For Quick Alerts
  ALLOW NOTIFICATIONS  
  For Daily Alerts

  ಬಹುಕೋಟಿ ವೆಚ್ಚದ ತಮಿಳಿನ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್?

  |

  ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಚಿತ್ರದಲ್ಲಿ ನಟಿಸಲು ಡಾ. ಶಿವರಾಜ್‌ಕುಮಾರ್ ಗ್ರೀನ್‌ ಸಿಗ್ನಲ್ ಕೊಟ್ಟಾಗಿದೆ. ಇದೀಗ ಮತ್ತೊಂದು ತಮಿಳು ಚಿತ್ರದಲ್ಲಿ ಶಿವಣ್ಣ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಧನುಷ್ ಜೊತೆ ಟಗರು ಶಿವ ಸ್ಕ್ರೀನ್‌ ಶೇರ್ ಮಾಡಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಈಗಾಗಲೇ ಒಂದು ಒಂದು ತೆಲುಗು ಚಿತ್ರದಲ್ಲಿ ಶಿವಣ್ಣ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಶಿವಣ್ಣನ 'ವಜ್ರಕಾಯ' ಚಿತ್ರದ ಹಾಡನ್ನು ಧನುಷ್ ಹಾಡಿದ್ದರು.

  ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ ಶುರುವಾದ ಮೇಲೆ ಸ್ಟಾರ್ ಕಲಾವಿದರು ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸೋದು ಕಾಮನ್ ಆಗಿಬಿಟ್ಟಿದೆ. ಬಾಲಿವುಡ್ ಸ್ಟಾರ್‌ಗಳೇ ಸೌತ್ ಸಿನಿಮಾಗಳಲ್ಲಿ ನಟಿಸಲು ಸಾಲುಗಟ್ಟಿದ್ದಾರೆ. ಇನ್ನು ಕನ್ನಡ, ತೆಲುಗು, ತಮಿಳು ಕಲಾವಿದರು ಪರಭಾಷಾ ಸಿನಿಮಾಗಳಲ್ಲಿ ನಟಿಸೋಕೆ ಮುಂದಾಗಿದ್ದಾರೆ. ಅಣ್ಣಾವ್ರ ಕಾಲದಿಂದಲೂ ದೊಡ್ಮನೆ ಸದಸ್ಯರು ಬೇರೆ ಭಾಷೆಯ ಸ್ಟಾರ್‌ಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಬಾಲಕೃಷ್ಣ ನಟನೆಯ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಸ್ಪೆಷಲ್ ಸಾಂಗ್‌ವೊಂದರಲ್ಲಿ ಶಿವಣ್ಣ ಹೆಜ್ಜೆ ಹಾಕಿದ್ದರು.

  ಶಿವಣ್ಣ -ಉಪ್ಪಿ ಹ್ಯಾಟ್ರಿಕ್ ಪ್ರಾಜೆಕ್ಟ್‌ಗೆ ಜನ್ಯ ಸಾರಥ್ಯ: ಚಿತ್ರದಲ್ಲಿ ನಟಿಸೋ ಮತ್ತೊಬ್ಬ ಸ್ಟಾರ್ ಯಾರು?ಶಿವಣ್ಣ -ಉಪ್ಪಿ ಹ್ಯಾಟ್ರಿಕ್ ಪ್ರಾಜೆಕ್ಟ್‌ಗೆ ಜನ್ಯ ಸಾರಥ್ಯ: ಚಿತ್ರದಲ್ಲಿ ನಟಿಸೋ ಮತ್ತೊಬ್ಬ ಸ್ಟಾರ್ ಯಾರು?

  ರಾಷ್ಟ್ರಪ್ರಶಸ್ತಿ ವಿಜೇತ ನಟ ಧನುಷ್ ಸದ್ಯ 'ಕ್ಯಾಪ್ಟನ್ ಮಿಲ್ಲರ್' ಎನ್ನುವ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಇದೇ ಚಿತ್ರದ ಪಾತ್ರವೊಂದಕ್ಕೆ ಶಿವಣ್ಣನನ್ನು ಕೇಳಲಾಗುತ್ತಿದೆಯಂತೆ. ಅರುಣ್ ಮತೇಶ್ವರನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿತ್ತು. ಪೀರಿಯಡ್ ಡ್ರಾಮಾ ಸಿನಿಮಾ ಇದಾಗಿದ್ದು, ತೆಲುಗು ನಟ ಸಂದೀಪ್ ಕೃಷ್ಣನ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸ್ತಿದ್ದಾರೆ. ಧನುಷ್ ಜೋಡಿಯಾಗಿ ಪ್ರಿಯಾಂಕ ಮೋಹನ್ ಬಣ್ಣ ಹಚ್ಚಲಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ.

  Century Star shivarajkumar talks for key role in Dhanush Starrer Captain Miller

  ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್‌ನಲ್ಲಿ ಶಿವರಾಜ್‌ಕುಮಾರ್ 'ಆರ್‌ಡಿಎಕ್ಸ್' ಎನ್ನುವ ಸಿನಿಮಾದಲ್ಲಿ ನಟಿಸ್ತಿರೋದು ಗೊತ್ತೇಯಿದೆ. 2 ವರ್ಷಗಳ ಹಿಂದೆ ಈ ಸಿನಿಮಾ ಮುಹೂರ್ತ ನೆರವೇರಿತ್ತು. ಇದೀಗ ಅದೇ ಬ್ಯಾನರ್‌ನ ತಮಿಳು ಸಿನಿಮಾದಲ್ಲಿ ನಟಿಸೋ ಬಗ್ಗೆ ಮಾತುಗಳು ಕೇಳಿಬರ್ತಿದೆ. ಧನುಷ್ ಕರಿಯರ್‌ನಲ್ಲೇ ಇದು ಅದ್ಧೂರಿ ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿದೆ. 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ 1930- 40ರ ಕಾಲಘಟ್ಟದ ಕಥೆಯನ್ನು ಹೇಳಲಾಗುತ್ತಿದೆ. ಒಟ್ನಲ್ಲಿ ಸೆಂಚುರಿ ಸ್ಟಾರ್ ಮತ್ತೊಂದು ತಮಿಳು ಚಿತ್ರಕ್ಕೆ ಸೈ ಎನ್ನುತ್ತಾರಾ ಕಾದು ನೋಡಬೇಕು. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ನಟಿಸ್ತಿದ್ದಾರೆ.

  English summary
  Century Star shivarajkumar talks for key role in Dhanush Starrer Captain Miller. Know More.
  Tuesday, October 11, 2022, 11:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X