»   » ಬಿಗ್ ಮನೆಯಿಂದ ಕಿಟ್ಟಿ ಮತ್ತು ಗೌತಮಿ ಔಟ್ ಆದ್ರಾ?

ಬಿಗ್ ಮನೆಯಿಂದ ಕಿಟ್ಟಿ ಮತ್ತು ಗೌತಮಿ ಔಟ್ ಆದ್ರಾ?

By: ಸೋನು ಗೌಡ
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಯಾರ ಉಸಾಬರಿಗೂ ಹೋಗದೇ ತನ್ನಷ್ಟಕ್ಕೆ ತಾನಿದ್ದ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ಮತ್ತು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಧಾರಾವಾಹಿ ನಟಿ ಗೌತಮಿ ಗೌಡ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಗೇಟ್ ಪಾಸ್ ಪಡೆದುಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.

ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಬಿ.ಜಯಶ್ರೀ ಅವರ ಮಗಳು ನಟಿ ಸುಷ್ಮಾ ವೀರ್ ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದರು. ಮಾತ್ರವಲ್ಲದೇ ಈ ವಾರ ಮನೆಯಲ್ಲಿದ್ದ ಎಲ್ಲಾ ಸದಸ್ಯರು ನೇರವಾಗಿ ನಾಮಿನೇಟ್ ಆಗಿದ್ದರು.['ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಸುಷ್ಮಾ ವೀರ್!]

Bigg Boss Kannada 3: Actress Gowthami and Tsunami Kitty eliminated

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿದ್ದ ಸೀರಿಯಲ್ ನಟಿ ಗೌತಮಿ ಅವರು ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಭಾರಿ ಸುದ್ಧಿ ಮಾಡುತ್ತಿದ್ದರು. ಜೊತೆಗೆ ಅಯ್ಯಪ್ಪ ಮತ್ತು ಪೂಜಾ ಅವರ ನಡುವೆ ಗೌತಮಿ ಮಧ್ಯ ಪ್ರವೇಶಿಸಿ ನಾಗವಲ್ಲಿಯಾಗಿ ಕಾಟ ಬೇರೆ ಕೊಡುತ್ತಿದ್ದರು.[ಯಾರೂ ಉಸಿರೆತ್ತಂಗಿಲ್ಲ ಈ ವಾರ ಸ್ಪರ್ಧಿಗಳೆಲ್ಲಾ ನಾಮಿನೇಟೆಡ್]

ಒಟ್ನಲ್ಲಿ ಕೃತಿಕಾ ನಂತರ ಡವ್ ರಾಣಿ ಅಂತ ಹೆಚ್ಚು ಖ್ಯಾತಿ ಗಳಿಸಿದ ನಟಿ ಗೌತಮಿ ಅವರು ಈ ವಾರ ಮನೆಯಿಂದ ಹೊರ ಬಿದ್ದಿದ್ದಾರೆ. ಅಂತೂ ಪೂಜಾ ಗಾಂಧಿ ನಿರಾಳವಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

English summary
Actress Gowthami and Tsunami Kitty is eliminated from Bigg Boss Kannada 3 this week.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada