For Quick Alerts
  ALLOW NOTIFICATIONS  
  For Daily Alerts

  ಸಿಸಿಎಲ್ ನಲ್ಲಿ ಮುಂದುವರಿದ ಸ್ಯಾಂಡಲ್ ವುಡ್ ಗುಂಪುಗಾರಿಕೆ?

  By ಬಾಲರಾಜ್ ತಂತ್ರಿ
  |

  ಸೆಲೆಬ್ರಿಟಿ ಕ್ರಿಕೆಟ್ ಲೀಗಿನ ಐದನೇ ಆವೃತ್ತಿ ಮುಗಿದಿದೆ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಕಿಚ್ಚ ಸುದೀಪ್ ನಾಯಕತ್ವದ 'ಕರ್ನಾಟಕ ಬುಲ್ಡೋಜರ್ಸ್ ಈ ಬಾರಿ ಸೆಮಿಫೈನಲ್ ನಲ್ಲಿ ಮುಗ್ಗರಿಸಿ ತನ್ನ ಅಭಿಯಾನವನ್ನು ಮುಗಿಸಿದೆ. ತೆಲುಗು ವಾರಿಯರ್ಸ್ ಈ ಬಾರಿಯ (2015) ಚಾಂಪಿಯನ್ ಆಗಿ ಹೊರಹೊಮ್ಮಿದೆ. (ಸಿಸಿಎಲ್ ಫೈನಲ್ ಪಂದ್ಯದ ಚಿತ್ರಗಳು)

  ಕ್ರೀಡೆಯಲ್ಲಿ ಗೆಲ್ಲುವುದು, ಸೋಲುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎನ್ನುವ ಮಾತು/ವಾದವನ್ನು ನಾವು ಒಪ್ಪುವುದಾದರೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ 'ಗುಂಪುಗಾರಿಕೆ' ಈ ಬಾರಿಯ ಸಿಸಿಎಲ್ ನಲ್ಲೂ ಮುಂದುವರಿದಿರುವುದು ನಮ್ಮ ಕಣ್ಣು ಮುಂದಿದೆ.

  ಆ ಬಣ, ಈ ಬಣ, ಅಲ್ಲಿಗೆ ನಾವ್ಯಾಕೆ ಹೋಗಬೇಕು, ಇಲ್ಲಿಗೆ ಅವನ್ಯಾಕೆ ಬರಬೇಕು ಎನ್ನುವ ಕುರುಡು 'ಸಂಪ್ರದಾಯ'ಕ್ಕೆ ತಿಲಾಂಜಲಿ ಹಾಡುವ ಯಾವ ಲಕ್ಷಣಗಳು ನಮ್ಮ ಚಿತ್ರೋದ್ಯಮದವರಲ್ಲಿ ಕಂಡುಬರುತ್ತಿಲ್ಲ. ನಾವೆಲ್ಲಾ ಒಂದೇ ಎನ್ನುವ ಒಗ್ಗಟ್ಟು ಮೂಡಿಸಲು ಮತ್ತೆ ರಾಜಣ್ಣ, ವಿಷ್ಣು ಸರ್ ಹುಟ್ಟಿ ಬರಬೇಕೇನೋ? (ಭೋಜ್ಪುರಿ ತಂಡಕ್ಕೆ ಭಜ್ಜಿ ತಿನಿಸಿದ ಕಿಚ್ಚ ಪಡೆ)

  ಮೊದಲ ಆವೃತ್ತಿ ಹೊರಪಡಿಸಿ ಕಳೆದ ಮೂರು ಸಿಸಿಎಲ್ ನಲ್ಲಿ ನಡೆದಂತೇ ಈ ಬಾರಿಯೂ ಕನ್ನಡ ಚಿತ್ರೋದ್ಯಮ ಒಗ್ಗಟ್ಟು ಪ್ರದರ್ಶಿಸಲಿಲ್ಲ. ಕಡೇ ಪಕ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಸೆಲೆಬ್ರಿಟಿಗಳು ನಿರೀಕ್ಷಿತ ಮಟ್ಟದಲ್ಲಿ ಒಟ್ಟಾಗಲಿಲ್ಲ.

  ಆದರೆ ಚಿನ್ನಸ್ವಾಮಿ ಕ್ರೀಡಾಂಗಣ ಮಾತ್ರ ಅಭಿಮಾನಿಗಳಿಂದ ಜ್ಯಾಮ್ ಪ್ಯಾಕ್ ಆಗಿತ್ತು ಎನ್ನುವುದು ಸಮಾಧಾನಕರ ಸಂಗತಿ. ಮುಂದೆ ಓದಿ,,

  ಇತರ ಚಿತ್ರದ್ಯೋಮದಲ್ಲಿ ಹೇಗೆ

  ಇತರ ಚಿತ್ರದ್ಯೋಮದಲ್ಲಿ ಹೇಗೆ

  ಹಾಗಂತ ರಜನೀಕಾಂತ್, ಕಮಲಹಾಸನ್, ಚಿರಂಜೀವಿ, ಪವನ್ ಕಲ್ಯಾಣ್ ಮುಂತಾದ ಘಟಾನುಗಟಿಗಳು ಅವರವರ ಟೀಂಗೆ ಚಿಯರ್ ಮಾಡಲು ಬಂದಿದ್ರಾ? ನಮ್ಮಲ್ಲಿ ಮಾತ್ರ ಅವರು, ಇವರು ಬಂದಿಲ್ಲಾಂದ್ರೆ ಯಾಕೆ ಸುದ್ದಿಯಾಗುತ್ತದೆ? ಎನ್ನುವುದಕ್ಕೆ ಉತ್ತರ ನಮ್ಮಲ್ಲೇ ಇರುವುದರಿಂದ ಈ ಬಗ್ಗೆ ಹೆಚ್ಚು ಸ್ಪಷ್ಟೀಕರಣ ಅನಗತ್ಯ.

  ಅಂಬರೀಶ್ ಅನುಪಸ್ಥಿತಿ

  ಅಂಬರೀಶ್ ಅನುಪಸ್ಥಿತಿ

  ಕಳೆದ ಬಾರಿಯ ಅಂದರೆ ಸಿಸಿಎಲ್ ನಾಲ್ಕನೇ ಆವೃತ್ತಿಯನ್ನು ಹೊರತು ಪಡಿಸಿ ಹೆಚ್ಚುಕಮ್ಮಿ ಎಲ್ಲಾ ಪಂದ್ಯಗಳಲ್ಲೂ ಭಾಗವಹಿಸಿದ್ದ ರೆಬೆಲ್ ಸ್ಟಾರ್ ಮತ್ತು ವಸತಿ ಸಚಿವ ಅಂಬರೀಶ್ ಅವರ ಅನುಪಸ್ಥಿತಿ ಈ ಬಾರಿಯ ಸಿಸಿಎಲ್ ನಲ್ಲಿ ಎದ್ದು ಕಾಣುತ್ತಿತ್ತು. ಕೆಲಸದ ಅಥವಾ ಆರೋಗ್ಯದ ಒತ್ತಡದಿಂದಾಗಿ ಅಂಬಿ, ಗೈರಾಗಿದ್ದ ಸಾದ್ಯತೆಗಳು ಇದ್ದರೂ ಅಭಿಮಾನಿಗಳಿಗೆ ಅದು ಬೇರೆ ಸಂದೇಶ ರವಾನಿಸುವುದಂತೂ ಸ್ಪಷ್ಟ. ಕಡೇ ಪಕ್ಷ ಸುಮಲತಾ ಕೂಡಾ ಭಾಗವಹಿಸಲಿಲ್ಲ.

  ಎಲ್ಲಾ ಪಂದ್ಯದಲ್ಲಿ ಭಾಗವಹಿಸಿದ್ದು

  ಎಲ್ಲಾ ಪಂದ್ಯದಲ್ಲಿ ಭಾಗವಹಿಸಿದ್ದು

  ಈ ಬಾರಿಯ ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ (ಸೆಮಿ ಫೈನಲ್ ಸೇರಿ) ಹಾಜರಿದ್ದದ್ದು, ಆಟಗಾರರು ಮತ್ತು ತಂಡದ ಸದಸ್ಯರನ್ನು ಹೊರತು ಪಡಿಸಿ ಕೃತಿ ಕರಬಂಧ, ಮಾಧುರಿ ಭಟ್ಟಾಚಾರ್ಯ, ಸುದೀಪ್ ಪತ್ನಿ ಮುಂತಾದವರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬುಲ್ಡೋಜರ್ಸ್ ಜೆರ್ಸಿಯಲ್ಲಿದ್ದು, ಆಟಗಾರರನ್ನು ಹುರಿದುಂಬಿಸುತ್ತಿದ್ದದ್ದು, ಐದನೇ ಸಿಸಿಎಲ್ ಟೂರ್ನಿಯ ಹೈಲೈಟ್ಸ್.

  ಬೆಂಗಳೂರು ಪಂದ್ಯದಲ್ಲಿ ಹಲವಾರು ಸೆಲೆಬ್ರಿಟಿಗಳು

  ಬೆಂಗಳೂರು ಪಂದ್ಯದಲ್ಲಿ ಹಲವಾರು ಸೆಲೆಬ್ರಿಟಿಗಳು

  ಬೆಂಗಾಳ್ ಟೈಗರ್ಸ್ ಜೊತೆ ಬೆಂಗಳೂರಿನ ಪಂದ್ಯದಲ್ಲಿ ಚಿಕ್ಕಣ್ಣ, ಎಸ್ ನಾರಾಯಣ್, ಪ್ರಣಯರಾಜ ಶ್ರೀನಾಥ್, ದೊಡ್ಡಣ್ಣ, ರವಿಚಂದ್ರನ್‌, ರಮೇಶ್‌ ಅರವಿಂದ್‌, ದೀಪಿಕಾ ಕಾಮಯ್ಯ, ಪ್ರಿಯಾಂಕ ಉಪೇಂದ್ರ, ರವಿಶಂಕರ್‌, ಸ್ಪೀಕರ್ ಕಾಗೋಡು ತಿಮ್ಮಪ್ಪ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮುಂತಾದವರು ಪ್ರಮುಖವಾಗಿ ಉಪಸ್ಥಿತರಿದ್ದರು.

  ಗೈರಾದ ಪ್ರಮುಖ ಸೆಲೆಬ್ರಿಟಿಗಳು

  ಗೈರಾದ ಪ್ರಮುಖ ಸೆಲೆಬ್ರಿಟಿಗಳು

  ಶ್ರೀನಗರ ಕಿಟ್ಟಿ, ಪೂಜಾ ಗಾಂಧಿ, ರಾಗಿಣಿ, ಗಣೇಶ್, ಯೋಗೀಶ್, ಯಶ್, ರಾಧಿಕಾ ಪಂಡಿತ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಉಪೇಂದ್ರ, ದುನಿಯಾ ವಿಜಯ್, ಜಗ್ಗೇಶ್, ಶರಣ್, ಯೋಗರಾಜ್ ಭಟ್, ಸೂರಿ, ಅಜೇಯ್ ರಾವ್, ಪ್ರೇಮ್ ಮುಂತಾದವರ ದೊಡ್ಡ ಪಟ್ಟಿಯೇ ಇದೆ. ಬಂದವರಿಗಿಂತ ಜಾಸ್ತಿ, ಬರದೇ ಇದ್ದವರ ಪಟ್ಟಿ ದೊಡ್ಡದಿದೆ.

  ಗಾಸಿಪ್ ಸುದ್ದಿಗೆ ಮೂಲ

  ಗಾಸಿಪ್ ಸುದ್ದಿಗೆ ಮೂಲ

  ಕರ್ನಾಟಕ ಬುಲ್ಡೋಜರ್ಸ್ ಆಡುವ ಎಲ್ಲಾ ಪಂದ್ಯದಗಳಲ್ಲಿ ಭಾಗವಹಿಸಲು ಸೆಲೆಬ್ರಿಟಿಗಳಿಗೆ ಅವರದ್ದೇ ಆದ ಸಮಸ್ಯೆಗಳು/ ಶೆಡ್ಯೂಲ್ ಗಳು ಇರುತ್ತವೆ ಎನ್ನುವುದು ಒಪ್ಪುವ ಮಾತಾದರೂ ಅದು ಸ್ಯಾಂಡಲ್ ವುಡ್ ನಲ್ಲಿ ಬೇರೆಯೇ ಗಾಸಿಪ್ ಹುಟ್ಟು ಹಾಕುತ್ತದೆ ಎನ್ನುವುದು ಕೂಡಾ ಅಷ್ಟೇ ಸಹಜ. ಏನೋ ಮಾಡ್ರಪ್ಪಾ..

  English summary
  Celebrity Cricket League season Five ends. Most of the Kannada celebrities are absence in this tournament.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X