»   » 'ಬಿಗ್ ಬಾಸ್' ಮನೆಯಿಂದ ಸುದ್ದಿ ನಿರೂಪಕಿ ಶೀತಲ್ ಶೆಟ್ಟಿ ಔಟ್.?

'ಬಿಗ್ ಬಾಸ್' ಮನೆಯಿಂದ ಸುದ್ದಿ ನಿರೂಪಕಿ ಶೀತಲ್ ಶೆಟ್ಟಿ ಔಟ್.?

By: BK
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ನಾಲ್ಕನೇ ವಾರ ಸುದ್ದಿ ನಿರೂಪಕಿ ಶೀತಲ್ ಶೆಟ್ಟಿ 'ಬಿಗ್ ಬಾಸ್' ಮನೆಯಿಂದ ಔಟ್ ಆಗಿದ್ದಾರಂತೆ.! ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಲೀಕ್ ಆಗಿರುವ ಸುದ್ದಿ ಪ್ರಕಾರ, ಈ ವಾರ 'ದೊಡ್ಮನೆ'ಯಿಂದ ಶೀತಲ್ ಶೆಟ್ಟಿ ನಿರ್ಗಮಿಸಿದ್ದಾರೆ.

Bigg Boss Kannada 4: Sheetal Shetty eliminated: Sources

ಕೆಲವೇ ನಿಮಿಷಗಳ ಹಿಂದೆಯಷ್ಟೆ 'ವಾರದ ಕಥೇ ಕಿಚ್ಚನ ಜೊತೆ' ಕಾರ್ಯಕ್ರಮದ ಶೂಟಿಂಗ್ ಮುಗಿಯಿತು. ಅದರಲ್ಲಿ ವಾರದ ಕಿಚ್ಚಿನ ಕಥೆಯನ್ನಿಟ್ಟುಕೊಂಡು ಕಿಚ್ಚ ಸುದೀಪ್ ಪಂಚಾಯತಿ ಮಾಡಿದ ಬಳಿಕ ಕನ್ನಡ ಸುದ್ದಿವಾಹಿನಿಗಳಲ್ಲಿ ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿಯವರನ್ನ ಹೊರಗಡೆ ಕರೆದಿದ್ದಾರೆ ಎನ್ನಲಾಗಿದೆ.['ಬಿಗ್ ಬಾಸ್ ಕನ್ನಡ-4' : ಈ ವಾರ ಗೇಟ್ ಪಾಸ್ ಯಾರಿಗೆ?]

Bigg Boss Kannada 4: Sheetal Shetty eliminated: Sources

ನಾಲ್ಕು ವಾರಗಳಲ್ಲಿ ಎರಡನೇ ಬಾರಿ ನಾಮಿನೇಟ್ ಆಗಿದ್ದ ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ವಿರುದ್ಧ, ನಟ ಮೋಹನ್, ಸಂಜನಾ ಮತ್ತು ಭುವನ್ ಪೊನ್ನಣ್ಣ ವೋಟ್ ಮಾಡಿದ್ದರು.[ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ & ಗ್ಯಾಂಗ್.!]

ಈ ವಾರ ಯಾರನ್ನ ಹೊರಗೆ ಕಳುಹಿಸಿಬೇಕು ಎಂಬ ಕಿಚ್ಚನ ಪಂಚಾಯಿತಿಯಲ್ಲಿ ಶಾಲಿನಿ ಹಾಗೂ ಶೀತಲ್ ಶೆಟ್ಟಿ ಮಧ್ಯೆ ಬಿಗ್ ಕಾಂಪಿಟೇಷನ್ ಇತ್ತಂತೆ. ಆದ್ರೆ, ಕೊನೆ ಘಳಿಗೆಯಲ್ಲಿ ಶಾಲಿನಿಯವರು ಸೇಫ್ ಆಗಿದ್ದಾರೆ ಎನ್ನಲಾಗಿದೆ.

Bigg Boss Kannada 4: Sheetal Shetty eliminated: Sources

ಈ ವಾರ ನಾಮಿನೇಟ್ ಆಗಿದ್ದವರು ಯಾರ್ಯಾರು? ಶೀತಲ್ ಶೆಟ್ಟಿ, ಸಂಜನಾ, ರೇಖಾ, ಶಾಲಿನಿ ಮತ್ತು ಪ್ರಥಮ್ ಈ ವಾರ ನಾಮಿನೇಟ್ ಆಗಿದ್ದರು. ಇತರರಿಗಿಂತ ಅತಿ ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ ಶೀತಲ್ ಶೆಟ್ಟಿ ಔಟ್ ಆಗಿದ್ದಾರೆ ಅಂತ ಹೇಳಲಾಗಿದೆ. ಅಧಿಕೃತ ಘೋಷಣೆ ಇನ್ನೂ ಆಗಿಲ್ಲ.

English summary
Bigg Boss Kannada 4, Week 4 : According to Colors Kannada Sources, News Anchor Sheetal Shetty is eliminated from Bigg Boss Kannada 4 this Week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada