»   » 'ಬಿಗ್ ಬಾಸ್' ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಪುನೀತ್ ರಾಜ್ ಕುಮಾರ್?

'ಬಿಗ್ ಬಾಸ್' ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಪುನೀತ್ ರಾಜ್ ಕುಮಾರ್?

Posted By:
Subscribe to Filmibeat Kannada

ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ 'ರಣವಿಕ್ರಮ' ಚಿತ್ರದ ಇಂಟರ್ವಲ್ ನಲ್ಲಿ 'ರನ್ನ' ಟ್ರೈಲರ್ ಹಾಕಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದು ಮಾಡಿದ ದಾಂಧಲೆ ನೆನಪಿದ್ಯಾ?

ಯಾರು ಏನೇ ಮಾಡಿದ್ರೂ, ಎಷ್ಟೇ ಗಾಸಿಪ್ ಸುದ್ದಿ ಹಬ್ಬಿಸಿದರೂ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಮಾತ್ರ ಬೆಸ್ಟ್ ಫ್ರೆಂಡ್ಸ್. ಇಂತಹ ಸ್ನೇಹಿತರನ್ನ ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಪ್ರಯತ್ನ ಮಾಡ್ತಿದೆ ಕಲರ್ಸ್ ಕನ್ನಡ ವಾಹಿನಿ.

Bigg Boss Kannada 3 ; Puneeth Rajkumar as special guest?

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ 'ಬಿಗ್ ಬಾಸ್-3' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ದಿನ ಬಾಕಿ. ಈ ಬಾರಿ 'ಬಿಗ್ ಬಾಸ್' ಗೆಲುವಿನ ಪಟ್ಟ ಪಡೆಯುವವರು ಯಾರು ಅನ್ನೋ ಕುತೂಹಲ ಎಲ್ಲರಿಗೂ ಇದೆ ಬಿಡಿ. [ಕನ್ನಡ 'ಬಿಗ್ ಬಾಸ್' ಸೀಸನ್ 3 ಗೆಲುವಿನ ಪಟ್ಟ ಯಾರಿಗೆ?]

ಹೀಗಿರುವಾಗಲೇ, 'ಬಿಗ್ ಬಾಸ್' ಫೈನಲ್ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಷಯ ಹೇಳ್ತೀವಿ ಕೇಳಿ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುವ 'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚನ ಜೊತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಕೈ ಜೋಡಿಸಲಿದ್ದಾರೆ!

ಹೌದು, ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, 'ಬಿಗ್ ಬಾಸ್' ಫಿನಾಲೆ ಎಪಿಸೋಡ್ ನಲ್ಲಿ ಪುನೀತ್ ರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ['ಬಿಗ್ ಬಾಸ್' ಬದಲು 'ಡಿ'ಬಾಸ್ ಗೆ ಜೈ ಎಂದ ಫಿಲ್ಮಿಬೀಟ್ ಓದುಗರು]

ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅನಂತ್ ನಾಗ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಘಟಾನುಘಟಿಗಳು 'ಬಿಗ್ ಬಾಸ್' ವೇದಿಕೆ ಮೇಲೆ ಸುದೀಪ್ ಜೊತೆ ಸಂವಾದ ನಡೆಸಿದ್ದರು.

ಇದೀಗ ಗ್ರ್ಯಾಂಡ್ ಫಿನಾಲೆ ಪ್ರಯುಕ್ತ ಪುನೀತ್ ರಾಜ್ ಕುಮಾರ್ ರವರಿಗೆ ಆಹ್ವಾನ ನೀಡಲಾಗಿದೆ. ಒಂದ್ವೇಳೆ ಅಪ್ಪು ಒಪ್ಪಿದರೆ, ನಾಳೆ ಕಾರ್ಯಕ್ರಮದ ಚಿತ್ರೀಕರಣ ನಡೆಯಲಿದೆ.

English summary
According to the grapevine, Kannada Actor Puneeth Rajkumar is approached to be the special guest for Bigg Boss Kannada-3 grand finale episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada