»   » ದರ್ಶನ್ ವೈವಾಹಿಕ ಬದುಕಿನ ಬಗ್ಗೆ ಊರೆಲ್ಲಾ ಸುದ್ದಿ! ಸುಳ್ಳೋ? ನಿಜವೋ?

ದರ್ಶನ್ ವೈವಾಹಿಕ ಬದುಕಿನ ಬಗ್ಗೆ ಊರೆಲ್ಲಾ ಸುದ್ದಿ! ಸುಳ್ಳೋ? ನಿಜವೋ?

Posted By:
Subscribe to Filmibeat Kannada

'ದರ್ಶನ್ ದಂಪತಿ ಕುರಿತು ಶೀಘ್ರವೇ ಒಳ್ಳೆ ಸುದ್ದಿ ನೀಡುವೆ' ಅಂತ ರೆಬೆಲ್ ಸ್ಟಾರ್ ಅಂಬರೀಶ್ ಮಾಧ್ಯಮಗಳ ಮುಂದೆ ಹೇಳಿದ್ರು. ಅದು ಆಗಷ್ಟೇ ದರ್ಶನ್ ಜೊತೆ ಮಾತುಕತೆ ನಡೆಸಿ....

ಅಂಬರೀಶ್ ಮನೆ ಅಂಗಳಕ್ಕೆ ದರ್ಶನ್ ದಾಂಪತ್ಯ ಕಲಹ ಶಿಫ್ಟ್ ಆಗಿದ್ರಿಂದ ಪ್ರಕರಣ ಸುಖಾಂತ್ಯ ಕಾಣವುದು ಖಚಿತ. ಅದ್ರಲ್ಲೂ, ಟಿವಿ ಚಾನೆಲ್ ಗಳಲ್ಲಿ ಅಂಬರೀಶ್ ಆಡಿದ ಮಾತಗಳನ್ನ ಕೇಳಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಮತ್ತೆ ಒಂದಾಗುವುದು ಗ್ಯಾರೆಂಟಿ ಅಂತ ಅಭಿಮಾನಿಗಳು ಭಾವಿಸಿದ್ರು. ['ದರ್ಶನ್ ದಂಪತಿ ಕುರಿತು ಶೀಘ್ರವೇ ಒಳ್ಳೆಯ ಸುದ್ದಿ ನೀಡುವೆ' - ಅಂಬರೀಶ್]

ಆದ್ರೀಗ, ಊರೆಲ್ಲಾ ಹರಿದಾಡುತ್ತಿರುವ ಸುದ್ದಿ ಕೇಳಿದ್ರೆ, ದರ್ಶನ್ ಅಭಿಮಾನಿಗಳಿಗೆ ಶಾಕ್ ಆಗುವುದು ಪಕ್ಕಾ. ಅಂತಹ ಸುದ್ದಿ ಏನು ಅಂತ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ.....

ದರ್ಶನ್-ವಿಜಯಲಕ್ಷ್ಮಿ ಒಂದಾಗೋದು ಡೌಟು?

'ಇನ್ಮೇಲೆ ಪತ್ನಿ ಜೊತೆ ಜಗಳ ಆಡೋಲ್ಲ. ಅಂಬರೀಶ್ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ' ಅಂತ ಪೊಲೀಸರ ಮುಂದೆ ದರ್ಶನ್ ಹೇಳಿಕೆ ನೀಡಿದ್ರು. ಆದ್ರೀಗ ಸ್ಫೋಟಗೊಂಡಿರುವ ಸುದ್ದಿ ಕೇಳಿದ್ರೆ, ದರ್ಶನ್-ಪತ್ನಿ ವಿಜಯಲಕ್ಷ್ಮಿ ಒಂದಾಗುವುದು ಡೌಟೇ.! ['ಇನ್ಮುಂದೆ ಪತ್ನಿ ಜೊತೆ ಗಲಾಟೆ ಮಾಡಲ್ಲ' ಎಂದ ನಟ ದರ್ಶನ್]

ವಿಚ್ಛೇದನಕ್ಕೆ ಮುಂದಾಗಿದ್ದಾರಾ ದರ್ಶನ್?

ಪತ್ರಿಕೆಗಳಲ್ಲಿ ವರದಿ ಆಗಿರುವ ಪ್ರಕಾರ, ವಿಚ್ಛೇದನ ಪಡೆಯಲು ದರ್ಶನ್ ದಂಪತಿ ಮುಂದಾಗಿದ್ದಾರೆ. [ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

40 ಕೋಟಿ ಜೀವನಾಂಶ ನೀಡ್ತಾರಾ ದರ್ಶನ್?

ಪತ್ನಿ ವಿಜಯಲಕ್ಷ್ಮಿ ರವರಿಂದ ವಿಚ್ಛೇದನ ಪಡೆಯಲು ನಟ ದರ್ಶನ್ ಬರೋಬ್ಬರಿ 40 ಕೋಟಿ ರೂಪಾಯಿ ಜೀವನಾಂಶ ನೀಡಲಿದ್ದಾರೆ ಅಂತ ಕರ್ನಾಟಕದ ಜನಪ್ರಿಯ ಪತ್ರಿಕೆಗಳು ವರದಿ ಮಾಡಿವೆ. [ಬ್ರೇಕಿಂಗ್ ನ್ಯೂಸ್ - ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ರಾ ದರ್ಶನ್?]

ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿ!

ಪತ್ನಿ ವಿಜಯಲಕ್ಷ್ಮಿಗೆ 40 ಕೋಟಿ ರೂಪಾಯಿ ನೀಡಿ ವಿಚ್ಛೇದನ ಪಡೆಯಲು ದರ್ಶನ್ ಮುಂದಾಗಿರುವ ಸುದ್ದಿ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿ ಇಲ್ಲಿದೆ.

ವಿಜಯ ಕರ್ನಾಟಕದಲ್ಲೂ ಅದೇ ಸುದ್ದಿ!

ದರ್ಶನ್ ದಾಂಪತ್ಯ ಬದುಕು ವಿಚ್ಛೇದನ ಹಂತ ತಲುಪಿರುವ ಬಗ್ಗೆ ವಿಜಯ ಕರ್ನಾಟಕ ಕೂಡ ವರದಿ ಪ್ರಕಟಿಸಿದೆ. ಅದರ ಲಿಂಕ್ ಇಲ್ಲಿದೆ.

ಕನ್ನಡಪ್ರಭದಲ್ಲೂ ಬಂದಿದೆ!

ಈ ವಿಚಾರದ ಬಗ್ಗೆ ಕನ್ನಡಪ್ರಭ ಪ್ರಕಟಿಸಿರುವ ವರದಿಯ ಲಿಂಕ್ ಇಲ್ಲಿದೆ.

'ಲಂಕೇಶ್ ಪತ್ರಿಕೆ'ಯಲ್ಲಿ ಪ್ರಕಟವಾದ ಸುದ್ದಿ!

ವಿಚ್ಛೇದನಕ್ಕೆ ದರ್ಶನ್ ಮುಂದಾಗಿರುವ ಬಗ್ಗೆ ಹಾಗೂ ಪತ್ನಿ ವಿಜಯಲಕ್ಷ್ಮಿಗೆ 40 ಕೋಟಿ ರೂಪಾಯಿ ಕೊಡುವ ಬಗ್ಗೆ ಮೊದಲು ವರದಿ ಮಾಡಿದ್ದು ಕನ್ನಡ ವಾರ ಪತ್ರಿಕೆ 'ಲಂಕೇಶ್ ಪತ್ರಿಕೆ'.

ಹಾಗಾದ್ರೆ ಅಂಬಿ ಮಾತು?

''ಪ್ರಕರಣ ಸುಖಾಂತ್ಯ ಕಾಣಲಿದೆ. ಅವರು ಚೆನ್ನಾಗಿರಲಿ ಅನ್ನೋದೇ ನಮ್ಮ ಹಾರೈಕೆ. ಪಾಸ್ಟ್ ಈಸ್ ಪಾಸ್ಟ್'' ಅಂತ ಅಂಬರೀಶ್ ಹೇಳಿದ್ದರು. ಈಗ ಊರೆಲ್ಲಾ ಸುದ್ದಿ ಆಗಿರುವುದೇ ನಿಜ ಆದ್ರೆ, ಅಂಬಿ ಹೇಳಿದ್ದು?

ಪತ್ನಿ ಮೇಲೆ ಗಂಭೀರ ಆರೋಪ ಮಾಡಿದ್ರು ದರ್ಶನ್!

'ಪತ್ನಿಗೆ ಬಾಯ್ ಫ್ರೆಂಡ್ ಇದ್ದಾನೆ. ತಮ್ಮ ಮಗು ತಮಗೆ ಜನಿಸಿದ್ದು ಅಲ್ಲ' ಅಂತ ಖಾಸಗಿ ವಾಹಿನಿಯೊಂದರಲ್ಲಿ ದರ್ಶನ್ ತಮ್ಮ ಪತ್ನಿ ನಡತೆ ಬಗ್ಗೆ ಗಂಭೀರ ಆರೋಪ ಮಾಡಿದ್ದರು.

ಸವಾಲು ಹಾಕಿದ್ದ ಪತ್ನಿ

ದರ್ಶನ್ ನೀಡಿದ ಹೇಳಿಕೆಗೆ ''ಮಗನ ಡಿ.ಎನ್.ಎ ಟೆಸ್ಟ್ ಗೆ ಸಿದ್ಧ'' ಅಂತ ಪತ್ನಿ ವಿಜಯಲಕ್ಷ್ಮಿ ಸವಾಲು ಹಾಕಿದ್ದರು.

ವರ್ಷಗಳ ಹಿಂದೆಯೇ ವಿಚ್ಛೇದನದ ಪ್ಲಾನ್ ಇತ್ತು!

ಎರಡು ವರ್ಷಗಳ ಹಿಂದೆಯೇ ಪತ್ನಿ ವಿಜಯಲಕ್ಷ್ಮಿಗೆ ದರ್ಶನ್ ವಿಚ್ಛೇದನ ನೀಡಲು ಮುಂದಾಗಿದ್ದರು. ಆದ್ರೆ, ಆಸ್ತಿ ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ವಿಚ್ಛೇದನ ವಿಫಲ ಆಯ್ತು ಅಂತ ಖಾಸಗಿ ವಾಹಿನಿಗಳು ವರದಿ ಮಾಡಿದ್ದವು.

ಈಗ ವಿಚ್ಛೇದನ ನೀಡ್ತಾರಾ?

ಮೊನ್ನೆ ಮೊನ್ನೆಯಷ್ಟೇ ಖಾಸಗಿ ವಾಹಿನಿಗಳಲ್ಲಿ ವಿಜಯಲಕ್ಷ್ಮಿ ಮಾತನಾಡಿದ ಧಾಟಿ ನೋಡಿದ್ರೆ, ವಿಚ್ಛೇದನ ನೀಡುವುದು ಅನುಮಾನ. ಅಲ್ಲದೆ, ಡಿವೋರ್ಸ್ ಬಗ್ಗೆ ಪ್ರಶ್ನೆ ಕೇಳಿದಾಗಲ್ಲೆಲ್ಲಾ, 'ಅದರ ಬಗ್ಗೆ ಕಾಮೆಂಟ್ ಮಾಡಲ್ಲ' ಎನ್ನುತ್ತಿದ್ದರು ವಿಜಯಲಕ್ಷ್ಮಿ.

ದರ್ಶನ್ ತುಟಿಕ್ ಪಿಟಿಕ್ ಎಂದಿಲ್ಲ!

ತಮ್ಮ ವೈವಾಹಿಕ ಜೀವನದ ಬಗ್ಗೆ ಇಷ್ಟೆಲ್ಲಾ ಸುದ್ದಿ ಆಗುತ್ತಿದ್ದರೂ, ದರ್ಶನ್ ಮಾತ್ರ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. 'ಜಗ್ಗು ದಾದಾ' ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

ನಿಜವೋ? ಸುಳ್ಳೋ?

ದರ್ಶನ್ ದಂಪತಿ ವಿಚ್ಛೇದನಕ್ಕೆ ಮುಂದಾಗಿರುವ ಬಗ್ಗೆ ಪತ್ರಿಕೆಗಳು ವರದಿ ಮಾಡಿವೆ. ಆದ್ರೆ, ಅದರ ಬಗ್ಗೆ ದರ್ಶನ್ ಆಗಲಿ, ವಿಜಯಲಕ್ಷ್ಮಿ ಆಗಲಿ ಕನ್ಫರ್ಮ್ ಮಾಡಿಲ್ಲ. ಹೀಗಾಗಿ, ಈಗಲೇ ಈ ವಿಚಾರ ಸತ್ಯ ಎನ್ನುವುದು ಕಷ್ಟ. ಸುಳ್ಳು ಎನ್ನುವುದೂ ಕಷ್ಟ.!

English summary
According to the reports, Kannada Actor Darshan and his wife Vijayalakshmi are headed towards divorce and Darshan could be shelling out Rs 40 crore to his wife as divorce settlement.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada