ ದೊಡ್ಡ ಬಜೆಟ್ ಹೊಂದಿರಲಿದೆ ಎನ್ನಲಾಗುತ್ತಿದೆ. ಕೆಜಿಎಫ್ ಚಿತ್ರದ ನಂತರ ಕನ್ನಡ ಇಂಡಸ್ಟ್ರಿಯಲ್ಲಿ ಸೆಟ್ಟೇರುತ್ತಿರುವ ಬಿಗ್ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಕೆಪಿ ಶ್ರೀಕಾಂತ್ ಬಂಡವಾಳ ಹಾಕಲಿದ್ದಾರೆ ಎಂಬ ಸುದ್ದಿಯೂ ಇದೆ.

  ಐ ಲವ್ ಯೂ ರೀಮೇಕ್.!

  ಐ ಲವ್ ಯೂ ರೀಮೇಕ್.!

  ಕಳೆದ ವಾರವಷ್ಟೇ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಿದ್ದ ಐ ಲವ್ ಯೂ ಸಿನಿಮಾ ಈಗ ತಮಿಳಿನಲ್ಲಿ ರೀಮೇಕ್ ಆಗಲಿದೆ ಎಂಬ ಸುದ್ದಿಯೊಂದು ಚರ್ಚೆಯಾಗುತ್ತಿದೆ. ಉಪೇಂದ್ರ ನಟನೆ ಹಾಗೂ ಆರ್ ಚಂದ್ರು ನಿರ್ದೇಶನದಲ್ಲಿ ರಿಲೀಸ್ ಆಗಿದ್ದ ಈ ಚಿತ್ರಕ್ಕೆ ಎರಡು ಭಾಷೆಯಲ್ಲಿ ಬಿಗ್ ಒಪನಿಂಗ್ ಸಿಕ್ಕಿತ್ತು.

  ಐ ಲವ್ ಯೂ ಎಂದ ಉಪ್ಪಿ ಪಾಸ್ ಆದ್ರಾ? ಕನ್ನಡ ಪತ್ರಿಕೆಗಳ ವಿಮರ್ಶೆ ಹೇಗಿದೆ?

  ಕಾರ್ತಿ ಅಥವಾ ವಿಜಯ್ ಸೇತುಪತಿ.!

  ಕಾರ್ತಿ ಅಥವಾ ವಿಜಯ್ ಸೇತುಪತಿ.!

  ಐ ಲವ್ ಯೂ ತಮಿಳಿನಲ್ಲಿ ರೀಮೇಕ್ ಆಗುವ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ವಿಜಯ್ ಸೇತುಪತಿ ಅಥವಾ ಕಾರ್ತಿ ಇಬ್ಬರಲ್ಲಿ ಒಬ್ಬರು ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಎರಡು ಸುದ್ದಿಗಳ ಬಗ್ಗೆ ಯಾವುದೇ ರೀತಿಯ ಪಕ್ಕಾಅ ಮಾಹಿತಿ ಸಿಕ್ಕಿಲ್ಲ. ಆದರೆ, ಇಂಡಸ್ಟ್ರಿಯಲ್ಲಿ ಒಂದು ಸುತ್ತು ಬಂದಾಗ ಇಂತಹ ಮಾತುಗಳು ಕೇಳಿಸಿದೆ ಅಷ್ಟೇ.

  ಐ ಲವ್ ಯೂ ಚಿತ್ರ ನೋಡಿ ರಚಿತಾ ರಾಮ್ ತಾಯಿ ಹೇಳಿದ್ದೇನು?

  English summary
  According to Gandhinagar source, Upendra's I Love You movie set to remake in tamil. another side duniya suri planning to do movie with sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X