For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಆಗಲಿದೆಯೇ ನಟಿ, ಸಂಸದೆ ಸುಮಲತಾ ಜೀವನ?

  |

  ನಟಿ, ಸಂಸದೆ ಆಗಿ ಜನಪ್ರಿಯರಾಗಿರುವ ಸುಮಲತಾ ಅವರ ಜೀವನ ಸಿನಿಮಾ ಆಗಲಿದೆಯೇ? ಹೀಗೊಂದು ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

  ಚೆನ್ನೈನಲ್ಲಿ ಹುಟ್ಟಿ, ಆಂಧ್ರಪ್ರದೇಶದಲ್ಲಿ ಬೆಳೆದು ಈಗ ಕನ್ನಡತಿಯೇ ಆಗಿರುವ ನಟಿ ಸುಮಲತಾ ಅವರ ಜೀವನ ಸಿನಿಮಾ ಆಗಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

  ಸ್ಟಾರ್ ನಟಿಯಾಗಿ, ಸ್ಟಾರ್ ಪೋಷಕ ನಟಿಯಾಗಿ, ಸ್ಟಾರ್ ನಟ ಅಂಬರೀಶ್ ಪತ್ನಿಯಾಗಿ, ಅಭಿಷೇಕ್ ಅಮ್ಮನಾಗಿ ಈಗ ಸಂಸದೆ, ಜನಸೇವಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಸುಮಲತಾ.

  ಸುಮಲತಾ ಹಾಗೂ ಅಂಬರೀಶ್ ಪ್ರೀತಿ, ಸುಮಲತಾ ಬಾಲ್ಯ, ಸಿನಿಮಾ ಜೀವನ, ರಾಜಕಾರಣ ಒಟ್ಟಾಗಿ ಸಿನಿಮಾ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ನಿರ್ದೇಶಕ ಗುರು ದೇಶ್‌ಪಾಂಡೆ ಅವರು ಇತ್ತೀಚೆಗೆ ಸುಮಲತಾ ಅವರನ್ನು ಭೇಟಿ ಮಾಡಿದ್ದಕ್ಕೆ ಇಂಥಹದ್ದೊಂದು ಊಹಾಪೋಹ ಎದ್ದಿದೆ.

  ಆದರೆ ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಗುರು ದೇಶಪಾಂಡೆ, 'ನಾನು ಹಾಗೂ ತಮ್ಮ ತಂಡ ಸುಮಲತಾ ಅವರನ್ನು ಭೇಟಿ ಮಾಡಿದ್ದು ನಿಜ ಆದರೆ ಸುಮಲತಾ ಅವರ ಜೀವನವನ್ನು ಸಿನಿಮಾ ಮಾಡುತ್ತಿಲ್ಲ. ಬದಲಿಗೆ ಸುಮಲತಾ ಅವರೊಟ್ಟಿಗೆ ಹೊಸ ಯೋಜನೆಯೊಂದಕ್ಕೆ ಕೈ ಹಾಕಿದ್ದೇವೆ, ಕೆಲವೇ ದಿನಗಳಲ್ಲಿ ಅದರ ಪೂರ್ಣ ಮಾಹಿತಿ ನೀಡಲಿದ್ದೇವೆ' ಎಂದಿದ್ದಾರೆ ಅವರು.

  ಅಭಿಷೇಕ್ ಅಂಬರೀಷ್ ಗೆ ಶಾಕ್ ಕೊಟ್ಟ ಡಿ ಬಾಸ್ ದರ್ಶನ್ | Filmibeat Kannada

  ಸುಮಲತಾ ಅವರು ಪ್ರಸ್ತುತ ರಾಜಕಾರಣದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆಗಾಗ್ಗೆ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ದರ್ಶನ್ ನಟಿಸುತ್ತಿರುವ 'ರಾಜವೀರ ಮದಕರಿ ನಾಯಕ' ಸಿನಿಮಾದಲ್ಲಿ ನಟಿಸಲಿದ್ದಾರೆ ಸುಮಲತಾ.

  English summary
  News spreading that actor, MP Sumalatha life journey going to be a movie. Director Guru Deshpande refuses the news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion