'ಚಲನಚಿತ್ರ ಭಾಗ್ಯ' ಘೋಷಿಸಿದ್ದಾರೆ ಸಿ.ಎಂ. ಸಾಹೇಬ್ರು!
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಲು ಸಾಲು 'ಭಾಗ್ಯ' ಕಾರ್ಯಕ್ರಮಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ.
'ಅನ್ನಭಾಗ್ಯ', 'ಕ್ಷೀರಭಾಗ್ಯ'ದಂತಹ ಭಾಗ್ಯ ಯೋಜನೆಗಳ ಸಾಲಿಗೆ ಇದೀಗ 'ಚಲನಚಿತ್ರ ಭಾಗ್ಯ' ಕೂಡ ಸೇರ್ಪಡೆಯಾಗಿರುವುದು ಬ್ರೇಕಿಂಗ್ ನ್ಯೂಸ್.! [ಅಕ್ಟೋಬರ್ 23ಕ್ಕೆ 'ವಾಸ್ಕೋಡಿಗಾಮ'ನ ಅಬ್ಬರ ಶುರು ಗುರು..!]
'ಚಲನಚಿತ್ರ ಭಾಗ್ಯ'ದ ಪರಿಣಾಮ ನಾಳೆ ತೆರೆ ಕಾಣುತ್ತಿರುವ 'ವಾಸ್ಕೊಡಿಗಾಮ' ಚಿತ್ರವನ್ನ ನೀವು ಒಂದು ರೂಪಾಯಿಗೆ ನೋಡಬಹುದು.! ಹೌದಾ...ಅಂತ ಫುಲ್ ಖುಷಿಯಾಗುವ ಮುನ್ನ ಒಮ್ಮೆ ಈ ವಿಡಿಯೋನ ನೋಡಿಬಿಡಿ.....
ಸಿದ್ಧರಾಮಯ್ಯನವರು ಹೊಸದಾಗಿ 'ಚಲನಚಿತ್ರ ಭಾಗ್ಯ' ಘೋಷಿಸಿದ್ದಾರೆFirst time in the history of Kannada Cinema. CM Siddharamiah offers something different for #Vascodigama Movie
Posted by Movie Mint on Tuesday, October 20, 2015
ನಾವು ಹೇಳಿದಂತೆ, ನೀವು ಕೇಳಿದಂತೆ ಅಂತಹ 'ಚಲನಚಿತ್ರ ಭಾಗ್ಯ' ಏನಿಲ್ಲ. 'ವಾಸ್ಕೊಡಿಗಾಮ' ಸಿನಿಮಾದ ರಿಲೀಸ್ ಪ್ರಯುಕ್ತ ಬಿಡುಗಡೆಯಾಗಿರುವ ಈ ಪ್ರಮೋಷನಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದರಿಂದ 'ವಾಸ್ಕೊಡಿಗಾಮ' ಚಿತ್ರಕ್ಕೂ ಮೈಲೇಜ್ ಹೆಚ್ಚಾಗುತ್ತಿದೆ. [ಕಾಲೇಜು ಹುಡುಗರ ನೆಚ್ಚಿನ ಹಾಡು ಯಾವುದು ಅಂತೀರಾ?]

ಅಂದ್ಹಾಗೆ, ಕಿಶೋರ್-ಪಾರ್ವತಿ ನಾಯರ್ ಅಭಿನಯಿಸಿರುವ ಸಿನಿಮಾ 'ವಾಸ್ಕೊಡಿಗಾಮ'. ಮಧುಚಂದ್ರ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ನೋಡುವುದಕ್ಕೆ ನೀವು ರೆಡಿನಾ..?


Click it and Unblock the Notifications











