»   » 'ದಾಸ' ದರ್ಶನ್ 'ದಾದಾ'ಗಿರಿಗೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ.!

'ದಾಸ' ದರ್ಶನ್ 'ದಾದಾ'ಗಿರಿಗೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ.!

Posted By:
Subscribe to Filmibeat Kannada

''ದುನಿಯಾ ರೇ...ದುನಿಯಾ...ಜಗ್ಗು ದುನಿಯಾ ರೇ....'' ಎಂಬಂತೆ ಸ್ಯಾಂಡಲ್ ವುಡ್ ನಲ್ಲೀಗ ಏನಿದ್ರೂ 'ಜಗ್ಗುದಾದಾ' ದುನಿಯಾ....ದರ್ಶನ್ ಹವಾ...!

ಹೌದು, ಮೊನ್ನೆ ಶುಕ್ರವಾರವಷ್ಟೇ ಬಿಡುಗಡೆ ಆಗಿರುವ 'ಜಗ್ಗುದಾದಾ' ಸಿನಿಮಾ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರು ಎಂಬ ಭೇದಭಾವ ಇಲ್ಲದೆ, ಇಡೀ ಫ್ಯಾಮಿಲಿ ಕೂತು 'ಜಗ್ಗುದಾದಾ' ಮದುವೆ ಸರ್ಕಸ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. [ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ]


darshan-starrer-jaggu-dada-collects-rs-7-crore-two-days

ಎಲ್ಲೆಡೆ ತುಂಬಿದ ಚಿತ್ರಮಂದಿರ ಪ್ರದರ್ಶನ ಕಾಣುತ್ತಿರುವ 'ಜಗ್ಗುದಾದಾ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಅದಕ್ಕೆ ಬಿಡುಗಡೆ ಆದ ಮೊದಲೆರಡು ದಿನ 'ಜಗ್ಗುದಾದಾ' ಮಾಡಿರುವ ಕಲೆಕ್ಷನ್ ಸಾಕ್ಷಿ..!


ಅಂದ್ಹಾಗೆ, ಶುಕ್ರವಾರ ಹಾಗೂ ಶನಿವಾರ 'ಜಗ್ಗುದಾದಾ' ಕಮಾಯಿ ಮಾಡಿರುವ ದುಡ್ಡು ಎಷ್ಟು ಅಂತ ಕೇಳಿದ್ರಾ.? ಮೂಲಗಳ ಪ್ರಕಾರ, ಬರೋಬ್ಬರಿ ಏಳು ಕೋಟಿಗೂ ಹೆಚ್ಚು..!


ನಿನ್ನೆ (ಭಾನುವಾರ) ಕಲೆಕ್ಷನ್ ಇನ್ನೂ ಬಹಿರಂಗವಾಗಿಲ್ಲ. ಅಭಿಮಾನಿಗಳಿಂದ 'ಬಾಕ್ಸ್ ಆಫೀಸ್ ಸುಲ್ತಾನ್' ಅಂತ ಬಿರುದು ಪಡೆದುಕೊಂಡಿರುವ ದರ್ಶನ್, 'ಜಗ್ಗುದಾದಾ' ಮೂಲಕ ಮತ್ತೊಮ್ಮೆ ಗಲ್ಲಪೆಟ್ಟಿಗೆಯಲ್ಲಿ ಘರ್ಜಿಸಿದ್ದಾರೆ.


'ಜಗ್ಗುದಾದಾ' ಚಿತ್ರದಲ್ಲಿ ದರ್ಶನ್ ಜೊತೆ ದೀಕ್ಷಾ ಸೇಠ್ ಡ್ಯುಯೆಟ್ ಹಾಡಿದ್ದಾರೆ. ಪ್ರೇತವಾಗುವ ತಾತನಾಗಿ ರವಿಶಂಕರ್ ಮಿಂಚಿದ್ದಾರೆ. ರಾಘವೇಂದ್ರ ಹೆಗಡೆ ನಿರ್ಮಾಣದ ಜೊತೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

English summary
Kannada Actor, Challenging Star Darshan starrer 'Jaggu Dada' has collected Rs.7 Crore in just two days. The film is directed by Raghavendra Hegde.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada