»   » ಕನ್ನಡದ ರಂಗಿತರಂಗ ಲಗಾನ್ ನಿರ್ದೇಶಕರ ಕೈಗೆ?

ಕನ್ನಡದ ರಂಗಿತರಂಗ ಲಗಾನ್ ನಿರ್ದೇಶಕರ ಕೈಗೆ?

Posted By: ಸೋನು
Subscribe to Filmibeat Kannada

ಸ್ಯಾಂಡಲ್ ವುಡ್ ಸೆನ್ಸೇಷನಲ್ ಹಿಟ್ 'ರಂಗಿತರಂಗ' ಕನ್ನಡ ಚಿತ್ರರಂಗದಲ್ಲಿ ಭದ್ರ ತಳವೂರಿದ ನಂತರ ಇದೀಗ ಪರಭಾಷಾ ಚಿತ್ರರಂಗಕ್ಕೆ ಸೆಡ್ಡು ಹೊಡೆಯಲು ತಯಾರಾಗಿ ನಿಂತಿದೆ. ಹೌದು ಗಾಂಧಿನಗರದಲ್ಲಿ ಭಾರಿ ಸದ್ದು ಮಾಡುತ್ತಿದ್ದ ಕನ್ನಡ ಚಿತ್ರ 'ರಂಗಿತರಂಗ' ಇದೀಗ ಪರಭಾಷೆಗೂ ರಿಮೇಕ್ ಆಗಲಿದೆಯಂತೆ.

ಲೇಟೇಸ್ಟ್ ಸುದ್ದಿಯ ಪ್ರಕಾರ 'ರಂಗಿತರಂಗ' ಚಿತ್ರದ ರೀಮೇಕ್ ಹಕ್ಕನ್ನು ಬಾಲಿವುಡ್ ನ ಖ್ಯಾತ ಫಿಲ್ಮ್ ಮೇಕರ್ ಅಶುತೋಷ್ ಗೌರಿಕೆರ್ ಚಿತ್ರದ ಹಿಂದಿ ಹಕ್ಕನ್ನು ಪಡೆದುಕೊಂಡಿದ್ದಾರೆ ಅನ್ನೋ ಮಾಹಿತಿ ಲಭಿಸಿದೆ. [ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

Bollywood Film maker Ashutosh Gowariker bags 'RangiTaranga' Hindi Rights

'ಜೋಧಾ ಅಕ್ಬರ್', 'ಲಗಾನ್' ನಂತಹ ಹಿಟ್ ಬಾಲಿವುಡ್ ಚಿತ್ರಗಳನ್ನು ನೀಡಿದ ನಿರ್ದೇಶಕ ಕಮ್ ನಿರ್ಮಾಪಕ ಅಶುತೋಷ್ ಅವರ ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ 'ರಂಗಿತರಂಗ' ಚಿತ್ರದ ರೈಟ್ಸ್ ಬಗ್ಗೆ ಭಾರಿ ಚರ್ಚೆಗಳು ವ್ಯಕ್ತವಾಗುತ್ತಿದ್ದು, ಇದು ಹೌದೋ, ಅಲ್ವೋ, ಅಂತ ಟ್ವಿಟ್ಟರ್ ನಲ್ಲಿ ಬಹಳಷ್ಷು ಚರ್ಚೆಗಳು ಕೂಡ ನಡೆಯುತ್ತಿವೆ.


ಈ ಬಗ್ಗೆ 'ರಂಗಿತರಂಗ' ಚಿತ್ರದ ನಿರ್ದೇಶಕ ಅನುಪ್ ಭಂಡಾರಿ ಅವರನ್ನು ಪ್ರಶ್ನಿಸಿದಾಗ, ಇನ್ನೂ ಹಿಂದಿ ರೈಟ್ಸ್ ಬಗ್ಗೆ ಪಕ್ಕಾ ಮಾಹಿತಿ ಕೊಡಲಾಗುತ್ತಿಲ್ಲ. ಅದರ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿದ್ದು, ಪಕ್ಕಾ ಆದ ಕೂಡಲೇ ನಿಮಗೆ ತಿಳಿಸುತ್ತೇವೆ ಎಂದು ವಿಶೇಷವಾಗಿ 'ಕನ್ನಡ ಫಿಲ್ಮಿಬೀಟ್'ಗೆ ಮಾಹಿತಿ ನೀಡಿದ್ದಾರೆ.[ಅಂಕಲ್ ಸ್ಯಾಮ್ ನೆಲದಲ್ಲಿ ರಂಗಿತರಂಗದ ಮಿಂಚು]

ಸದ್ಯಕ್ಕೆ 'ರಂಗಿತರಂಗ' ತಮಿಳು, ತೆಲುಗು ಚಿತ್ರರಂಗದವರ ಗಮನ ಕೂಡ ಸೆಳೆದಿದ್ದು, ಸಮಯ ಕೂಡಿ ಬಂದರೆ ಅಥವಾ ಅವಕಾಶ ಸಿಕ್ಕರೆ ಟಾಲಿವುಡ್, ಕಾಲಿವುಡ್ ಗೂ ರಿಮೇಕ್ ಆಗುವ ಸಂದರ್ಭಗಳು ತುಂಬಾನೇ ಇದೆ ಅಂತ ಗಾಂಧಿನಗರದ ಅಂಗಳದಲ್ಲಿ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯಾಗಿದೆ. [ಸಪ್ತ ಸಾಗರದಾಚೆ 'ರಂಗಿತರಂಗ' ಕಮಾಲ್]

Bollywood Film maker Ashutosh Gowariker bags 'RangiTaranga' Hindi Rights

ಅದೇನೆ ಇರಲಿ ಒಟ್ಟಿನಲ್ಲಿ ಕರ್ನಾಟಕದಾದ್ಯಂತ ಯಶಸ್ಸು ಗಳಿಸಿದ 'ರಂಗಿತರಂಗ' ಇತ್ತೀಚೆಗೆ ವಿದೇಶದಲ್ಲೂ ಸಖತ್ ಸೌಂಡ್ ಮಾಡ್ತಿರೋ ವಿಚಾರ ನಿಮಗೆ ತಿಳಿದೇ ಇದೆ. ಅಂತೂ ಕನ್ನಡದ ಸ್ವಂತ ಕಥೆಯೊಂದು ಪರ ಭಾಷೆಗೆ ರಿಮೇಕ್ ಆಗುತ್ತೆ ಅಂದ್ರೆ ನಮಗೂ ಖುಷಿ ಅಲ್ವ. ಏನೇ ಆಗ್ಲಿ ಹೊಸಬರ ಚಿತ್ರ ಇದೀಗ ವರ್ಲ್ಡ್ ಫೇಮಸ್ ಆಗ್ತಿರೋದು ಕಂಡರೆ ಇದು ಕನ್ನಡಿಗರಾದ ನಮಗೆ ಒಂಥರಾ ಸಂತಸದ ವಿಚಾರ ಅಂತಾನೇ ಹೇಳಬಹುದು.

English summary
Block baster hit 'RangiTaranga' has bought the Hindi Rights. Bollywood director Ashutosh Gowariker has bought the Hindi remake rights of the Film. The movie is directed by Anup Bhandari

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X