For Quick Alerts
  ALLOW NOTIFICATIONS  
  For Daily Alerts

  ಸಪ್ತ ಸಿನಿಮಾ ಸುರಸುಂದರಿಯರ ಖಾಸ್ ಬಾತ್!

  By ರವಿಕಿಶೋರ್
  |

  ಸದ್ಯಕ್ಕೆ ಚಲಾವಣೆಯಲ್ಲಿರುವ ಸಪ್ತ ಸಿನಿಮಾ ಸುರಸುಂದರಿಯರ ಖಾಸಗಿ ಸಮಾಚಾರವಿದು! ಇದು ಒಂಥರಾ ಅವರ ಬೆಡ್ ರೂಂಗೆ ಸಂಬಂಧಿಸಿದ ಸುದ್ದಿಯೇ ಆದರೂ ಮಂಚದ ತನಕ ಹೋಗುವುದಿಲ್ಲ. ಅಲ್ಲೇ ಮಂಚದ ಅಕ್ಕಪಕ್ಕದಲ್ಲೆಲ್ಲೋ ಇರುವ ಕಪಾಟಿಗೆ ಸಂಬಂಧಿಸಿದ 'ಕಾಸು' ಬಾತ್ ಇದು.

  ಇಷ್ಟಕ್ಕೂ ಸಿನಿಮಾ ತಾರೆಗಳ ಕಪಾಟಿನಲ್ಲಿ ಏನಿರುತ್ತದೆ? ಯಾವುದೋ ಚಿತ್ರಕ್ಕೆ ನೀಡಿದ ಕಾಲ್ ಶೀಟ್ ವಿವರಗಳು, ಒಂದಷ್ಟು ಚೆಕ್ ಗಳು, ಅಡ್ವಾನ್ಸ್ ಹಣ...ಹೀಗೆ ಏನೇನೋ ಇರಬಹುದು. ಈಗ ನಾವು ಕೇವಲ ಅವರ ಕಾಲ್ ಶೀಟ್ ಗೆ ಸಂಬಂಧಿಸಿದಂತೆ ಮಾತ್ರ ಗಮನಹರಿಸೋಣ.

  ಎಲ್ಲರಿಗಿಂತ ಅತ್ಯಧಿಕ ದುಡ್ಡು ಎಣಿಸುವ ಕರೀನಾ

  ಎಲ್ಲರಿಗಿಂತ ಅತ್ಯಧಿಕ ದುಡ್ಡು ಎಣಿಸುವ ಕರೀನಾ

  ಕರೀನಾ ಕಪೂರ್ ಸದ್ಯಕ್ಕೆ ಎಲ್ಲರನ್ನೂ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೆ ಜಿಗಿಯಲು ತೀವ್ರ ಪೈಪೋಟಿ ನಡೆಸಿದ್ದಾರೆ. ಈ ಮುಂಚೆ ರು.5 ಕೋಟಿ ಸಂಭಾವನೆ ಪಡೆಯುತ್ತಿದ್ದ ಕರೀನಾ ಈಗ ಏಕಾಏಕಿ ರು.2 ಕೋಟಿ ಏರಿಸಿಕೊಂಡಿದ್ದಾರೆ. ಈಗವರ ಸಂಭಾವನೆ ರು.7 ಕೋಟಿ ಎನ್ನುತ್ತವೆ ಬಾಲಿವುಡ್ ಮೂಲಗಳು.

  ಕರೀನಾ ಜೊತೆ ಕತ್ರಿನಾ ಕೈಫ್ ಸೆಣೆಸಾಟ

  ಕರೀನಾ ಜೊತೆ ಕತ್ರಿನಾ ಕೈಫ್ ಸೆಣೆಸಾಟ

  ಕರೀನಾ ಅವರಷ್ಟೇ ಸಂಭಾವನೆ ಪಡೆಯುವ ಮತ್ತೊಬ್ಬ ತಾರೆ ಕತ್ರಿನಾ ಕೈಫ್. ಸದ್ಯಕ್ಕೆ ನಂಬರ್ ಒನ್ ಪಟ್ಟಕ್ಕಾಗಿ ಇವರಿಬ್ಬರ ನಡುವೆ ಕುತ್ತಿಗೆ ಮಟ್ಟದ ಸ್ಪರ್ಧೆ ಇದೆ. ಸೈಫ್ ಕೈಹಿಡಿದ ಮೇಲೆ ಕರೀನಾ ಮಾರ್ಕೆಟ್ ವ್ಯಾಲ್ಯೂ ಕೊಂಚ ಇಳಿದಿದೆ. ಗೆಲುವು ಕತ್ರಿನಾ ಕೈಫ್ ಗೆ ಗ್ಯಾರಂಟಿ ಎನ್ನಲಾಗಿದೆ.

  ಏಕಾಏಕಿ ಮೇಲೇರಿದ ವಿದ್ಯಾ ಬಾಲನ್

  ಏಕಾಏಕಿ ಮೇಲೇರಿದ ವಿದ್ಯಾ ಬಾಲನ್

  ದಕ್ಷಿಣ ಚಿತ್ರರಂಗದಲ್ಲೇ ಇದ್ದಿದ್ದರೆ ವಿದ್ಯಾ ಬಾಲನ್ ಈ ಮಟ್ಟಕ್ಕೆ ಏರುತ್ತಿರಲಿಲ್ಲವೇನೋ. ಅದೃಷ್ಟ ಎನ್ನುವುದು ಎಲ್ಲಿ ಬಾಗಿಲು ತೆರೆಯುತ್ತದೋ ಯಾವೋನಿಗ್ ಗೊತ್ತು. ಆರಂಭದಲ್ಲಿ ರು.1.5 ಕೋಟಿ ಪಡೆಯುತ್ತಿದ್ದ ವಿದ್ಯಾ ಬಾಲನ್ ಈಗ ರು.5.2 ಕೋಟಿ ಸಂಭಾವನೆ ಎಣಿಸುತ್ತಾರೆ.

  ದೀಪಿಕಾ ಪಡುಕೋಣೆ ರೇಟು ಕೇಳೋಹಂಗಿಲ್ಲ

  ದೀಪಿಕಾ ಪಡುಕೋಣೆ ರೇಟು ಕೇಳೋಹಂಗಿಲ್ಲ

  ಬಾಲಿವುಡ್ ನಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ದೀಪಿಕಾ ಪಡುಕೋಣೆ ಸಂಭಾವನೆಯಲ್ಲೂ ಭಾರಿ ಏರಿಕೆಯಾಗಿದೆ. ಮೊದಲೆಲ್ಲಾ ರು.3 ಕೋಟಿಗೆ ತೃಪ್ತಿ ಪಡುತ್ತಿದ್ದ ದೀಪಿಕಾ ಈಗ ರು. 4.5 ಕೋಟಿ ಕೊಟ್ಟರೇನೆ ಮುಂದಿನ ಮಾತುಕತೆ.

  ಪ್ರಿಯಾಂಕಾ ಚೋಪ್ರಾ ಯಾರಿಗೂ ಕಮ್ಮಿಯಿಲ್ಲ

  ಪ್ರಿಯಾಂಕಾ ಚೋಪ್ರಾ ಯಾರಿಗೂ ಕಮ್ಮಿಯಿಲ್ಲ

  ಅಭಿನಯಕ್ಕೆ ಸವಾಲೊಡ್ಡುವ 'ಫ್ಯಾಷನ್'ನಂತಹ ಚಿತ್ರಗಳಲ್ಲಿ ಅಭಿನಯಿಸುವುದರ ಜೊತೆ ಬರ್ಫಿ, ಬರ್ಸಾತ್, ಕ್ರಿಷ್ ನಂತಹ ಲವ್ ಸಬ್ಜೆಕ್ಟ್ ಚಿತ್ರಗಳಲ್ಲೂ ಗುರುತಿಸಿಕೊಂಡರು. ಮೊದಲು ರು.2.5 ಕೋಟಿ ಎಣಿಸುತ್ತಿದ್ದ ಪ್ರಿಯಾಂಕಾ ಈಗ ರು.4.5 ಕೋಟಿ ಎನ್ನುತ್ತಿದ್ದಾರೆ.

  ಸೋನಾಕ್ಷಿ ಸಿನ್ಹಾಗೂ ಲಕ್ಷ್ಮಿ ಕೃಪಾ ಕಟಾಕ್ಷ

  ಸೋನಾಕ್ಷಿ ಸಿನ್ಹಾಗೂ ಲಕ್ಷ್ಮಿ ಕೃಪಾ ಕಟಾಕ್ಷ

  ರೌಡಿ ರಾಥೋಡ್, ದಬಾಂಗ್ ನಂತಹ ಚಿತ್ರಗಳು ಹಿಟ್ ಆಗಿದ್ದೇ ತಡ ಸೋನಾಕ್ಷಿ ಸಿನ್ಹಾ ರಾತ್ರೋ ರಾತ್ರಿ ತಮ್ಮ ಸಂಭಾವನೆಯನ್ನು ಏರಿಸಿಕೊಂಡರು. ರು.1.5 ಕೋಟಿಯಿಂದ ರು.2.5 ಕೋಟಿಗೆ ಅವರ ಸಂಭಾವನೆ ಜಿಗಿದಿದೆ.

  ಸೋನಾಕ್ಷಿಗೆ ಸೆಡ್ಡುಹೊಡೆಯುತ್ತಿರುವ ಅನುಷ್ಕಾ

  ಸೋನಾಕ್ಷಿಗೆ ಸೆಡ್ಡುಹೊಡೆಯುತ್ತಿರುವ ಅನುಷ್ಕಾ

  ಸಂಭಾವನೆ ವಿಚಾರದಲ್ಲಿ ತಾರೆ ಅನುಷ್ಕಾ ಶರ್ಮಾಗೂ ಸೋನಾಕ್ಷಿಗೂ ನೆಕ್ ಟು ನೆಕ್ ಫೈಟ್ ಇದೆ. ಸೋನಾಕ್ಷಿ ಏನೋ ಅತ್ತ ದಬಾಂಗ್ ನಲ್ಲಿ ಮಿಂಚಿದರು. ಆದರೆ ಅನುಷ್ಕಾಗೆ ಇನ್ನೂ ಭಾರಿ ಬ್ರೇಕ್ ನೀಡುವ ಚಿತ್ರ ಸಿಕ್ಕಿಲ್ಲ. ಅನುಷ್ಕಾ ಕೂಡ ಅಷ್ಟೇ ರು.2.5 ಕೋಟಿ ಸಂಭಾವನೆ ಎಣಿಸುತ್ತಾರೆ.


  ಸಾಮಾನ್ಯವಾಗಿ ಸಿನಿಮಾ ಒಂದಕ್ಕೆ ತಾರೆಗಳು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ. ಆದರೆ ಈ ವಿಚಾರವಾಗಿ ತಾರೆಗಳು ಎಲ್ಲೂ ಬಾಯಿ ಬಿಡಲ್ಲ. ಗಾಸಿಪ್ ಸುದ್ದಿಗಳ ರೂಪದಲ್ಲಿ ಅಷ್ಟು ಕೋಟಿಯಂತೆ ಇಷ್ಟು ಕೋಟಿಯಂತೆ ಎಂಬ ಸುದ್ದಿಗಳು ಹರಿದಾಡುತ್ತಿರುತ್ತವೆ.

  ಆದರೆ ಎಲ್ಲೂ ನಿಖರ ಮಾಹಿತಿ ಸಿಗಲ್ಲ. ನಾವಿಲ್ಲಿ ನೀಡುತ್ತಿರುವ ವಿವರಗಳನ್ನು ನಂಬುವುದು ಬಿಡುವುದು ನಿಮಗೇ ಬಿಟ್ಟಿದ್ದು. ಅಕ್ಕಿಯಿಂದ ಹಿಡಿದು ಚಿನ್ನದ ತನಕ ಎಲ್ಲ ಬೆಲೆಗಳು ಏರುಮುಖವಾಗಿ ಸಾಗುತ್ತಿವೆ. ಇನ್ನು ಸಿನಿಮಾ ತಾರೆಗಳ ಸಂಭಾವನೆ ಏರದಿದ್ದರೆ ಹೇಗೆ? ಒಂದೊಂದೇ ಸ್ಲೈಡುಗಳಲ್ಲಿ ನೋಡಿ ಅವರ 'ಕಾಸು' ಬಾತ್.

  English summary
  Bollywood actresses Kareena Kapoor, Priyanka Chopra, Katrina Kaif, Vidya Balan, Deepika Padukone, Sonakshi Sinha and Anushka Sharma have decided to revise their fees, to bring in some semblance of parity with their leading men. And producers and filmmakers don’t seem to mind.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X