»   » ಓಹೋ....'ಬಿಗ್ ಬಾಸ್ ಕನ್ನಡ-4' ನಲ್ಲಿ 'ಇವರೆಲ್ಲಾ' ಇರ್ತಾರಂತೆ ಸ್ವಾಮಿ.!

ಓಹೋ....'ಬಿಗ್ ಬಾಸ್ ಕನ್ನಡ-4' ನಲ್ಲಿ 'ಇವರೆಲ್ಲಾ' ಇರ್ತಾರಂತೆ ಸ್ವಾಮಿ.!

Posted By:
Subscribe to Filmibeat Kannada

ಕನ್ನಡ ಕಿರುತೆರೆ ಇತಿಹಾಸದಲ್ಲಿ 'ಬಿಗ್ ಬಾಸ್' ರಿಯಾಲಿಟಿ ಶೋನ ಮೂರು ಆವೃತ್ತಿಗಳು ಸೂಪರ್ ಹಿಟ್ ಆಗಿವೆ. ಇದೀಗ ಕಿಚ್ಚ ಸುದೀಪ್ ನಿರೂಪಣೆಯಲ್ಲೇ ನಾಲ್ಕನೇ ಸೀಸನ್ ಶುರು ಆಗುವುದಕ್ಕೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ.

ಎಲ್ಲವೂ ಕಲರ್ಸ್ ವಾಹಿನಿ ಪ್ಲಾನ್ ಪ್ರಕಾರ ನಡೆದರೆ ಅಕ್ಟೋಬರ್ ನಲ್ಲಿ 'ಬಿಗ್ ಬಾಸ್ ಕನ್ನಡ-4' ಪ್ರಸಾರವಾಗಲಿದೆ. ಈಗಾಗಲೇ, 'ಬಿಗ್ ಬಾಸ್-4'ನಲ್ಲಿ ಸ್ಪರ್ಧಿಸುವ ಕನ್ಟೆಸ್ಟೆಂಟ್ಸ್ ಬಗ್ಗೆ ಊಹಾಪೋಹ ಶುರುವಾಗಿದೆ.

ಆದ್ರೆ, ಕಲರ್ಸ್ ವಾಹಿನಿಯ ಲೆಕ್ಕಾಚಾರವೇ ಬೇರೆ. 'ಇವರೆಲ್ಲಾ' ಈ ಬಾರಿಯ 'ಬಿಗ್ ಬಾಸ್'ನಲ್ಲಿ ಭಾಗವಹಿಸಿದ್ರೆ ಹೇಗೆ ಎಂಬ ಐಡಿಯಾದೊಂದಿಗೆ ಕಲರ್ಸ್ ವಾಹಿನಿ ಪ್ರಥಮ ಲಿಸ್ಟ್ ತಯಾರು ಮಾಡಿದೆ. ಮೂಲಗಳ ಪ್ರಕಾರ, ಕಲರ್ಸ್ ವಾಹಿನಿ ರೆಡಿ ಮಾಡಿರುವ ಫಸ್ಟ್ ಲಿಸ್ಟ್ ನಲ್ಲಿ 'ಇವರು'ಗಳ ಹೆಸರಿದ್ಯಂತೆ.....

ಗಡ್ಡಪ್ಪ

ರಾಷ್ಟ್ರ ಪ್ರಶಸ್ತಿ ಪಡೆದ 'ತಿಥಿ' ಚಿತ್ರದಲ್ಲಿ ಗಡ್ಡಪ್ಪ ಆಗಿ ಅಭಿನಯಿಸಿದ್ದ ಮಂಡ್ಯ ಮೂಲದ ಚನ್ನೇಗೌಡರನ್ನ 'ಬಿಗ್ ಬಾಸ್' ಮನೆಗೆ ಕರೆತರುವ ಬಗ್ಗೆ ಕಲರ್ಸ್ ವಾಹಿನಿಯವ್ರು ಯೋಚಿಸಿದ್ದಾರಂತೆ.['ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಲಿಸ್ಟ್ ನಲ್ಲಿ 'ಇವರ' ಹೆಸರಿದ್ಯಂತೆ.!]

ಸುಧಾರಾಣಿ

ನಿಮಗೆ ಅಚ್ಚರಿ ಅನಿಸ್ಬಹುದು. ಆದರೂ ಕಲರ್ಸ್ ವಾಹಿನಿ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, 'ಬಿಗ್ ಬಾಸ್ ಕನ್ನಡ - 4' ನಲ್ಲಿ ಸುಧಾರಾಣಿ ಭಾಗವಹಿಸಿದ್ರೆ ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. [ಕೆಲವೇ ದಿನಗಳಲ್ಲಿ 'ಬಿಗ್ ಬಾಸ್ ಕನ್ನಡ-4'! ಹೌದು ಸ್ವಾಮಿ!]

ರಾಗಿಣಿ ದ್ವಿವೇದಿ

ಕಳೆದ ಮೂರೂ ಸೀಸನ್ ಗಳ ಸ್ಪರ್ಧಿಗಳ ಲಿಸ್ಟ್ ನಲ್ಲಿ ನಟಿ ರಾಗಿಣಿ ದ್ವಿವೇದಿ ಹೆಸರು ಕೇಳಿ ಬಂದಿತ್ತು. ಈ ಬಾರಿ ಕೂಡ ಕೇಳಿ ಬರುತ್ತಿದೆ. 'ಬಿಗ್' ಮನೆಗೆ ಕಾಲಿಡಲು ತುಪ್ಪದ ಬೆಡಗಿ ಮನಸ್ಸು ಮಾಡಬೇಕಷ್ಟೆ.[ತೆರೆ ಮರೆಯಲ್ಲಿ 'ಬಿಗ್ ಬಾಸ್' ಕನ್ನಡ ಸೀಸನ್ 4 ಕೆಲಸ ಶುರು!]

ಕೋಮಲ್

'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಲಿಸ್ಟ್ ನಲ್ಲಿ ನವರಸ ನಾಯಕ ಜಗ್ಗೇಶ್ ಸಹೋದರ ಕೋಮಲ್ ಹೆಸರು ಕೂಡ ಇದೆ. ಅವರು ಒಪ್ಪಿಕೊಂಡು 'ಬಿಗ್' ಮನೆಗೆ ಎಂಟ್ರಿಕೊಟ್ಟರೆ ನಗೆ ಸುನಾಮಿ ಗ್ಯಾರೆಂಟಿ.

ಲೂಸ್ ಮಾದ ಯೋಗಿ

ಈಗಾಗಲೇ 'ಬಿಗ್ ಬಾಸ್-1'ನಲ್ಲಿ ಅತಿಥಿ ಆಗಿ ಲೂಸ್ ಮಾದ ಯೋಗೀಶ್ ಭಾಗವಹಿಸಿದ್ದರು. ಈಗ ಪೂರ್ಣ ಪ್ರಮಾಣದ ಸ್ಪರ್ಧಿಯಾಗಿ ಯೋಗಿ ರವರನ್ನ ಕರೆ ತರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅನು ಪ್ರಭಾಕರ್

'ಬಿಗ್ ಬಾಸ್ ಕನ್ನಡ-4' ಲಿಸ್ಟ್ ನಲ್ಲಿ ನಟಿ ಅನು ಪ್ರಭಾಕರ್ ಹೆಸರೂ ಕೇಳಿಬರುತ್ತಿದೆ. ಇತ್ತೀಚೆಗಷ್ಟೆ ನೂತನ ದಾಂಪತ್ಯಕ್ಕೆ ಕಾಲಿಟ್ಟಿದ್ದ ಅನು ಪ್ರಭಾಕರ್ 'ಬಿಗ್ ಬಾಸ್' ಮನೆಗೆ ಬರ್ತಾರಾ ಎಂಬುದೇ ಸದ್ಯದ ಪ್ರಶ್ನೆ.

ತರುಣ್

ಗಾಂಧಿನಗರದಿಂದ ಆಲ್ಮೋಸ್ಟ್ ನಾಪತ್ತೆ ಆಗಿರುವ ತರುಣ್ 'ಬಿಗ್ ಬಾಸ್ ಕನ್ನಡ-4'ನಲ್ಲಿ ಭಾಗವಹಿಸುವ ಚಾನ್ಸಸ್ ಇದೆ ಎನ್ನುತ್ತಿವೆ ಕಲರ್ಸ್ ಕನ್ನಡ ವಾಹಿನಿ ಮೂಲಗಳು.

ಪ್ರಿಯಾ ಹಾಸನ್

ಸ್ಯಾಂಡಲ್ ವುಡ್ ನಲ್ಲಿ 'ಜಂಬದ ಹುಡುಗಿ' ಅಂತಲೇ ಜನಪ್ರಿಯರಾಗಿರುವ ಪ್ರಿಯಾ ಹಾಸನ್ ಕೂಡ 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹೊಸ ಜೀವನಕ್ಕೆ ಈಗಷ್ಟೇ ಕಾಲಿಟ್ಟಿರುವ ಪ್ರಿಯಾ ಹಾಸನ್ 'ಬಿಗ್ ಬಾಸ್'ಗೆ ಹೋಗಲು ಗ್ರೀನ್ ಸಿಗ್ನಲ್ ನೀಡ್ತಾರಾ ಎಂಬುದನ್ನ ಕಾದು ನೋಡ್ಬೇಕು.

ತಾರಾ

ಸಿನಿಮಾ ಜೊತೆಗೆ ರಾಜಕೀಯ ರಂಗದಲ್ಲೂ ಬಿಜಿಯಾಗಿರುವ ತಾರಾ ಅನೂರಾಧಾ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಳ್ಳುತ್ತಾರಾ? ಗೊತ್ತಿಲ್ಲ. ಆದ್ರೆ, ಅವರನ್ನ ಪರಿಗಣಿಸಿರುವುದು ಮಾತ್ರ ಸುಳ್ಳಲ್ಲ.

ನವೀನ್ ಕೃಷ್ಣ

'ಧಿಮಾಕು' ಖ್ಯಾತಿ ನವೀನ್ ಕೃಷ್ಣ ಹೆಸರು ಎಲ್ಲರ ನಾಲಿಗೆ ಮೇಲೂ ನುಲಿದಾಡುತ್ತಿದೆ. ಕನ್ ಫರ್ಮ್ ಆಗಬೇಕು ಅಷ್ಟೆ.

ವಿವಾದ ಕಮ್ಮಿ

ಕಾಂಟ್ರವರ್ಸಿ ಮಾಡಿಕೊಂಡವರಿಗೆ ಮಣೆ ಹಾಕುತ್ತಿದ್ದ 'ಬಿಗ್ ಬಾಸ್' ಕಾರ್ಯಕ್ರಮದ ಆಯೋಜಕರಿಗೆ ಈ ಬಾರಿ ಅಂತಹ ವ್ಯಕ್ತಿಗಳು ಯಾರೂ ಸಿಕ್ಕಿದಂತಿಲ್ಲ.

ನಿಮ್ಮ ಪ್ರಕಾರ ಯಾರು ಇರಬೇಕು.?

'ಬಿಗ್ ಬಾಸ್ ಕನ್ನಡ-4' ಬೊಂಬಾಟ್ ಆಗಿರಬೇಕು ಅಂದ್ರೆ 'ಬಿಗ್' ಮನೆಯಲ್ಲಿ ಯಾರೆಲ್ಲಾ ಇರಬೇಕು ಅಂತ ನೀವು ಬಯಸುತ್ತೀರಾ? ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೇ ನಿಮ್ಮ ಚಾಯ್ಸ್ ಏನು ಅಂತ ನಮಗೆ ತಿಳಿಸಿ...ಯಾರಿಗೊತ್ತು ನೀವು ಇಷ್ಟ ಪಡುವವರೇ ನಾಳೆ ಸೆಲೆಕ್ಟ್ ಆಗ್ಹೋದ್ರೆ...

English summary
Bigg Boss Kannada 4 will be aired in Colors Kannada Channel and as usual Kiccha Sudeep will be the host. According to the latest buzz, Gaddappa of 'Thithi' movie fame, Komal Kumar, Tarun, Yogi, Actress Ragini Dwivedi, Sudharani, Tara, Priya Hassan, Anu Prabhakar are considered in the contestants list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada