India
  For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸ್ ನಲ್ಲಿ 'Volcano' ಆಗಿ ಸಿಡಿದ ಉಪ್ಪಿ

  By Harshitha
  |

  ''ವಾಲ್ಕೆನೋ ಸೈಲೆಂಟ್ ಆಗಿದೆ ಅಂತ ಅದರ ಅಕ್ಕ-ಪಕ್ಕ ಟೆಂಟ್ ಹಾಕಿ ನಂದೇ ಮಾರ್ಕೆಟ್ ಅಂದ್ರೆ ಅಷ್ಟೆ...'' ಹೀಗಂತ 'ಉಪ್ಪಿ-2' ಸಿನಿಮಾದ ''ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್...'' ಹಾಡಲ್ಲಿ ಉಪೇಂದ್ರ ಹೇಳಿದ್ದಾರೆ. ಹಾಡಿನ ಸಾಲಿನಂತೆ ಈ ಬಾರಿ ಗಾಂಧಿನಗರದ ಗಲ್ಲಪೆಟ್ಟಿಗೆಯಲ್ಲಿ ಉಪೇಂದ್ರ ವಾಲ್ಕೆನೋ ಆಗಿ ಸಿಡಿದಿದ್ದಾರೆ.

  ಹೌದು, ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿರುವ 'ಉಪ್ಪಿ-2' ಸಿನಿಮಾಗೆ ಬಿಗ್ ಓಪನ್ನಿಂಗ್ ಸಿಕ್ಕಿದೆ. ಕರ್ನಾಟಕ ಸೇರಿದಂತೆ ಆಂಧ್ರ, ಮುಂಬೈನಲ್ಲಿ 'ನಾನು-ನೀನು' ಜುಗಲ್ಬಂದಿ ನೋಡೋಕೆ ಪ್ರೇಕ್ಷಕರು ಮುಗಿಬೀಳ್ತಿದ್ದಾರೆ.

  ಮೊದಲ ದಿನ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡ 'ಉಪ್ಪಿ-2' ಹೊಸ ಇತಿಹಾಸ ನಿರ್ಮಿಸಿದೆ. ರಾಜ್ಯದಾದ್ಯಂತ 250 ಥಿಯೇಟರ್ ಗಳಲ್ಲಿ ರಿಲೀಸ್ ಆದ 'ಉಪ್ಪಿ-2' ಕಲೆಕ್ಷನ್ ಮಾಡಿರುವುದು ಎಷ್ಟು ಗೊತ್ತಾ? ಬರೋಬ್ಬರಿ 9 ಕೋಟಿ. ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಇದು ಹೊಸ ಹಿಸ್ಟ್ರಿ. [ರಿಯಲ್ ಸ್ಟಾರ್ ಉಪ್ಪಿಟ್ಟು ತಿಂದೋರು ಕೊಟ್ಟ ಕಾಸೆಷ್ಟು?]

  ಗಾಂಧಿನಗರದ ಕಲೆಕ್ಷನ್ ಪಂಡಿತರು ಲೆಕ್ಕ ಹಾಕಿರುವ ಪ್ರಕಾರ ಫಸ್ಟ್ ಡೇ 'ಉಪ್ಪಿ-2' 9 ಕೋಟಿ ಬಾಚಿದೆ. ಮೂರು ದಿನಗಳಲ್ಲಿ 25 ಕೋಟಿ ಕಲೆಕ್ಟ್ ಮಾಡುವ ನಿರೀಕ್ಷೆ ಇದೆ. ಉಪ್ಪಿಟ್ಟು ರುಚಿಗೆ ಎಲ್ಲರೂ ಕ್ಲೀನ್ ಬೌಲ್ಡ್ ಆಗಿದ್ದಾರೆ ಅನ್ನೋಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ?

  English summary
  Upendra directorial and starrer Kannada Movie 'Uppi-2' has created a new history in Sandalwood by collecting 9 crores on Day 1 of its release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X