»   » 'ಕುರುಕ್ಷೇತ್ರ'ದ ಬಗ್ಗೆ ಬೇಸರಗೊಂಡಿದ್ದಾರಾ ನಟ ದರ್ಶನ್.!

'ಕುರುಕ್ಷೇತ್ರ'ದ ಬಗ್ಗೆ ಬೇಸರಗೊಂಡಿದ್ದಾರಾ ನಟ ದರ್ಶನ್.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ ಎಂದು ಹೇಳಲಾಗುತ್ತಿರುವ 'ಕುರುಕ್ಷೇತ್ರ' ಹಲವು ವಿಚಾರಗಳಿಗೆ ಸುದ್ದಿಯಾಗಿದೆ. ಒಬ್ಬೊಬ್ಬರೇ ಕಲಾವಿದರನ್ನ ಆಯ್ಕೆ ಮಾಡುತ್ತಿರುವ ಚಿತ್ರತಂಡ, ಜುಲೈ 23 ರಂದು ಸಿನಿಮಾವನ್ನ ಶುರು ಮಾಡುವ ತಯಾರಿಯಲ್ಲಿದೆ.

ಹೀಗಿರುವಾಗ, 'ಕುರುಕ್ಷೇತ್ರ'ದ ನಾಯಕ ದರ್ಶನ್ ಬೇಸರ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಈಗ ಕೇಳಿ ಬರುತ್ತಿದೆ. 'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನ ಪಾತ್ರವನ್ನ ದರ್ಶನ್ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಬಿಟ್ಟರೆ ದರ್ಶನ್ ಅವರ ಕಡೆಯಿಂದ ಬೇರೆ ಯಾವ ವಿಷ್ಯವೂ ಬಹಿರಂಗವಾಗಿರಲಿಲ್ಲ. ಈಗ 'ಕುರುಕ್ಷೇತ್ರ'ದ ಕೆಲ ವಿಚಾರಗಳ ಬಗ್ಗೆ ದಾಸ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಮುಂದೆ ಓದಿ....

'ಕುರುಕ್ಷೇತ್ರ'ದ ತಂಡದ ಬಗ್ಗೆ ಅಸಮಾಧಾನ

'ಕುರುಕ್ಷೇತ್ರ' ತಂಡದ ಬಗ್ಗೆ ದರ್ಶನ್ ಅಸಮಾಧಾನಗೊಂಡಿದ್ದಾರಂತೆ. ಇನ್ನು ಚಿತ್ರದ ಕಲಾವಿದರನ್ನ ಅಂತಿಮಗೊಳಿಸದ ಹಿನ್ನಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

'ಕುರುಕ್ಷೇತ್ರ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಕೊಟ್ರು 'ಬಿಗ್' ನ್ಯೂಸ್

'ಕುರುಕ್ಷೇತ್ರ'ದಿಂದ ದರ್ಶನ್ ಹೊರಬರ್ತಾರಾ?

ಹೀಗಾಗಿ, ಕನ್ನಡದ ಬಹುನಿರೀಕ್ಷಿತ 'ಕುರುಕ್ಷೇತ್ರ' ಚಿತ್ರದಿಂದ ದರ್ಶನ್ ಹೊರ ಬರಲಿದ್ದಾರೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ಗಿರಿಗಿಟ್ಲೆ ಹೊಡಿತಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ಸತ್ಯವೆಂಬುದು ಚಿತ್ರತಂಡವೇ ಹೇಳಬೇಕಿದೆ.

'ಕುರುಕ್ಷೇತ್ರ'ದಲ್ಲಿ ದರ್ಶನ್ ಸಂಭಾವನೆ ಕೇಳಿ ಬೆಚ್ಚಿಬಿದ್ದ ಗಾಂಧಿನಗರ.!

'ಕುರುಕ್ಷೇತ್ರ'ದ ತಯಾರಿ ಭರದಿಂದ ಸಾಗುತ್ತಿದೆ

ಈ ಅಂತೆ-ಕಂತೆಗಳ ನಡುವೆ 'ಕುರುಕ್ಷೇತ್ರ' ಚಿತ್ರದ ಪ್ರಿ-ಪ್ರೊಡಕ್ಷನ್ ಜೋರಾಗಿ ನಡೆಯುತ್ತಿದೆ. ಈಗಾಗಲೇ ಸಂಗೀತ ನಿರ್ದೇಶಕ ಹರಿಕೃಷ್ಣ ಚಿತ್ರಕ್ಕಾಗಿ ಹಾಡುಗಳನ್ನ ಸಂಯೋಜಿಸುತ್ತಿದ್ದಾರಂತೆ. ಈಗ ಆಯ್ಕೆ ಮಾಡಿಕೊಂಡಿರುವ ಕಲಾವಿದರ ಜೊತೆ ಮತ್ತಷ್ಟು ಕಲಾವಿದರ ಹುಡುಕಾಟದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ.

ದರ್ಶನ್-ಹರಿಕೃಷ್ಣ ಕಾಂಬಿನೇಷನ್ ಈಸ್ ಬ್ಯಾಕ್: 'ಕುರುಕ್ಷೇತ್ರ' ಹಾಡುಗಳು ರೆಡಿ.!

ದರ್ಶನ್ 'ದುರ್ಯೋಧನ'

'ಕುರುಕ್ಷೇತ್ರ'ದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಕರ್ಣನ ಪಾತ್ರವನ್ನ ನಿರ್ವಹಿಸುವ ಮೂಲಕ ದ್ವಿಪಾತ್ರವನ್ನ ಮಾಡಲಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.

'ಕುರುಕ್ಷೇತ್ರ'ಕ್ಕೆ ಕರ್ಣ ಫಿಕ್ಸ್: ಇದು ದರ್ಶನ್ ಬಳಗಕ್ಕೆ ಶಾಕ್ ಆದ್ರು ಖುಷಿ ವಿಚಾರವೇ.!

ರವಿಚಂದ್ರನ್ 'ಕೃಷ್ಣ'

ದರ್ಶನ್ ಕುರುಕ್ಷೇತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಶ್ರೀಕೃಷ್ಣನ ಪಾತ್ರವನ್ನ ನಿರ್ವಹಿಸಲಿದ್ದಾರೆ. ಇದಕ್ಕಾಗಿ ಪೂರ್ವ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ.

ಯಾರು ಏನೇ ಹೇಳಿದ್ರೂ, ಕುರುಕ್ಷೇತ್ರದಲ್ಲಿ 'ನಾನೇ' ಕೃಷ್ಣ.!

ಇತರೆ ಕಲಾವಿದರು ಯಾರು?

ಇನ್ನುಳಿದಂತೆ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರು ದ್ರೋಣಾಚಾರ್ಯರಾಗಿ ಬಣ್ಣ ಹಚ್ಚಲಿದ್ದು, ಪ್ರಣಯರಾಜ ಶ್ರೀನಾಥ್ ಅವರು ಧೃತರಾಷ್ಟ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇಷ್ಟು ಪಾತ್ರವನ್ನ ಬಿಟ್ಟರೇ, ಬೇರೆ ಯಾವ ಪಾತ್ರಗಳು ಅಂತಿಮವಾಗಿಲ್ಲ.

ದರ್ಶನ್ 'ಕುರುಕ್ಷೇತ್ರ'ಕ್ಕೆ ಮಹಾಗುರು ದ್ರೋಣಾಚಾರ್ಯ ಸಿಕ್ಕಾಯ್ತು.!

English summary
Some of the reports say that Challenging Star Darshan is unhappy with the team as they are yet finalize the star cast of the Kurukshetra movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada