For Quick Alerts
  ALLOW NOTIFICATIONS  
  For Daily Alerts

  ಅವಳ್ ಬಿಟ್ಟು, ಇವಳ್ ಬಿಟ್ಟು ಇನ್ನೊಬ್ಬಳ ಜೊತೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.!

  By Bharath Kumar
  |

  ಟೀಮ್ ಇಂಡಿಯಾದ ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ತೆಲುಗು ನಟಿ ರಾಶಿ ಖನ್ನಾ ಲವ್-ಅಫೇರ್ ಸುದ್ದಿ ನಂತರ ಇನ್ನೊಬ್ಬ ಆಟಗಾರನ ಡೇಟಿಂಗ್ ಸಮಾಚಾರ ಚರ್ಚೆಯಾಗುತ್ತಿದೆ. ಭಾರತದ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನಟಿ ಎಲಿ ಅವ್ರಾಮ್ ಹೆಸರು ತಳುಕು ಹಾಕಿಕೊಂಡಿದೆ.

  ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಪಾಂಡ್ಯ ಮತ್ತು ನಟಿ ಎಲಿ ಅವ್ರಾಮ್ ಅವರ ಸಂಬಂಧದ ಬಗ್ಗೆ ಸುದ್ದಿಯಾಗುತ್ತಿದ್ದು, ಪದೇ ಪದೇ ಒಟ್ಟಿಗೆ ಕಾಣಿಸಿಕೊಂಡು ಮಾಧ್ಯಮಗಳಿಗೆ ಆಹಾರವಾಗುತ್ತಿದ್ದಾರೆ.

  ಭಾನುವಾರ ರಾತ್ರಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿದ್ದ ಸಲೂನ್ ಶಾಪ್ ಬಳಿ ಹಾರ್ದಿಕ್ ಪಾಂಡ್ಯ ಮತ್ತು ನಟಿ ಎಲಿ ಅವ್ರಾಮ್ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಬೇರೆ ಬೇರೆ ಕಾರುಗಳಲ್ಲಿ ಸ್ಥಳಕ್ಕೆ ಆಗಮಿಸಿದ ಹಾರ್ದಿಕ್ ಹಾಗೂ ಎಲ್ಲಿ ಅವ್ರಾಮ್, ಕ್ಯಾಮೆರಾ ಕಣ್ಣಿಗೆ ಜೊತೆಯಾಗಿ ಸೆರೆಯಾಗುತ್ತಿದ್ದಂತೆ ಕಂಗಾಲಾಗಿದ್ದಾರೆ. ಈ ವೇಳೆ ಎಲಿ ಅವ್ರಾಮ್ ಮುಖ ಮುಚ್ಚಿಕೊಂಡ ಘಟನೆ ಕೂಡ ನಡೆಯಿತು.

  ಭಾರತದ ಈ ಸ್ಟಾರ್ ಕ್ರಿಕೆಟರ್ ಜೊತೆ ಪರಿಣಿತಿ ಚೋಪ್ರಾ ಲವ್ವಿ-ಡವ್ವಿ.!ಭಾರತದ ಈ ಸ್ಟಾರ್ ಕ್ರಿಕೆಟರ್ ಜೊತೆ ಪರಿಣಿತಿ ಚೋಪ್ರಾ ಲವ್ವಿ-ಡವ್ವಿ.!

  ಅಂದ್ಹಾಗೆ, ಹಾರ್ದಿಕ್ ಪಾಂಡ್ಯ ಮತ್ತು ಎಲಿ ಅವ್ರಾಮ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಕೂಡ ಹಲವು ಬಾರಿ ಇಬ್ಬರು ಕ್ಯಾಮೆರಾ ಕಣ್ಣಿಗೆ ಜೋಡಿಯಾಗಿ ಬಿದ್ದಿದ್ದಾರೆ. ಮುಂದೆ ಓದಿ....

  ಸಹೋದರನ ಮದುವೆಯಲ್ಲಿ ಮಿಂಚು

  ಸಹೋದರನ ಮದುವೆಯಲ್ಲಿ ಮಿಂಚು

  ಕಳೆದ ಡಿಸೆಂಬರ್ ನಲ್ಲಿ ನಡೆದ ಹಾರ್ದಿಕ್ ಸೋದರ ಕೃಣಾಲ್ ಪಾಂಡ್ಯ ಮದುವೆ ಸಮಾರಂಭದಲ್ಲಿಯೂ ಎಲ್ಲಿ ಅವ್ರಾಮ್ ಭಾಗಿಯಾಗಿದ್ದರು. 27 ವರ್ಷದ ಎಲ್ಲಿ ಅವ್ರಾಮ್ ಹಾಗೂ 24 ವರ್ಷದ ಹಾರ್ದಿಕ್ ಪಾಂಡ್ಯ ಜೋಡಿಯಾಗಿ ಮದುವೆ ಕಾರ್ಯಕ್ರಮದಲ್ಲಿ ಎಲ್ಲರ ಕಣ್ಣು ಕುಕ್ಕಿದ್ದಾರೆ.

  ಶೂಟಿಂಗ್ ಸೆಟ್ ನಲ್ಲಿ ಹಾಜರ್

  ಶೂಟಿಂಗ್ ಸೆಟ್ ನಲ್ಲಿ ಹಾಜರ್

  ಅದಾದ ನಂತರ ಗೋರೆಗಾಂವ್ ನ ಫಿಲ್ಮಿಸ್ತಾನ್ ಶೂಟಿಂಗ್ ಸೆಟ್ ನಲ್ಲಿ ಹಾರ್ದಿಕ್ ಪಾಂಡ್ಯ ಜಾಹೀರಾತಿನ ಶೂಟಿಂಗ್ ನಡೆಯುತ್ತಿತ್ತು. ಅದೇ ಶೂಟಿಂಗ್ ಸ್ಥಳದಲ್ಲಿ ಎಲ್ಲಿ ಅವ್ರಾಮ್ ಆಗಮಿಸಿ ಇಬ್ಬರ ಸಂಬಂಧದ ಬಗ್ಗೆ ಪ್ರಶ್ನೆ ಹುಟ್ಟುಹಾಕಿದ್ದರು.

  ಏರ್ ಪೋರ್ಟ್ ಗೆ ಡ್ರಾಪ್

  ಏರ್ ಪೋರ್ಟ್ ಗೆ ಡ್ರಾಪ್

  ಇನ್ನು ಇದೇ ತಿಂಗಳು 5 ರಂದು ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಏರ್ ಪೋರ್ಟ್‌ಗೆ ಕಾರ್‌ ನಲ್ಲಿ ಎಲಿ ಅವ್ರಾಮ್ ಡ್ರಾಪ್ ನೀಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.

  ಪರಿಣೀತಿ ಚೋಪ್ರಾ ಜೊತೆಯಲ್ಲೂ ಗಾಸಿಪ್.!

  ಪರಿಣೀತಿ ಚೋಪ್ರಾ ಜೊತೆಯಲ್ಲೂ ಗಾಸಿಪ್.!

  ಹಾರ್ದಿಕ್ ಪಾಂಡ್ಯ ಹಾಗೂ ನಟಿಯರ ಹೆಸರು ಒಟ್ಟಿಗೆ ಕೇಳಿ ಬಂದಿರೋದು ಇದೇ ಮೊದಲಲ್ಲ. ಈ ಹಿಂದೆ ಹಾರ್ದಿಕ್ ಹಾಗೂ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಟ್ವಿಟ್ಟರ್ ನಲ್ಲಿ ಮಾತುಕಥೆ ನಡೆಸಿ ಚರ್ಚೆಯಾಗಿದ್ದರು. ನಂತರ ಮಾಡೆಲ್ ಲಿಸಾ ಶರ್ಮಾ ಜೊತೆ ಪಾಂಡ್ಯ ಹೆಸರು ಸೇರಿತ್ತು. ಆದ್ರೆ, ಎಲಿ ಅವ್ರಾಮ್ ಜೊತೆ ನಿರಂತರವಾಗಿ ಪಾಂಡ್ಯ ಹೆಸರು ಅಂಟಿಕೊಂಡಿದೆ. ಇದಕ್ಕೆ ಉತ್ತರ ಅವರೇ ನೀಡಬೇಕು.

  English summary
  Actress and model Elli AvrRam has been long been rumoured to be dating Indian cricketer Hardik Pandya. Though Elli AvRam and Hardik Pandya have maintained their silence on their relationship status, their frequent spottings together reveal a lot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X