Just In
Don't Miss!
- Automobiles
ಪ್ರೀಮಿಯಂ ಹ್ಯಾಚ್ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ
- News
ಸತೀಶ್ ಜಾರಕಿಹೊಳಿ ಅಂದು ಹೇಳಿದ್ದ ಆ ಒಂದು 'ವಸ್ತು' ಇದೇ ಏನು?
- Lifestyle
ಈ ವಿಚಾರ ಕೇಳಿದ್ರೆ ಮುಂದೆಂದೂ ನೀವು ಪಪ್ಪಾಯ ಬೀಜವನ್ನು ಬಿಸಾಡಲಾರರಿ!
- Sports
ಐಪಿಎಲ್ 2021: ಆರಂಭ-ಅಂತ್ಯ, ತಾಣಗಳು ಸಂಪೂರ್ಣ ಮಾಹಿತಿ
- Education
WCD Ballari Recruitment 2021: ಅಂಗನವಾಡಿಯಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಏರ್ಬ್ಯಾಗ್ ಕಡ್ಡಾಯಗೊಳಿಸಿದ ಹಿನ್ನೆಲೆ: ಹೊಸ ಕಾರುಗಳ ಬೆಲೆ ಹೆಚ್ಚಳವಾಗಲಿದೆ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸಲಾರ್' ಚಿತ್ರಕ್ಕೆ ನಾಯಕಿ ಆಗ್ತಾರಾ ಬಾಲಿವುಡ್‌ನ ಆಕ್ಷನ್ ಕ್ವೀನ್?
ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ತಯಾರಾಗಲಿರುವ ಸಲಾರ್ ಸಿನಿಮಾ ಆರಂಭಿಕ ಹಂತದಲ್ಲೇ ಭಾರಿ ಹೈಪ್ ಕ್ರಿಯೇಟ್ ಮಾಡುತ್ತಿದೆ. ಕೆಜಿಎಫ್ ಚಿತ್ರದ ಬಳಿಕ ಸಲಾರ್ ಕೈಗೆತ್ತಿಕೊಂಡಿರುವ ಪ್ರಶಾಂತ್ ನೀಲ್ ಕೆಜಿಎಫ್ ಮೀರಿಸುವಂತಹ ಪ್ರಾಜೆಕ್ಟ್ ಮಾಡಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.
ಇತ್ತೀಚಿಗಷ್ಟೆ ಹೈದರಾಬಾದ್‌ನಲ್ಲಿ ಸಲಾರ್ ಮುಹೂರ್ತ ಸಮಾರಂಭ ನಡೆದಿತ್ತು. ರಾಕಿಂಗ್ ಸ್ಟಾರ್ ಯಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಲಾರ್ ಚಿತ್ರದ ಘೋಷಣೆಯಾದ ಸಂದರ್ಭದಿಂದಲೂ ನಾಯಕಿಯರ ವಿಚಾರಕ್ಕೆ ಸದ್ದು ಮಾಡ್ತಿದೆ. ಪ್ರಭಾಸ್ ಜೊತೆ ಯಾರು ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಟ್ರೆಂಡಿಂಗ್‌ನಲ್ಲಿದೆ. ಈಗಾಗಲೇ ಕೆಲವು ಬಾಲಿವುಡ್ ನಟಿಯರ ಹೆಸರು ಸಾಲಿನಲ್ಲಿದೆ. ಈಗ ಮತ್ತೊಬ್ಬ ಬಿಟೌನ್ ಸೆಲೆಬ್ರಿಟಿಯ ಹೆಸರು ಚರ್ಚೆಗೆ ಬಂದಿದೆ. ಯಾರದು? ಮುಂದೆ ಓದಿ...

ಕತ್ರಿನಾ ಕೈಫ್ ಜೊತೆ ಮಾತುಕತೆ!
ಸಲಾರ್ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸಲು ಬಾಲಿವುಡ್ ಆಕ್ಷನ್ ಕ್ವೀನ್ ಕತ್ರಿನಾ ಕೈಫ್ ಗೆ ಆಫರ್ ಮಾಡಲಾಗಿದೆಯಂತೆ. ಈ ಕುರಿತು ಕತ್ರಿನಾ ಜೊತೆ ಒಂದು ಸುತ್ತಿನ ಮಾತುಕತೆ ಸಹ ಮುಗಿದಿದ್ದು, ಇನ್ನು ಒಪ್ಪಿಗೆ ನೀಡಿಲ್ಲವಂತೆ. ಆದರೆ, ಸಲಾರ್ ಚಿತ್ರದ ಕಥೆ ಕೇಳಿ ಥ್ರಿಲ್ ಆಗಿದ್ದಾರೆ ಎಂದು ವರದಿಯಾಗಿದೆ.
'ಸಲಾರ್' ಚಿತ್ರದಲ್ಲಿ ಇಬ್ಬರು ನಾಯಕಿಯರು, ಒಬ್ಬರು ಬಾಲಿವುಡ್, ಇನ್ನೊಬ್ಬರು?

2005ರಲ್ಲಿ ಕೊನೆ ತೆಲುಗು ಸಿನಿಮಾ
ಒಂದು ವೇಳೆ ಕತ್ರಿನಾ ಕೈಫ್ ಸಲಾರ್ ಚಿತ್ರವನ್ನು ಒಪ್ಪಿಕೊಂಡರೆ ಪ್ರಭಾಸ್ ಅಭಿಮಾನಿಗಳು ಖುಷ್ ಆಗಲಿದ್ದಾರೆ. ಹಾಗೆಯೇ ಹದಿನೈದು ವರ್ಷದ ಬಳಿಕ ಟಾಲಿವುಡ್‌ಗೆ ಕಂಬ್ಯಾಕ್ ಸಹ ಮಾಡಲಿದ್ದಾರೆ. 2004ರಲ್ಲಿ ಮಹೇಶ್ವರಿ ಚಿತ್ರದಲ್ಲಿ ಮೊದಲ ಸಲ ನಟಿಸಿದ್ದ ಕತ್ರಿನಾ, 2005ರಲ್ಲಿ ಬಾಲಕೃಷ್ಣ ಜೊತೆ 'ಅಲ್ಲುರಿ ಪಿಡುಗ' ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ದಿಶಾ ಪಟಾನಿ ಹೆಸರು ಕೇಳಿ ಬರ್ತಿದೆ?
ಸಲಾರ್ ಚಿತ್ರದಲ್ಲಿ ಇಬ್ಬರು ನಾಯಕಿಯರು ಎನ್ನಲಾಗಿದೆ. ಈಗಾಗಲೇ ಒಂದು ಪಾತ್ರಕ್ಕೆ ಬಾಲಿವುಡ್ ನಟಿ ದಿಶಾ ಪಟಾನಿ ಹೆಸರು ಬಲವಾಗಿ ಕೇಳಿಬರುತ್ತಿದೆ. ಆದರೆ ದಿಶಾ ಅವರ ಆಗಮನದ ಬಗ್ಗೆಯೂ ಚಿತ್ರತಂಡ ಅಧಿಕೃತವಾಗಿ ಘೋಷಿಸಿಲ್ಲ. ಹಾಗಾಗಿ, ಹೀರೋಯಿನ್ ಆಯ್ಕೆ ಕುತೂಹಲವಾಗಿಯೇ ಉಳಿದುಕೊಂಡಿದೆ.
'ಸಲಾರ್' ಮುಹೂರ್ತ: ಪ್ರಭಾಸ್ ವಿರುದ್ಧ ಬೇಸರಗೊಂಡ ಯಶ್ ಅಭಿಮಾನಿಗಳು

ಸಲಾರ್ ಚಿತ್ರದಲ್ಲಿ ಕೆಜಿಎಫ್ ತಂತ್ರಜ್ಞರು
ಪ್ರಭಾಸ್ ನಾಯಕ ಎನ್ನುವುದು ಬಿಟ್ಟರೆ ಉಳಿದ ಯಾವ ಕಲಾವಿದರು ಸಲಾರ್ ಪ್ರಾಜೆಕ್ಟ್‌ನಲ್ಲಿ ಫಿಕ್ಸ್ ಆಗಿಲ್ಲ. ಆದರೆ, ಕೆಜಿಎಫ್ ನಿರ್ದೇಶಿಸಿದ್ದ ಪ್ರಶಾಂತ್ ನೀಲ್, ಈ ಚಿತ್ರದಲ್ಲೂ ತಮ್ಮ ನೆಚ್ಚಿನ ತಂತ್ರಜ್ಞರನ್ನು ಮುಂದುವರಿಸಿದ್ದಾರೆ. ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಸಲಾರ್ ಚಿತ್ರದಲ್ಲಿಯೂ ಇರಲಿದೆ.