»   » ದರ್ಶನ್ 'ಅಂಬರೀಶ'ನಿಗೆ ಥಿಯೇಟರ್ ಸಮಸ್ಯೆ?

ದರ್ಶನ್ 'ಅಂಬರೀಶ'ನಿಗೆ ಥಿಯೇಟರ್ ಸಮಸ್ಯೆ?

Posted By:
Subscribe to Filmibeat Kannada

'ಬಾಕ್ಸಾಫೀಸ್ ಸುಲ್ತಾನ್' ಅಂತ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ 'ದರ್ಶನ್'ಗೆ ಇಂದು ಥಿಯೇಟರ್ ಗಳು ಸಿಕ್ತಿಲ್ಲ ಅಂದ್ರೆ ನೀವು ನಂಬಲೇಬೇಕು. ನಾಡಪ್ರಭು ಕೆಂಪೇಗೌಡನ ಕಥೆಯನ್ನ ಹೇಳುವುದಕ್ಕೆ ಹೊರಟಿರುವ 'ಅಂಬರೀಶ'ನಿಗೆ ಕೆ.ಜಿ.ರೋಡ್ ನಲ್ಲೇ ಥಿಯೇಟರ್ ಸಿಕ್ತಿಲ್ಲ ಅನ್ನೋದು ಗಾಂಧಿನಗರದ ದುರಂತ! [ನವೆಂಬರ್ 20ಕ್ಕೆ ಅಂಬರೀಶ ರಿಲೀಸ್]

ಗಾಂಧಿನಗರದಲ್ಲಿರುವ ಥಿಯೇಟರ್ ಗಳೇ ಮೂರು ಮತ್ತೊಂದು. ಅಂತದ್ರಲ್ಲಿ ಸಾಗರ್ ಸೇರಿದಂತೆ ಕೆಲ ಥಿಯೇಟರ್ ಗಳು ನೆಲಕಚ್ಚಿವೆ. ನರ್ತಕಿ ಚಿತ್ರಮಂದಿರದಲ್ಲಿ 'ಬಹದ್ದೂರ್' ಆರ್ಭಟ ಜೋರಾಗಿದ್ರೆ, ಸಂತೋಷ್ ನಲ್ಲಿ 'ಪವರ್' ಕಟ್ ಆಗಿಲ್ಲ. 'ಅಭಿಮನ್ಯು' ಅನುಪಮಾ ಜೊತೆಯಲ್ಲೇ ಸಾಗ್ತಿದ್ರೆ, ಭೂಮಿಕಾ ದಲ್ಲಿ ಅಣ್ಣಾವ್ರ 'ಕಸ್ತೂರಿ ನಿವಾಸ' ಮಿಂಚ್ತಿದೆ.

Darshan's Ambareesha to face theatre problem

ಎಲ್ಲಾ ಚಿತ್ರಗಳ ಕಲೆಕ್ಷನ್ ಚೆನ್ನಾಗಿರುವುದರಿಂದ ಯಾರೂ ಥಿಯೇಟರ್ ಬಿಟ್ಟುಕೊಡುವುದಕ್ಕೆ ರೆಡಿಯಿಲ್ಲ. ''ಮೇನ್ ಥಿಯೇಟರ್ ಸಿಗ್ಲಿಲ್ಲ ಅಂದ್ರೇನು. ಕೆ.ಜಿ.ರೋಡ್ ನಲ್ಲಿ ರಿಲೀಸ್ ಮಾಡದೆ, ಬೇರೆಲ್ಲಾ ಕಡೆ ರಿಲೀಸ್ ಮಾಡ್ತೀವಿ'' ಅಂತ 'ಅಂಬರೀಶ' ರಿಲೀಸ್ ಜವಾಬ್ದಾರಿ ಹೊತ್ತಿರುವ ಮಲ್ಲಿಕಾರ್ಜುನ್ 'ಫಿಲ್ಮಿಬೀಟ್ ಕನ್ನಡ'ಕ್ಕೆ ತಿಳಿಸಿದರು.

''ಏನೇ ಆದ್ರೂ ನವೆಂಬರ್ 20ಕ್ಕೆ 'ಅಂಬರೀಶ' ಬಿಡುಗಡೆಯಾಗ್ತಿದೆ. ಯಾವುದೇ ತೊಂದರೆಯಿಲ್ಲ. ಮೇನ್ ಥಿಯೇಟರ್ ಸಿಗಲಿ ಬಿಡಲಿ, ನಾವು ಎಲ್ಲದಕ್ಕೂ ರೆಡಿಯಿದ್ದೀವಿ'' ಅಂತ ನಿರ್ದೇಶಕ ಮಹೇಶ್ ಸುಖಧರೆ ಎನ್ನುತ್ತಾರೆ.

ಥಿಯೇಟರ್ ಸಮಸ್ಯೆಯನ್ನ ಬಗೆಹರಿಸುವುದಕ್ಕೆ ಮಹೇಶ್ ಸುಖಧರೆ ಈಗಾಗಲೇ ಅಂಬಿ ಮನೆಗೆ ತೆರಳಿದ್ದಾರೆ. 'ಅಂಬರೀಶ' ದರ್ಬಾರ್ ಸುಗಮವಾಗಿ ನಡೆಯೋಕೆ ಅಂಬಿ ಏನು ನಿರ್ಧಾರ ಕೈಗೊಳ್ತಾರೋ? ಗುರುರಾಯರೇ ಆಶೀರ್ವಾದ ಮಾಡ್ಬೇಕು! (ಫಿಲ್ಮಿಬೀಟ್ ಕನ್ನಡ)

English summary
Sandalwood's most awaited movie 'Ambareesha' which is releasing on november 20th to fac theatre problem. Since, the producers are addicted to the concept of main theatre sytem, the distributers of the running movies are not making way to Darshan starrer Ambareesha. Inorder to break this sytem Ambareesha team has decided to not to release the movie in K.G.Road. Mahesh Sukhadare, director of the movie is presently in talks with Ambareesh to settle this issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada